ಸಿದ್ದಾಪುರದ ಎಪಿಎಂಸಿ ಬಳಿಯ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಆರ್.ಡಬ್ಲು.ಎಸ್ ಜೆಇಗಳಾದ ಸತೀಶ್, ಸುರೇಶ್, ಪಿಡಿಒ ಜ್ಯೋತಿ ರೆಡ್ಡೆರ್, ಗ್ರಾಮ ಆಡಳಿತಾಧಿಕಾರಿ ಮರುಳಸಿದ್ದಪ್ಪ ಭೇಟಿ ನೀಡಿ ನೀರಿನ ಸಮಸ್ಯೆ ಕುರಿತು ಪರಿಶೀಲಿಸಿದರು. 
ಕೊಪ್ಪಳ

ಶುದ್ಧ ಕುಡಿವ ನೀರಿನ ಘಟಕಕ್ಕೆ ಭೇಟಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳ ತಂಡ ಪರಿಶೀಲನೆ
ಸಿದ್ದಾಪುರ: ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಜಲ ಸಮಸ್ಯೆ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಿರಿಯ ಅಭಿಯಂತರ ತಂಡ ಬಹುಗ್ರಾಮ ಶುದ್ಧ ಕುಡಿವ ನೀರಿನ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ಪಿಡಿಒ ಜ್ಯೋತಿ ರೆಡ್ಡೆರ್‌ಮಾತನಾಡಿ, ಆರ್.ಒ ಪ್ಲಾಂಟ್‌ಗಳನ್ನು ಆರ್.ಡಬ್ಲು. ಎಸ್ ಇಲಾಖೆ, ಗ್ರಾಮ ಪಂಚಾಯಿತಿ ಸುಪರ್ದಿಗೆ ನೀಡಿಲ್ಲ. ಅವುಗಳ ದುರಸ್ತಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದ್ದು, ಶೀಘ್ರ ನೀರಿನ ಸಮಸ್ಯೆ ಪರಿಹಾರ ಮಾಡಲಾಗುವುದು. ಮೋಟರ್ ಕೆಟ್ಟಿರುವ ವೇಳೆ ನೀರು ಪೂರೈಕೆ ವ್ಯತ್ಯಯವಾಗಿರಬಹುದು. ಜನಸಂಖ್ಯೆ ಹೆಚ್ಚಿರುವ ಕಾರಣ ಹಾಗೂ ಬೇಸಿಗೆ ಇರುವುದರಿಂದ ಮೂರು ದಿನಗಳಿಗೊಮ್ಮೆ ನೀರು ಬಿಡಲಾಗುತ್ತದೆ. ಸಾರ್ವಜನಿಕರು ಮಿತವಾಗಿ ನೀರು ಬಳಕೆ ಮಾಡಬೇಕು ಎಂದರು.
ಬಹು ಗ್ರಾಮ ಶುದ್ಧ ಕುಡಿಯುವ ನೀರಿನ ಘಟಕದಿಂದ ಗ್ರಾಮದ ಎಲ್ಲ ಒಎಚ್‌ಟಿಗಳಿಗೆ ಪೈಪ್‌ಲೈನ್ ಸಂಪರ್ಕ ಕಲ್ಪಿಸಿ ದಿನಕ್ಕೊಮ್ಮೆ ಎಲ್ಲ ವಾರ್ಡ್‌ಗಳಿಗೆ ನೀರೊದಗಿಸಲು ಈ ಹಿಂದೆ ಸಚಿವರು ಸೂಚಿಸಿದ್ದರು. ಈ ವಿಷಯದ ಬಗ್ಗೆ ಅಧಿಕಾರಿ ವಲಯದಲ್ಲೇ ಸ್ಪಷ್ಟ ಉತ್ತರವಿಲ್ಲ. ಸಚಿವರು ನೀಡಿದ ಸೂಚನೆಗೆ ಅಧಿಕಾರಿ ವಲಯ ಕೈಗೊಂಡ ಕ್ರಮದ ಬಗ್ಗೆ ಈವರೆಗೆ ಮಾಹಿತಿ ಇಲ್ಲ. ಪ್ರತಿಕ್ರಿಯೆಗೆ ಆರ್.ಡಬ್ಲು.ಎಸ್ ಎಇಇ ದೇವಣ್ಣ ಕಟ್ಟಿ ಅವರಿಗೆ ಕರೆ ಮಾಡಿದರೆ, ಫೋನ್ ಸ್ವೀಚ್ ಆಫ್ ಆಗಿತ್ತು. ಜೆಇ ಸತೀಶ್ ಅವರಿಗೆ ಎರಡು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಿರಲಿಲ್ಲ.
‘ವಾರಕ್ಕೊಮ್ಮೆ ಕುಡಿಯುವ ನೀರು ಸರಬರಾಜು’ ಶೀರ್ಷಿಕೆಯಡಿ 2026 ಮೇ 3ರಂದು ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿದ್ದನ್ನು ಸ್ಮರಿಸಬಹದು.