ಸೊನಮ್ ವಾಂಗ್ಚುಕ್ ಬೇಡಿಕೆಗೆ ಸ್ಪಂದಿಸಿ ಶಿಕ್ಷಣ ರಂಗದ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಪ್ರಗತಿಪರ ಸಂಟನೆಗಳ ಮುಖಂಡರು ಶುಕ್ರವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಬಸವರಾಜ ಶೀಲವಂತರ, ಕಾಶಿಂ ನಾಗೇಶನಳ್ಳಿ, ಯಮನೂರಪ್ಪ ಈಳಿಗನೂರು, ಎಸ್.ಎ.ಗಾರ್, ಡಿ.ಎಂ.ಬಡಿಗೇರ, ಶಶಿಕಲಾ ಮಠದ, ಗೌರಿ ಗೋನಾಳ ಇದ್ದರು.
- ಪ್ರಗತಿರಪ ಸಂಟನೆ ಮುಖಂಡರ ಆಗ್ರಹ
ಕೊಪ್ಪಳ: ಸೊನಮ್ ವಾಂಗ್ಚುಕ್ ಬೇಡಿಕೆಗೆ ಸ್ಪಂದಿಸಿ ಶಿಕ್ಷಣ ರಂಗದ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಪ್ರಗತಿಪರ ಸಂಟನೆಗಳ ಮುಖಂಡರು ಶುಕ್ರವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ವಾಂಗ್ಚುಕ್ ಶಾಂತಿಯುತ ಪ್ರತಿಭಟನೆಗೆ ಕೇಂದ್ರ ಸರ್ಕಾರ ಸ್ಪಂದಿಸದಿರುವುದು ಬೇಸರದ ಸಂಗತಿ. ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವಲ್ಲಿ ರ್ನಿಲಕ್ಷ್ಯ ಸಲ್ಲದು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಜವಾಬ್ದಾರಿ. ನೈತಕ ಹೊಣೆ ಹೊತ್ತು ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ದೇಶದ ಶಿಕ್ಷಣ ವ್ಯವಸ್ಥೆ ಬಲಪಡಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ವಿದ್ಯಾರ್ಥಿಗಳ ಧ್ವನಿ ಆಲಿಸಬೇಕು. ಸೊನಮ್ ವಾಂಗ್ಚುಕ್ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಬೇಕು. ಶಾಂತಿಯುತ ಹೋರಾಟ ರ್ನಿಲಸುವುದು ಸರಿಯಲ್ಲ. ವಿದ್ಯಾರ್ಥಿಗಳ ಹಿತಾಸಕ್ತಿ ಕಾಯಬೇಕು ಎಂದರು.
ಪ್ರಮುಖರಾದ ಬಸವರಾಜ ಶೀಲವಂತರ, ಕಾಶಿಂ ನಾಗೇಶನಳ್ಳಿ, ಯಮನೂರಪ್ಪ ಈಳಿಗನೂರು, ಎಸ್.ಎ.ಗಾರ್, ಡಿ.ಎಂ.ಬಡಿಗೇರ, ಶಶಿಕಲಾ ಮಠದ, ಗೌರಿ ಗೋನಾಳ ಇತರರಿದ್ದರು.