ಗಂಗಾವತಿಯಲ್ಲಿ ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ ಜಿಲ್ಲಾ ಘಟಕದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಮಹಿಳಾ ಜಾಗೃತಿ ಮೆರವಣಿಗೆ ನಡೆಯಿತು. ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ ರಾಷ್ಟ್ರೀಯ ಅಧ್ಯಕ್ಷೆ ಡಾ.ರತಿರಾವ್ ಮೈಸೂರು, ರಾಜ್ಯಾಧ್ಯಕ್ಷೆ ನಿರ್ಮಲಾ, ನಿರ್ದೇಶಕಿ ಕೆ.ಆರ್.ಸುಮತಿ ಇತರರಿದ್ದರು.
- ಭಾರತ
- ಪ್ರಗತಿಪರ
- ಮಹಿಳಾ ಸಂಘಟನೆ
ಗಂಗಾವತಿ: ಮಹಿಳೆಯರು ಸಂಘಟನಾತ್ಮಕವಾಗಿ ಕಾನೂನು ಬದ್ಧ ಹಕ್ಕುಗಳನ್ನು ಪಡೆಯಬೇಕಿದ್ದು, ಸ್ವಾವಲಂಬಿಗಳಾಗುವಂತೆ ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ ರಾಷ್ಟ್ರೀಯ ಅಧ್ಯಕ್ಷೆ ಡಾ.ರತಿರಾವ್ ಮೈಸೂರು ಸಲಹೆ ನೀಡಿದರು.
ನಗರದ ಉದ್ಭವ ಲಕ್ಷ್ಮೀ ಸಭಾಂಗಣದಲ್ಲಿ ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು. ಮಹಿಳಾ ಸಬಲೀಕರಣಕ್ಕೆ ಹಲವು ಯೋಜನೆಗಳಿದ್ದು, ಕಾನೂನು ತಿಳಿವಳಿಕೆ ಮೂಲಕ ಹಕ್ಕುಗಳನ್ನು ಪಡೆಯುವಂತೆ ಸಲಹೆ ನೀಡಿದರು.
ಪೌರಕಾರ್ಮಿಕರ ಬದುಕು, ಬವಣೆ ಕುರಿತು ಜಾಗತಿ ನಾಟಕ, ಶ್ರಮಿಕರ ಕಥೆ ಎನ್ನುವ ಬೀದಿ ನಾಟಕ ಪ್ರದರ್ಶಿಸಲಾಯಿತು. ಇದಕ್ಕೂ ಮುನ್ನ ನಗರದಾದ್ಯಂತ ಜಾಗೃತಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಸಂಘಟನೆ ರಾಜ್ಯಾಧ್ಯಕ್ಷೆ ನಿರ್ಮಲಾ, ನಿರ್ದೇಶಕಿ ಕೆ.ಆರ್.ಸುಮತಿ, ಎಐಸಿಸಿಟಿಯು ರಾಜ್ಯ ಕಾರ್ಯದರ್ಶಿ ಮೈತ್ರಿ ಕೃಷ್ಣನ್, ಜಿಲ್ಲಾ ಕಾರ್ಯದರ್ಶಿ ವಿಜಯ್ ದೊರೈರಾಜು ಇತರರಿದ್ದರು.