ಕೊಪ್ಪಳದ ಐತಿಹಾಸಿಕ ಹಜರತ್​ ಮರ್ದಾನೆ ಗೈಬ್​ ದರ್ಗಾದ ಉರುಸ್​ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿವಿ ಚಂದ್ರಶೇಖರಗೆ ಸನ್ಮಾನಿಸಲಾಯಿತು. ದರ್ಗಾ ಕಮಿಟಿ ಅಧ್ಯಕ್ಷ ಕಾಟನ್​ ಪಾಫಿಾ, ಕುಡಾ ಮಾಜಿ ಅಧ್ಯಕ್ಷ ಅಮ್ಜದ್​ ಪಟೇಲ್​, ಅಮರೇಶ ಕರಡಿ, ಮಹೇಂದ್ರ ಛೋಪ್ರಾ, ಕೆ.ಎಂ. ಸೈಯದ್​, ಮಾನ್ವಿ ಪಾಫಿಾ ಇತರರಿದ್ದರು. 
ಕೊಪ್ಪಳ

ಗವಿಮಠ- ಮರ್ದಾನೆ ದರ್ಗಾ ಭಾವೈಕ್ಯತೆಯ ಎರಡು ಕಣ್ಣುಗಳು

ಪ್ರಮುಖ ಮುಖ್ಯಾಂಶಗಳು

  • ಶಾಸಕ ರಾಘವೇಂದ್ರ ಹಿಟ್ನಾಳ್​ ಅಭಿಮತ
ಕೊಪ್ಪಳ : ಗವಿಮಠ ಮತ್ತು ಮರ್ದಾನೆ ಗೈಬ್​ ದರ್ಗಾ ಈ ಭಾಗದ ಎರಡು ಶಕ್ತಿ ಕೇಂದ್ರಗಳು. ಇವು ಜಾತಿ-,ಧರ್ಮಕ್ಕೆ ಸೀಮಿತವಾಗದೆ ಭಾವೈಕ್ಯತೆಯ ಸಂಕೇತಗಳಾಗಿವೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್​ ಬಣ್ಣಿಸಿದರು.
ನಗರದ ಐತಿಹಾಸಿಕ ಹಜರತ್​ ಮರ್ದಾನೆ ಗೈಬ್​ ದರ್ಗಾದ ಉರುಸ್​ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಇತ್ತೀಚೆಗೆ ಮಾತನಾಡಿದರು.
ಜನರು 12 ವರ್ಷಗಳಲ್ಲಿ ಸತತ ಮೂರು ಬಾರಿ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಈ ಸಮುದಾಯದ ಪ್ರೀತಿ ಮತ್ತು ವಿಶ್ವಾಸದ ಋಣ ತೀರಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಲಿಂಗದಳ್ಳಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಅಲ್ಪಸಂಖ್ಯಾತರ ವಸತಿ ಶಾಲೆಯನ್ನು ನಿರ್ಮಿಸಲಾಗಿದೆ. ಶಿಕ್ಷಣವೊಂದೇ ಸಮಾಜದಲ್ಲಿ ಬದಲಾವಣೆ ತರಬಲ್ಲದು ಎಂಬ ನಂಬಿಕೆಯಿಂದ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ಸಂಸದ ರಾಜಶೇಖರ್​ ಹಿಟ್ನಾಳ್​ ಮಾತನಾಡಿ, ಮರ್ದಾನೆ ದರ್ಗಾದ ಉರುಸ್​ ಇಂದು ಮೈಸೂರು ದಸರಾದಫಿ್ಟೇ ವೈಭವದಿಂದ ನಡೆಯುತ್ತಿದೆ. ಗವಿಮಠ ಮತ್ತು ಮರ್ದಾನೆ ದರ್ಗಾ ಜಿಲ್ಲೆಯ ಎರಡು ಕಣ್ಣುಗಳಿದ್ದಂತೆ. ಈ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್​ ಅಬ್ಬಯ್ಯ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬರುವಾಗ ಯಾರೂ ಜಾತಿ-ಧರ್ಮ ನೋಡಲಿಲ್ಲ. ಆದರೆ ಇಂದು ಮಕ್ಕಳ ಮನಸ್ಸಿನಲ್ಲಿ ದ್ವೇಷ ಬಿತ್ತಲಾಗುತ್ತಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದೆ. ಮರ್ದಾನೆ ಗೈಬ್​ ಅವರ ಪವಾಡ ಮತ್ತು ಈ ನೆಲದ ಶಕ್ತಿ ಅದ್ಭುತವಾಗಿದೆ ಎಂದರು.
ಧರ್ಮಗುರು ಮೌಲಾನಾ ನಜೀರ್​ ಅಹ್ಮದ್​ ಮುಫ್ತಿ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ಬಸವರಾಜ ಹಿಟ್ನಾಳ, ಕುಡಾ ಅಧ್ಯಕ್ಷ ಪ್ರಸನ್ನ ಗಡಾದ, ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿವಿ ಚಂದ್ರಶೇಖರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ್​ ಎಸ್​. ದರಗದ, ದರ್ಗಾ ಕಮಿಟಿ ಅಧ್ಯಕ್ಷ ಕಾಟನ್​ ಪಾಷಾ, ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್​ ಪಟೇಲ್​, ಪ್ರಮುಖರಾದ ಅಮರೇಶ ಕರಡಿ, ಮಹೇಂದ್ರ ಚೋಪ್ರಾ, ಕೆ.ಎಂ. ಸೈಯದ್​, ಮುತ್ತುರಾಜ ಕುಷ್ಟಗಿ, ರಾಜಶೇಖರಗೌಡ ಆಡೂರು, ಅಮ್ಜದ್​ ಪಟೇಲ್​ ಇತರರಿದ್ದರು.