Rapist sentenced to jail with a fine of Rs 1.5 lakh
ಕೊಪ್ಪಳ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಗಂಗಾವತಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು 1.5 ಲಕ್ಷ ರೂ.ದಂಡ ಹಾಗೂ 20 ವರ್ಷ ಜೈಲು ಶಿಕ್ಷೆ ವಿಧಿಸಿ ಡಿ.19ರಂದು ಆದೇಶಿಸಿದ್ದಾರೆ.
ಗಂಗಾವತಿಯ ಎಚ್.ಆರ್.ಎಸ್ ಕಾಲನಿ ನಿವಾಸಿ ಹುಲ್ಲೇಶ ಕೊಜ್ಜ ಶಿೆಗೆ ಗುರಿಯಾದಾತ. ಈತ ಬಾಲಕಿ ಶಾಲೆಗೆ ಹೋಗಿ&ಬರುವಾಗ ಚುಡಾಯಿಸುತ್ತಿದ್ದ. 2022ರ ಸೆ.7ರಂದು ಬೆಳಗ್ಗೆ ಬಾಲಕಿ ಶಾಲೆಗೆ ಹೋಗುವಾಗ ಬೈಕ್ನಲ್ಲಿ ಬಂದ ಹುಲ್ಲೇಶ ಕರೆದೊಯ್ದು ಶಾಲೆಗೆ ಬಿಡುವುದಾಗಿ ಹೇಳಿದ್ದ. ಬಾಲಕಿ ನಿರಾಕರಿಸಿದಾಗ ಬೆದರಿಸಿ ವಾನಭದ್ರೇಶ್ವರ ಗುಡ್ಡಕ್ಕೆ ಕರೆದೊಯ್ದಿದ್ದ. ಎರಡು ದಿನ ಅತ್ಯಾಚಾರ ಎಸಗಿದ್ದ. ವಿಷಯ ಯಾರಿಗೂ ತಿಳಿಸದಂತೆ ಬೆದರಿಕೆ ಒಡ್ಡಿದ್ದ.
ಈ ಸಂಬಂಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಐ ಮಂಜುನಾಥ ಎಸ್. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹುಲ್ಲೇಶನನ್ನು ಅಪರಾಧಿಯೆಂದು ಘೋಷಿಸಿದ್ದಾರೆ. 20 ವರ್ಷ ಜೈಲು ಶಿಕ್ಷೆ ಹಾಗೂ 1.5 ಲಕ್ಷ ರೂ. ದಂಡ ವಿಧಿಸಿ ಡಿ.19ರಂದು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ಪ್ರಕರಣ ನಡೆಸಿ ವಾದ ಮಂಡಿಸಿದ್ದಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಸಿಬ್ಬಂದಿ ವಿಶ್ವನಾಥ ಹಾಗೂ ಮಂಜುನಾಥ ನ್ಯಾಯಾಲಯಕ್ಕೆ ಸಕಾಲಕ್ಕೆ ಸಾಕ್ಷಿದಾರರನ್ನು ಹಾಜರುಪಡಿಸಿ ಸಹಕರಿಸಿದ್ದಾಗಿ ಗಂಗಾವತಿ ವಿಶೇಷ ಸರ್ಕಾರಿ ಅಭಿಯೋಜಕರ ಕಚೇರಿ ತಿಳಿಸಿದೆ.