ಸಂಗಣ್ಣ ಕರಡಿ 
ಕೊಪ್ಪಳ

ನೀರಾವರಿ ಯೋಜನೆಗಳಿಗೆ ಬಲ ತುಂಬಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಂಸದ ಸಂಗಣ್ಣ ಕರಡಿ ಆಗ್ರಹ
ಕೊಪ್ಪಳ : ಟಿಬಿ ಡ್ಯಾಂ ಸುರಕ್ಷತೆಗೆ ಆದ್ಯತೆ ನೀಡಿದಂತೆ ಸಿಂಗಟಾಲೂರು, ಹಿರೇಹಳ್ಳ ಹಾಗೂ ವಿಮಾನ ನಿಲ್ದಾಣ ಕಾಮಗಾರಿಗೆ ವೇಗ ನೀಡಬೇಕು ಎಂದು ಮಾಜಿ ಸಂಸದ ಸಂಗಣ್ಣ ಕರಡಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹೊಸ ಕ್ರಸ್ಟ್​ ಗೇಟ್​ ಅಳವಡಿಕೆ ಪ್ರಶಂಸನೀಯ. 28 ಟಿಎಂಸಿ ಹೂಳು ತುಂಬಿದೆ. ನವಲಿ ಸಮಾನಾಂತರ ಜಲಾಶಯ ನನೆಗುದಿಗೆ ಬಿದ್ದಿದೆ. ಡಿಪಿಆರ್​ ಇದ್ದರೂ ಯೋಜನೆ ಕಾರ್ಯಾರಂಭವಾಗಿಲ್ಲ. ಆಂಧ್ರ&ತೆಲಂಗಾಣ ಸಿಎಂಗಳು ಒಂದೇ ವೇದಿಕೆಯಲ್ಲಿ ಸಿಗಲಿದ್ದಾರೆ. ಇದೇ ಸಮಯದಲ್ಲಿ ಸಮಾನಾಂತರ ಜಲಾಶಯ ಅನುಷ್ಠಾನ ರ್ನಿಣಯ ಕೈಗೊಳ್ಳಬೇಕೆಂಬುದು ಜನರ ಒತ್ತಾಸೆ. ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಿಸಬೇಕು. ಕೃಷ್ಣಾ&ತುಂಗಭದ್ರಾ ನದಿ ಜೋಡಣೆ ಮಾಡಬೇಕು. ಇದರಿಂದ ಭವಿಷ್ಯಕ್ಕೆ ದಾರಿ ಆಗಲಿದೆ ಎಂದು ಒತ್ತಾಯಿಸಿದ್ದಾರೆ.
ಜಿಲ್ಲೆ ಕೆರೆಗಳನ್ನು ತುಂಬಿಸುವ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಿ. ಸಿಂಗಟಾಲೂರು ಏತ ನೀರಾವರಿ ಆದಷ್ಟು ಬೇಗ ಜಾರಿಯಾಗಲಿ. ಯೋಜನೆ ಜಾರಿಯಾಗದ ಕಾರಣ ರೈತರು ಖಾಸಗಿ ಕಂಪನಿಗಳಿಗೆ ಭೂಮಿ ಮಾರಾಟ ಮಾಡುತ್ತಿದ್ದಾರೆ. ಮಹಾತ್ವಾಕಾಂೆ ಯೋಜನೆ ಹಾಳಾದಂತಾಗಲಿದೆ. ಅದಕ್ಕೆ ಅವಕಾಶ ನೀಡಬಾರದು. ಹಿರೇಹಳ್ಳದ ಎಡ ಮತ್ತು ಬಲ ಕಾಲುವೆಗಳು ಭಾಗಶ@ ಹಾಳಾಗಿದ್ದು, ಕಾಲುವೆಗಳ ನವೀಕರಣ ಮಾಡಬೇಕು. ಸಿಎಂ ಡಿಕೆಶಿ ಈ ಕಾಮಗಾರಿಗಳಿಗೆ ಆದ್ಯತೆ ನೀಡಬೇಕೆಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
"

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರು ನೀರಾವರಿ ಸಚಿವರಾಗಿ ಹಲವಾರು ಮಹತ್ತರ ಕಾರ್ಯಗಳನ್ನು ಮಾಡಿದ್ದಾರೆ. ಸಿಎಂ ಆಗಿರುವ ಅವಧಿಯಲ್ಲಿ ನವಲಿ ಸಮಾನಾಂತರ ಜಲಾಶಯ, ಸಿಂಗಟಾಲೂರು, ಹಿರೇಹಳ್ಳ ಹಾಗೂ ವಿಮಾನ ನಿಲ್ದಾಣ ಯೋಜನೆ ಜಾರಿ ಮಾಡಬೇಕು.

— ಸಂಗಣ್ಣ ಕರಡಿ, ಮಾಜಿ ಸಂಸದ ಕೊಪ್ಪಳ.