ಕನಕಗಿರಿಯ ಬಿಜೆಪಿ ಮಂಡಲ ಕಚೇರಿಯಲ್ಲಿ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನ ಆಚರಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಮಹಾಂತೇಶ್ ಸಜ್ಜನ್, ಮಂಡಲ ಉಪಾಧ್ಯಕ್ಷ ರಂಗಪ್ಪ ಕೊರಗಟಗಿ, ಮಂಡಲ ಪ್ರ.ಕಾರ್ಯದರ್ಶಿಗಳಾದ ಗ್ಯಾನಪ್ಪ ಗಾಣದಾಳ, ಪ್ರಕಾಶ ಹಾದಿಮನಿ ಇತರರಿದ್ದರು. 
ಕೊಪ್ಪಳ

ಅಭಿವೃದ್ಧಿಗೆ ಪ್ರಾಮುಖ್ಯ ನೀಡಿದ ಪಕ್ಷ

ಕುರುವತ್ತಿ ಶ್ರೀಕಾಂತಪ್ಪ
ಕನಕಗಿರಿ: ಪಕ್ಷ ಸ್ಥಾಪನೆಯಾದಾಗ ಬೆರಳೆಣಿಕೆಯಷ್ಟು ಸಂಸದರನ್ನು ಹೊಂದಿದ್ದ ಬಿಜೆಪಿ, ಕಾರ್ಯಕರ್ತರ ಶ್ರಮದಿಂದ ಸತತ 3ನೇ ಬಾರಿಗೆ ಕೇಂದ್ರದಲ್ಲಿ ಆಡಳಿತ ನಡೆಸುವಷ್ಟು ಬೆಳೆದಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಹೇಳಿದರು.
ಇಲ್ಲಿನ ಬಿಜೆಪಿ ಮಂಡಲ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಾರತೀಯ ಜನತಾ ಪಕ್ಷ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿಸಿದರು.
ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ ಬಿಜೆಪಿ ಇದೀಗ ದೇಶದ ಅಭಿವೃದ್ಧಿಗೂ ಅಷ್ಟೇ ಪ್ರಾಮುಖ್ಯ ನೀಡಿದೆ. ಆದ್ದರಿಂದ ದೇಶದ ಜನತೆ ಬಿಜೆಪಿ ಪರವಾಗಿ ನಿಲ್ಲುತ್ತಿದ್ದಾರೆ ಎಂದರು. ತಳಮಟ್ಟದಿಂದ ಪಕ್ಷವನ್ನು ಸಂಘಟನೆ ಮಾಡಿದ ನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಪಕ್ಷದ ಧ್ವಜಾರೋಹಣ ನೆರವೇರಿಸಲಾಯಿತು.
ನಿಕಟಪೂರ್ವ ಅಧ್ಯಕ್ಷ ಮಹಾಂತೇಶ್ ಸಜ್ಜನ್, ಮಂಡಲ ಉಪಾಧ್ಯಕ್ಷ ರಂಗಪ್ಪ ಕೊರಗಟಗಿ, ಮಂಡಲ ಪ್ರ.ಕಾರ್ಯದರ್ಶಿಗಳಾದ ಗ್ಯಾನಪ್ಪ ಗಾಣದಾಳ, ಪ್ರಕಾಶ ಹಾದಿಮನಿ, ಪಪಂ ಸದಸ್ಯರಾದ ಸುರೇಶಪ್ಪ ಗುಗ್ಗಳಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ನಾಯಕ ಧಣಿ, ಪ್ರ.ಕಾರ್ಯದರ್ಶಿ ವಿನಾಯಕ ಚಿತ್ತರಕಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಹುಲಿಗೆಮ್ಮ ನಾಯಕ, ಪ್ರ.ಕಾರ್ಯದರ್ಶಿ ನಿರ್ಮಲಾ, ಪ್ರಮುಖರಾದ ಶರಣಪ್ಪ ಭಾವಿಕಟ್ಟಿ, ರಾಚಪ್ಪ ಶೆಟ್ಟರ್, ನರಸಪ್ಪ ಕುರುಗೋಡು ಇತರರಿದ್ದರು.