ಕನಕಗಿರಿ ತಾಲೂಕಿನ ನವಲಿಯ ಪ್ರಾಕೃಪಸ ಸಂಘದಲ್ಲಿ ತೊಗರಿ ಕೇಂದ್ರವನ್ನು ಸಂಘದ ಅಧ್ಯಕ್ಷ ಭೀಮನಗೌಡ ಹರ್ಲಾಪುರ ಉದ್ಘಾಟಿಸಿದರು. ಉಪಾಧ್ಯಕ್ಷ ಲಾಲಸಾ ನಾಯ್ಕ ತಳವಾರ, ನಿರ್ದೇಶಕರಾದ ಮರಿಸ್ವಾಮಿ ಹರಿಜನ, ವೀರೇಶಸ್ವಾಮಿ ಸಂಕನಾಳ ಇತರರಿದ್ದರು. 
ಕೊಪ್ಪಳ

ತೊಗರಿ ಖರೀದಿ ಕೇಂದ್ರ ಆರಂಭ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ನವಲಿ ಗ್ರಾಮದಲ್ಲಿ ಕೇಂದ್ರ ಪ್ರಾರಂಭ
ಕನಕಗಿರಿ, ತೊಗರಿ ಖರೀದಿ ಕೇಂದ್ರ
ಕನಕಗಿರಿ: ತಾಲೂಕಿನ ನವಲಿ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದಡಿ ಬೆಂಬಲ ಬೆಲೆಯಡಿ ಖರೀದಿಸಲಾಗುತ್ತಿರುವ ತೊಗರಿ ಕೇಂದ್ರವನ್ನು ಮಂಗಳವಾರದಿಂದ ಆರಂಭಿಸಲಾಯಿತು. ಸಂಘದ ಅಧ್ಯಕ್ಷ ಭೀಮನಗೌಡ ಹರ್ಲಾಪುರ ಕೇಂದ್ರವನ್ನು ಉದ್ಘಾಟಿಸಿದರು.
ಪ್ರತಿ ಕ್ವಿಂಟಾಲ್‌ಗೆ 8 ಸಾವಿರ ರೂ.ನಂತೆ ತೊಗರಿ ಖರೀದಿಸಲಾಗುತ್ತಿದ್ದು, ತೊಗರಿ ಬೆಳೆದ ಹೋಬಳಿ ವ್ಯಾಪ್ತಿಯ ಬೆಳೆಗಾರರು ದಾಖಲೆಗಳೊಂದಿಗೆ ಹೆಸರು ನೋಂದಾಯಿಸಿ ನಂತರ ಕೇಂದ್ರಕ್ಕೆ ಮಾರಾಟ ಮಾಡಿ ಯೋಜನೆಯ ಸದುಪಯೋಗಪ ಪಡೆದುಕೊಳ್ಳಬೇಕು. ನೇರವಾಗಿ ರೈತರ ಖಾತೆಗೆ ತೊಗರಿ ಖರೀದಿಯ ಹಣವನ್ನು ಸರ್ಕಾರವು ಪಾವತಿಸುತ್ತಿದೆ ಎಂದರು.
ಉಪಾಧ್ಯಕ್ಷ ಲಾಲಸಾ ನಾಯ್ಕ ತಳವಾರ, ನಿರ್ದೇಶಕರಾದ ಮರಿಸ್ವಾಮಿ ಹರಿಜನ, ವೀರೇಶಸ್ವಾಮಿ ಸಂಕನಾಳ, ಮುಖಂಡರಾದ ಶೇಖರಗೌಡ ಮಾ.ಪಾ., ಈಶ್ವರಯ್ಯ ಸ್ವಾಮಿ ಪೂಜಾರ, ನಿಂಗಪ್ಪ ನಾಯಕ, ವೀರೇಶ ನಾಗವಂಶಿ, ಹೊನ್ನೂರಸಾಬ ವಾಲೇಕಾರ, ದೇವರಾಜ ಉದ್ಯಾಳ ಇತರರಿದ್ದರು.