ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಕುರಿತು ಜಿಪಂ ಸಿಇಒ ವರ್ಣಿತ್​ ನೇಗಿ ಅಧಿಕಾರಿಗಳೊಂದಿಗೆ ಕೊಪ್ಪಳದಲ್ಲಿ ಸಭೆ ನಡೆಸಿದರು. ಡಿಎಚ್​ಒ ಡಾ.ಟಿ.ಲಿಂಗರಾಜು, ಡಾ.ರವೀಂದ್ರನಾಥ ಎಂ.ಎಚ್​., ಡಾ.ನಂದಕುಮಾರ, ಡಾ.ಶಶಿಧರ, ಡಾ.ಪ್ರಕಾಶ ಎಚ್​., ಡಾ.ಕುಮಾರಸ್ವಾಮಿ ಗೋನಾಳ ಇದ್ದರು.  
ಕೊಪ್ಪಳ

ಎಲ್ಲ ಮಕ್ಕಳಿಗೂ ಜಂತು ನಿವಾರಕ ಮಾತ್ರೆ ನೀಡಿ

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸಿಇಒ ವರ್ಣಿತ್​ ನೇಗಿ ಸೂಚನೆ
ಕೊಪ್ಪಳ:ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ. ಎಲ್ಲ ಅರ್ಹ ಮಕ್ಕಳಿಗೆ ಜಂತುಹುಳು ನಿವಾರಕ ಮಾತ್ರೆ ನೀಡಿ ಎಂದು ಜಿಪಂ ಸಿಇಒ ವರ್ಣಿತ್​ ನೇಗಿ ಸೂಚಿಸಿದರು.
ನಗರದ ಜಿಪಂ ಸ್ಥಾಯಿ ಸಮಿತಿ ಕೊಠಡಿಯಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಕುರಿತು ಇತ್ತೀಚೆಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಫೆ.10ರಂದು ಕಾರ್ಯಕ್ರಮವಿದ್ದು ಸಮರ್ಪಕವಾಗಿ ಆಯೋಜಿಸಿ. ಎಲ್ಲ ಇಲಾಖೆಗಳು ಆರೋಗ್ಯಾಧಿಕಾರಿಗಳೊಂದಿಗೆ ಸಹಕರಿಸಿ. ಜಂತುನಿವಾರಕ ಮಾತ್ರೆಯಿಂದ ಯಾವುದೇ ಮಗು ವಂಚಿತವಾಗಬಾರದು. ಅರ್ಹ ಮಗುವಿಗೆ ಕಡ್ಡಾಯವಾಗಿ ನೀಡಿ. ಜಂತು ರಹಿತ ಮಗು ದೇಶದ ಸಂಪತ್ತು. ಮಕ್ಕಳ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಆರೋಗ್ಯವಂತ ಸಮಾಜ ನಿಮಾರ್ಣಕ್ಕೆ ಸಹಕರಿಸಿ ಎಂದರು.
ಡಿಎಚ್​ಒ ಡಾ.ಟಿ.ಲಿಂಗರಾಜು ಮಾತನಾಡಿ, ಮಕ್ಕಳಲ್ಲಿ ಮತ್ತು ಹದಿ-ಹರೆಯದವರಲ್ಲಿ ಕಂಡಬರುವ ಜಂತುಭಾದೆ, ಅಪೌಷ್ಠಿಕತೆ ಮತ್ತು ರಕ್ತಹಿನತೆ ತಡೆಗಟ್ಟುವುದು ಕಾರ್ಯಕ್ರಮದ ಉದ್ದೇಶ. ದೈಹಿಕ&ಮಾನಸಿಕ ಆರೋಗ್ಯ ಸದೃಢವಾಗಿರಲು ಪ್ರತಿ 6 ತಿಂಗಳಿಗೊಮ್ಮೆ ಜಂತು ನಿವಾರಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಆರ್​ಸಿಎಚ್​ ಅಧಿಕಾರಿ ಡಾ.ಪ್ರಕಾಶ ವಿ. ಮಾತನಾಡಿ, 1ರಿಂದ 19ವರ್ಷದೊಳಗಿನ ಎಲ್ಲ ಮಕ್ಕಳಿಗೂ ಜಂತುನಿವಾರಕ ಅಲ್ಬೆಂಡಾಜೋಲ್​ ಮಾತ್ರೆ ನೀಡಲಾಗುವುದು. ಅಂಗನವಾಡಿ ಕೇಂದ್ರದ ಮಕ್ಕಳಿಗೆ, ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರೆ ಕೊಡಲಾಗುವುದು. ಫೆ.10ರಂದು ಗೈರಾಗುವ ಮಕ್ಕಳಿಗೆ ಫೆ.16ರಂದು ಪುನ@ ನೀಡಲಾಗುವುದು. ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ಅಂಗನವಾಡಿ ಮೂಲಕ ಮಾತ್ರೆ ತಲುಪಿಸಲಾಗುವುದು. 1 ರಿಂದ 2 ವರ್ಷದ ಮಕ್ಕಳಿಗೆ ಅರ್ಧಮಾತ್ರೆ, 2 ವರ್ಷ ಮೇಲ್ಪಟ್ಟವರಿಗೆ ಪೂರ್ಣ ಮಾತ್ರೆ ನೀಡಬೇಕು ಎಂದು ವಿವರಿಸಿದರು.
ಡಾ.ರವೀಂದ್ರನಾಥ ಎಂ.ಎಚ್​., ಡಾ.ನಂದಕುಮಾರ, ಡಾ.ಶಶಿಧರ, ಡಾ.ಪ್ರಕಾಶ ಎಚ್​., ಡಾ.ಕುಮಾರಸ್ವಾಮಿ ಗೋನಾಳ ಇತರ ಇಲಾಖೆ ಅಧಿಕಾರಿಗಳಿದ್ದರು.