ಕರ್ನಾಟಕ ವಿದ್ಯುತ್ಛಕ್ತಿ ಪ್ರಸರಣ ನಿಗಮ ನೌಕರರ ಸಂಘದ ಸದಸ್ಯರು ಗಂಗಾವತಿ ಜೆಸ್ಕಾಂ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಪೂರ್ವಭಾವಿ ಸಭೆಯಲ್ಲಿ ಎಇಇ ಎಸ್.ಐ.ಹಿರೇಮನಿ ಮಂಗಳವಾರ ಮಾತನಾಡಿದರು. ಇಇ ಎಂ.ವೀರೇಶ, ವಿವಿಧ ಸಂಘಟನೆ ಪದಾಧಿಕಾರಿಗಳಾದ ವಿ.ಮಂಜುನಾಥ, ಖಾಜಾಮೊಹಿದ್ದೀನ್,ಎಂ.ಜ್ಯೋತಿ, ರಫಿಕ್ ಅಹ್ಮದ್, ನಂದಕಿಶೋರ ಇತರರಿದ್ದರು. 
ಕೊಪ್ಪಳ

ವಿದ್ಯುತ್ ಕ್ಷೇತ್ರ ಖಾಸಗೀಕರಣ ಕೈಬಿಡಲಿ

ಕುರುವತ್ತಿ ಶ್ರೀಕಾಂತಪ್ಪ
ಗಂಗಾವತಿ: ರಾಜ್ಯದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಹುನ್ನಾರ ನಡೆಸಿದ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಕರ್ನಾಟಕ ವಿದ್ಯುತ್ಛಕ್ತಿ ಪ್ರಸರಣ ನಿಗಮ ನೌಕರರ ಸಂಘದ ಸದಸ್ಯರು ನಗರದ ಜೆಸ್ಕಾಂ ಕಚೇರಿ ಆವರಣದಲ್ಲಿ ಪ್ರತಿಭಟನೆ ಪೂರ್ವಭಾವಿಯಾಗಿ ಗೇಟ್ ಮೀಟಿಂಗ್ (ದ್ವಾರಸಭೆ) ಮಂಗಳವಾರ ನಡೆಸಿದರು.
ವಿಭಾಗೀಯ ಮತ್ತು ಉಪವಿಭಾಗದ ನೌಕರರೊಂದಿಗೆ ಸಭೆ ನಡೆಸಿದ ಅಧಿಕಾರಿಗಳು ಮತ್ತು ಪವರ್‌ಮನ್‌ಗಳು, ಖಾಸಗೀಕರಣ ನೀತಿಯನ್ನು ಖಂಡಿಸಿದರು. ಎಇಇ ಎಸ್.ಐ. ಹಿರೇಮನಿ ಮಾತನಾಡಿ, ಸಂಘಟನಾತ್ಮಕವಾಗಿ ಖಾಸಗೀಕರಣ ನೀತಿ ವಿರೋಧಿಸಬೇಕಿದ್ದು, ಹೋರಾಟದ ಮೂಲಕ ತಡೆಯಬೇಕಿದೆ. ನೌಕರರಲ್ಲೂ ಬದಲಾವಣೆ ಅಗತ್ಯವಿದ್ದು, ಕಾಟಾಚಾರಕ್ಕೆ ಕರ್ತವ್ಯ ನಿರ್ವಹಿಸುವುದು ಸರಿಯಲ್ಲ. ಕೊಟ್ಟ ಕೆಲಸ ಸಮರ್ಪಕ ರೀತಿಯಲ್ಲಿ ನಿಭಾಯಿಸಿದಾಗ ಮಾತ್ರ ಇಂತಹ ಸಮಸ್ಯೆಗಳು ಎದುರಾಗಲ್ಲ ಎಂದರು.
ಖಾಸಗೀಕರಣ ನೀತಿ ಕುರಿತು ಇಇ ಎಂ.ವೀರೇಶ, ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕಾಧ್ಯಕ್ಷ ಅನಿಲ್ ದೇಸಾಯಿ ಮಾತನಾಡಿದರು.
ವಿವಿಧ ಸಂಘಟನೆ ಪದಾಧಿಕಾರಿಗಳಾದ ವಿ.ಮಂಜುನಾಥ, ಖಾಜಾಮೊಹಿದ್ದೀನ್,ಎಂ.ಜ್ಯೋತಿ, ರಫಿಕ್ ಅಹ್ಮದ್, ನಂದಕಿಶೋರ, ಅಬ್ದುಲ್ ರಫಿಕ್, ಬಸವರಾಜ, ಹನುಮೇಶ ಜೋಶಿ, ಶ್ರೀಧರ್, ಕಲ್ಲಪ್ಪ, ಅಜರುದ್ದೀನ್, ಮಹೆಬೂಬ್‌ಸಾಬ್ ದಾಲಾಯತ್, ಶರಣಬಸಪ್ಪ, ಶಂಕರ, ಎಲ್ಲ ಶಾಖೆ ಸಿಬ್ಬಂದಿ ಮತ್ತು ಪವರ್‌ಮನ್‌ಗಳಿದ್ದರು.