ಜಾತ್ರೆಯಲ್ಲಿ ಮಿಠಾಯಿ ಅಂಗಡಿಗಳ ಮಾಲೀಕರಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸನ್ಮಾನಿಸಲಾಯಿತು. ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ, ಜಿಲ್ಲಾ ಉಪಾಧ್ಯಕ್ಷ ಶಿವನಗೌಡ ಪಾಟೀಲ ಹಲಗೇರಿ, ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ್ ಸೇರಿದಂತೆ ಇತರರಿದ್ದರು.
- ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ
- ಮಿಠಾಯಿ ಅಂಗಡಿ ಮಾಲಕರಿಗೆ ಸನ್ಮಾನ
ಕೊಪ್ಪಳ: ದಕ್ಷಿಣದ ಭಾರತದ ಕುಂಭಮೇಳ ಶ್ರೀ ಗವಿಮಠ ಜಾತ್ರೆ ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೇ ಸಾಮಾಜಿಕ ಕಳಕಳಿಯ ಪ್ರತಿಕವಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಹೇಳಿದರು.
ಜಾತ್ರೆಯ ಮಿಠಾಯಿ ಅಂಗಡಿಗಳ ನಾಮಫಲಕಗಳ ಸಾಮಾಜಿಕ ಕಳಕಳಿ ಘೋಷ ವಾಕ್ಯಗಳನ್ನು ಕಂಡು ಪ್ರೋತ್ಸಾಯಿಸಲು ಶನಿವಾರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಅಂಗಡಿ ಮಾಲಕರನ್ನು ಸನ್ಮಾನಿಸಿ ಮಾತನಾಡಿದರು.
ಗವಿಮಠದ ಜಾತ್ರೆಯಲ್ಲಿ ನಮ್ಮ ಕನ್ನಡನಾಡು ನುಡಿಯ ಅಭಿಮಾನದ ಘೋಷ ವಾಕ್ಯಗಳಾದ, ಕನ್ನಡ ಶಾಲೆಗಳ ಅಭಿವೃದ್ಧಿಗೆ ಸಹಕಾರ, ಕಾರ್ಖಾನೆಗಳಿಂದಾಗುವ ಪರಿಸರ ಮಾಲಿನ್ಯ ತಡೆ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ಸ್ಮರಣೆ, ಭಯೋತ್ಪಾದನೆ ನಿಗ್ರಹಕ್ಕೆ ಆಪರೇಷನ್ ಸಿಂಧೂರ, ರೈತರ ಬೆಳೆಗೆ ಬೆಂಬಲ ಬೆಲೆ, ದೇಶ ಕಾಯುವ ಯೋಧರ ಸ್ಮರಣೆ, ಇಂತಹ ಅನೇಕ ರೀತಿಯ ಘೋಷ ವಾಕ್ಯಗಳು ಮಿಠಾಯಿ ಅಂಗಡಿಗಳ ನಾಮಫಲಕಗಳಲ್ಲಿ ಸಾಮಾಜಿಕ ಬದ್ದತೆಯನ್ನು ಎತ್ತಿ ತೋರಿಸಿದ್ದು, ಜಾತ್ರೆಗೆ ಬೇಟಿ ನೀಡುವ ಲಕ್ಷಾಂತರ ಭಕ್ತರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯ ಶ್ಲಾನಿಯ ಎಂದರು.
ಜಿಲ್ಲಾ ಉಪಾಧ್ಯಕ್ಷ ಶಿವನಗೌಡ ಪಾಟೀಲ ಹಲಗೇರಿ, ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ್, ಗೌರವ ಸಲಹೆಗಾರ ಗವಿಸಿದ್ದಪ್ಪ ಹಂಡಿ, ತಾಲೂಕಾಧ್ಯಕ್ಷ ಹುಸೇನಬಾಷಾ ಮಣ್ಣೂರ, ಗೌರವಾಧ್ಯಕ್ಷ ಗವಿಸಿದ್ದಪ್ಪ ಚಕ್ಕಡಿ, ತಾಲೂಕ ಮಹಿಳಾಧ್ಯಕ್ಷೆ ಬೋರಮ್ಮ ತಳಗಡೆ, ಗೌರವಾಧ್ಯಕ್ಷೆ ಶಂಕ್ರಮ್ಮ ಮ್ಯಾಗಳಮನಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.