ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಸೋಮವಾರ ಕಂಡುಬಂದ ಜನತೆ.  
ಕೊಪ್ಪಳ

ದಕ್ಷಿಣ ಕುಂಭದತ್ತ ಆಕರ್ಷಿತರಾದ ಜನ

ಪ್ರಮುಖ ಮುಖ್ಯಾಂಶಗಳು

  • ನಿತ್ಯವೂ ಲಕ್ಷಾಂತರ ಜನರ ಭೇಟಿ
  • ವಿದೇಶಿಗರ ಸಂಖ್ಯೆಯೂ ಹೆಚ್ಚಳ
ಕೊಪ್ಪಳ: ದಕ್ಷಿಣ ಕುಂಭಮೇಳ ಖ್ಯಾತಿಯ ಗವಿಸಿದ್ಧೇಶ್ವರ ಜಾತ್ರೋತ್ಸವ ಈ ವರ್ಷ ಎಂದಿಗಿಂತಲೂ ಹೆಚ್ಚಿನ ಜನರನ್ನು ಆಕರ್ಷಿಸಿದೆ. ಸೋಮವಾರವೂ ಇಸ್ರೇಲ್​ ಪ್ರಜೆ ಸೇರಿ ಅಪಾರ ಜನ ಸಾಗರ ಮಠದತ್ತ ಹರಿದು ಬಂತು.
ಶನಿವಾರ, ಭಾನುವಾರ ರಜಾ ದಿನ ಕಾರಣ ನಿರೀೆ ಮೀರಿ ಜನ ಬಂದರು. ನಿಯಂತ್ರಣ ಕಷ್ಟಸಾಧ್ಯ ಎಂಬಂತಾಯಿತು. ಹೀಗಿದ್ದರೂ ಪೊಲೀಸರು, ಸ್ವಯಂಸೇವಕರು ಹರಸಾಹಸಪಟ್ಟು ಜನರನ್ನು ನಿಯಂತ್ರಿಸಿದರು. ಜನ ಹೆಚ್ಚಿದ್ದರಿಂದ ಸಂಜೆ ವೇಳೆಗೆ ದಾಸೋಹ ಭವನ ಬಂದ್​ ಮಾಡಲಾಯಿತು. ಇದರಿಂದ ಕೊಂಚ ಜನ ಸಂದಣಿ ತಗ್ಗಿತು. ನಂತರ ದಾಸೋಹ ಆರಂಭವಾಗಿ ತಡರಾತ್ರಿವರೆಗೆ ಸುಸೂತ್ರವಾಗಿ ನಡೆಯಿತು.
ಸೋಮವಾರ ಗವಿಸಿದ್ಧೇಶ್ವರನ ವಾರದ ದಿನಾಗಿದ್ದರಿಂದ ಬೆಳಗ್ಗಿನಿಂದಲೇ ಜನರು ಮಠದತ್ತ ಹೆಜ್ಜೆ ಹಾಕಿದರು. ಕತೃ ಗದ್ದುಗೆ, ಗವಿಶ್ರೀಗಳ ದರ್ಶನ ಪಡೆದರು. ಜನರು ಹೆಚ್ಚಿದ್ದರಿಂದ ಬೆಳಗಿನಂದಲೇ ಪ್ರಸಾದ ಸೇವೆ ಆರಂಭವಾಯಿತು. ಗಂಟೆಗಟ್ಟಲೇ ಸರತಿಯಲ್ಲಿ ನಿಂತು ಜನ ಪ್ರಸಾದ ಸೇವಿಸಿದರು. ರವೆ ಉಂಡಿ, ರೊಟ್ಟಿ, ಕಾಳು ಪಲ್ಯ, ಮಾದಲಿ ಇನ್ನಿತರ ಭೋಜನ ಸವಿದರು. ದಾಸೋಹ ಮುಂದುವರೆದಿದ್ದು, ಭಕ್ತರು ದವಸ&ಧಾನ್ಯ, ರೊಟ್ಟಿ ಸಲ್ಲಿಸುವುದನ್ನು ಮುಂದುವರೆಸಿದ್ದಾರೆ.

320 ಕ್ವಿಂಟಾಲ್​ ಅಕ್ಕಿ ಖಾಲಿ

ಎರಡೇ ದಿನದಲ್ಲಿ ಮ@ಆ ದಾಸೋಹ ಭವನದಲ್ಲಿ ಬರೋಬ್ಬರಿ 320 ಕ್ವಿಂಟಾಲ್​ ಅಕ್ಕಿ ಖಾಲಿಯಾಗಿದೆ. ಸುಮಾರು 3&5 ಲಕ್ಷ ಜನರು ಪ್ರಸಾದ ಸೇವಿಸಿರಬಹುದೆಂದು ಅಂದಾಜಿಸಲಾಗಿದೆ. ದಾಸೋಹ ಭವನದ ಉಸ್ತುವಾರಿಗಳಿಗೆ ಇನ್ನು ಸಿಹಿ ಪದಾರ್ಥ ಲೆಕ್ಕವಿಡಲೂ ಪುರುಸೊತ್ತು ಇಲ್ಲದಂತಾಗಿದೆ. ಮ@ಆ ದಾಸೋಹ ಭವನದಲ್ಲಿ ಒಲೆಗಳ ಸಂಖ್ಯೆ ಕಡಿಮೆ ಎನಿಸಿದ್ದರಿಂದ ಭಾನುವಾರ ಐದು ಸಾವಿರ ವಿದ್ಯಾರ್ಥಿಗಳ ಪ್ರಸಾದ ನಿಲಯದಲ್ಲಿ ಅಡುಗೆ ಮಾಡಿ ದಾಸೋಹ ಭವನದಕ್ಕೆ ತಂದು ಉಣಬಡಿಸಲಾಗಿದೆ.

ಲಕ್ಷ-ಲಕ್ಷ ಜನಸಾಗರ

ಈ ಮುಂಚಿನ ವರ್ಷಗಳಲ್ಲಿ ಮಹಾರಥೋತ್ಸವ, ಮದ್ದು ಸುಡುವ ದಿನ, ಸರ್ಕಾರಿ ರಜಾ ದಿನಗಳಲ್ಲಿ ಹೆಚ್ಚಿನ ಜನ ಜಾತ್ರೆಗೆ ಬರುತ್ತಿದ್ದರು. ಈ ವರ್ಷ ರಥೋತ್ಸವ ದಿನದಿಂದ ಈವರೆಗೆ ಜನಸಂದಣಿ ತಗ್ಗಿಲ್ಲ. ಗುರುವಾರ&ಶುಕ್ರವಾರ ಕೊಂಚ ಣಿಸಿದರೂ ಶನಿವಾರದಿಂದ ನಿತ್ಯ ಲಕ್ಷ&ಲಕ್ಷ ಜನರು ಜಾತ್ರೆಗೆ ಬರುತ್ತಿದ್ದಾರೆ. ಬಸ್​ ನಿಲ್ದಾಣ ಜನರಿಂದ ಕಕ್ಕಿರಿದು ತುಂಬಿದ್ದು ಪ್ರಯಾಣಿಕರು ಬಸ್​ ಇಲ್ಲದೇ ಪರದಾಡುತ್ತಿದ್ದಾರೆ. ಗ್ರಾಮೀಣ ಭಾಗಕ್ಕೆ ಸರಿಯಾಗಿ ಬಸ್​ ಹೋಗದಂತಾಗಿದೆ.