ಗವಿಮಠದಲ್ಲಿ ಗಾಂಧಿ ಬಳಗದ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವುದು.
- ಮೂರು ವರ್ಷದಿಂದ ಸೇವೆ ಸಲ್ಲಿಕೆ
ಕೊಪ್ಪಳ: ಅಜ್ಜನ ಜಾತ್ರೆ ಅಂಗವಾಗಿ ಅನೇಕರು ವಿವಿಧ ಸೇವೆ ಸಲ್ಲಿಸಿದ್ದಾರೆ. ಗಾಂಧಿ ಬಳಗ ತಂಡದವರು ಮೂರು ದಿನಗಳ ಕಾಲ ಗವಿಸಿದ್ಧೇಶ್ವರ ಮಠದ ಬಲಭಾಗದ ಬೆಟ್ಟ ಹಾಗೂ ಪ್ರಸಾದಕ್ಕೆ ಹೋಗುವ ಮಾರ್ಗ ಸ್ವಚ್ಛ ಗೊಳಿಸಿದರು.
ಕಳೆದ ಮೂರು ವರ್ಷದಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ನಿತ್ಯ ಬೆಳಗ್ಗೆ 5 ಗಂಟೆಗೆ ಸ್ವಚ್ಛತೆ ಮಾಡಿ ಬಳಿಕ ಧ್ಯಾನ, ಭಜನೆ, ಗಾಂಧಿ ಚಿಂತನೆಗಳ ಬಗ್ಗೆ ಚರ್ಚಿಸಿದರು. ನಾಗರಾಜನಾಯಕ ಡಿ.ಡೊಳ್ಳಿನ, ವಿರೇಶ ಮೇಟಿ, ಡಾ.ಪ್ರಭುರಾಜನಾಯಕ, ಪ್ರಕಾಶಗೌಡ, ಪ್ರಾಣೇಶ ಪೂಜಾರ, ಶಿವಪ್ಪ ಜೋಗಿ, ಶರಣಪ್ಪ ಬಾಚಲಾಪುರ, ಆನಂದತೀರ್ಥ ಪ್ಯಾಟಿ, ಬಸವರಾಜ ಸವಡಿ, ಮಲ್ಲಪ್ಪ ಹವಳೆ, ಗುರುಸ್ವಾಮಿ, ಹೊಳಿಬಸಯ್ಯ, ವಿರೇಶ ಕೌಂಟಿ ಇತರರಿದ್ದರು.