ಸರ್ಕಾರಿ ನೌಕರರ ದಿನಾಚರಣೆ ಅಂಗವಾಗಿ ಕೊಪ್ಪಳದಲ್ಲಿ ಡಿಸಿ ಡಾ.ಸುರೇಶ ಬಿ.ಇಟ್ನಾಳ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಎಡಿಸಿ ಸಿದ್ರಾಮೇಶ್ವರ, ರಾಜ್ಯ ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ, ಪಶುಪಾಲನ ಇಲಾಖೆ ಡಿಡಿ ಡಾ.ಪಿ.ಎಂ.ಮಲ್ಲಯ್ಯ, ಕ್ರೀಡಾ ಇಲಾಖೆ ಎಡಿ ವಿಠ್ಠಲ ಜಾಬಗೌಡರ್​ ಇದ್ದರು.  
ಕೊಪ್ಪಳ

ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಸಿದ್ಧರಾಗಿ

ಪ್ರಮುಖ ಮುಖ್ಯಾಂಶಗಳು

  • ಡಿಸಿ ಡಾ.ಸುರೇಶ ಬಿ.ಇಟ್ನಾಳ ಸೂಚನೆ
ಕೊಪ್ಪಳ: ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸವೋರ್ತ್ತಮ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.
ಏಪ್ರೀಲ್​ ಕೊನೇ ವಾರ ಅಥವಾ ಮೇ ಮೊದಲ ವಾರದಲ್ಲಿ ಜಿಲ್ಲಾಡಳಿತ, ಸರ್ಕಾರಿ ನೌಕರರ ಸಂದೊಂದಿಗೆ ಕಾರ್ಯಕ್ರಮ ನಡೆಸಲಾಗುವುದು. ಅಚ್ಚುಕಟ್ಟಾಗಿ ಆಚರಿಸಲು ಕ್ರಮವಹಿಸಿ. ನೌಕರರಿಗೆ ಆರೋಗ್ಯ ತಪಾಸಣೆ, ಯೋಗ, ರಕ್ತದಾನ ಶಿಬಿರ ಆಯೋಜಿಸಿ. ಅತ್ಯುತ್ತಮ ಸೇವೆ ಸಲ್ಲಿಸಿದ, ಸಾಧಕ ನೌಕರರನ್ನು ಪ್ರಶಸ್ತಿಗೆ ಆಯ್ಕೆ ಮಾಡಿ. ಇಲಾಖೆ ಗುರಿ ಸಾಧನೆ, ನಾಯಕತ್ವ ಗುಣ, ಸಮಯಪ್ರಜ್ಞೆ, ಸರ್ಕಾರಿ ಹಣ ಉಳಿತಾಯ, ಸಾರ್ವಜನಿಕ ಸ್ನೇಹಿ ಆಗಿರುವವರನ್ನು ಪರಿಗಣಿಸುವಂತೆ ಸಲಹೆ ನೀಡಿದರು.
ಎಡಿಸಿ ಸಿದ್ರಾಮೇಶ್ವರ ಮಾತನಾಡಿ, ಪ್ರಶಸ್ತಿ ಪಡೆಯಲು ಪರಿಾರ್ಥ ಅವಧಿ ಸೇರಿ ಕನಿಷ್ಠ 3 ವರ್ಷ ಸೇವೆ ಮಾಡಿರಬೇಕು. ಉತ್ತಮ ಕಾರ್ಯಕ್ಷಮತೆ, ನವೀನ ಆಲೋಚನೆ, ಭ್ರಷ್ಟಾಚಾರ ಮುಕ್ತ ಸೇವೆ, ಸಾರ್ವಜನಿಕ ಸ್ನೇಹಿ ನಡವಳಿಕೆ, ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಅಸಾಧಾರಣ ಕಾರ್ಯನಿರ್ವಹಣೆ ಮಾಡಿರಬೇಕು. ಅರ್ಜಿ ಸಲ್ಲಿಸುವವರ ವಿರುದ್ಧ ಯಾವುದೇ ಇಲಾಖೆ ವಿಚಾರಣೆ ಅಥವಾ ಕ್ರಿಮಿನಲ್​ ಪ್ರಕರಣ ಇರಬಾರದು. ಈಗಾಗಲೇ ಈ ಪ್ರಶಸ್ತಿ ಪಡೆದವರು ಅರ್ಜಿ ಸಲ್ಲಿಸುವಂತಿಲ್ಲವೆಂದು ಮಾಹಿತಿ ನೀಡಿದರು.
ರಾಜ್ಯ ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ ಮಾತನಾಡಿ, ಹೆಚ್ಚಿನ ಇಲಾಖೆಗಳು ಜಿಲ್ಲಾಡಳಿತ ಭವನದಲ್ಲಿದ್ದು ಆಡಿಟೋರಿಯಂ ಹಾಲ್​ನಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ನೌಕರ ಮಿತ್ರರು ಭಾಗವಹಿಸಿ. ಎಲ್ಲರೂ ಸಹಕರಿಸಿ ಎಂದರು.
ಪಶುಪಾಲನ ಇಲಾಖೆ ಡಿಡಿ ಡಾ.ಪಿ.ಎಂ.ಮಲ್ಲಯ್ಯ, ಕ್ರೀಡಾ ಇಲಾಖೆ ಎಡಿ ವಿಠ್ಠಲ ಜಾಬಗೌಡರ್​ ಇತರರಿದ್ದರು.