ಗಣೇಶ ವರ್ತಟ್ನಾಳ 
ಕೊಪ್ಪಳ

ಅಂಬೇಡ್ಕರ್​ ನೂತನ ಕಂಚಿನ ಮೂರ್ತಿ ಅನಾವರಣ 27ಕ್ಕೆ

ಪ್ರಮುಖ ಮುಖ್ಯಾಂಶಗಳು

  • ಗಣೇಶ ವರ್ತಟ್ನಾಳ ಹೇಳಿಕೆ
ಕೊಪ್ಪಳ : ತಾಲುಕಿನ ಹಿರೇಬಗನಾಳ ಗ್ರಾಮದಲ್ಲ್ಲಿ ಡಾ. ಬಿ.ಆರ್​.ಅಂಬೇಡ್ಕರ್​ ನೂತನ ಕಂಚಿನ ಮೂರ್ತಿ ಅನಾವರಣ ಮತ್ತು 135ನೇ ಜಯಂತ್ಯುತ್ಸವ ಅಂಗವಾಗಿ 11 ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಏ. 27 ರಂದು ಬೆಳಗ್ಗೆ 11.30ಕ್ಕೆ ನಡೆಯಲಿದೆ ಎಂದು ಗಣೇಶ ವರ್ತಟ್ನಾಳ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕೊಪ್ಪಳದ ಗವಿಮಠದ ಶ್ರೀ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದರ್​ ಚೆನ್ನಯ್ಯ ಸ್ವಾಮಿಗಳು, ಹಾಲವರ್ತಿ ಕನಕಗುರುಪೀಠ ಶಾಖಾಮಠದ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಚಿತ್ರದುರ್ಗದ ಶ್ರೀ ಮಾರ್ಕಂಡಯ್ಯ ಮುನಿಸ್ವಾಮೀಜಿ, ವಿಜಯನಗರದ ಶ್ರೀ ಪೂರ್ಣಾನಂದ ಭಾರತಿ ಸ್ವಾಮೀಜಿಗಳು, ಇಟಗಿ ಶ್ರೀ ಮರಳುಸಿದ್ದೇಶ್ವರ ಗದ್ದಗೆಪ್ಪ ಅಜ್ಜನವರು, ಬಿಸರಹಳ್ಳಿ ಶ್ರೀ ಮರಳುಸಿದ್ದೇಶ್ವರ ಸ್ವಾಮೀಜಿಗಳು ಸಾನಿಧ್ಯವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮತ್ತು ಶಾಸಕ ರಾಘವೇಂದ್ರ ಹಿಟ್ನಾಳ ಅವರು ಕಾರ್ಯಕ್ರಮ ಉದ್ಘಾಟಿಸುವರು. ಸಂಸದ ರಾಜಶೇಖರ ಹಿಟ್ನಾಳ ಮತ್ತು ಮಾಜಿ ಸಂಸದ ಸಂಗಣ್ಣ ಕರಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕರಾದ ಕೆ. ಬಸವರಾಜ ಹಿಟ್ನಾಳ, ಬಸವರಾಜ ದಡೇಸ್ಗೂರ, ಜೆಡಿಎಸ್​ ಕೋರ್​ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಜ್ಯೋತಿ ಬೆಳಗಿಸುವರು. ಬಿಜೆಪಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಬಸವರಾಜ ಕ್ಯಾವಟರ್​, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ವೆಂಕಟೇಶ ಬಾರಕೇರ ಅವರು ಅಂಬೇಡ್ಕರ್​ ಭಾವಚಿತ್ರಕ್ಕೆ ಪುಫಿ್ಪಾರ್ಪಣೆ ಮಾಡಲಿದ್ದಾರೆ ಎಂದು ಹೇಳಿದರು.
ರಮೇಶ ದೇವರಮನಿ, ಮಲ್ಲಿಕಾರ್ಜುನ ಪುಜಾರ, ಪಕ್ಕಿರಪ್ಪ ದೊಡ್ಡಮನಿ, ಶಿವಣ್ಣ ತಾಳಕನಕಾಪುರ,