ಮೊಬೈಲ್ ಹ್ಯಾಕ್  
ಕೊಪ್ಪಳ

ಮಾಜಿ ಮಂತ್ರಿ ಮೊಬೈಲ್ ಹ್ಯಾಕ್

ಶಾಮಸುಂದರ್ ಕೊಪ್ಪಳಕರ್
ಗಂಗಾವತಿ: ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ ಅವರಿಗೆ ಸಂಬಂಧಿಸಿದ ಮೊಬೈಲ್ ಇತರ ಸಂವಹನ ಖಾತೆಗಳು ಹ್ಯಾಕ್ ಆಗಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೋರಿಯರ್ ನೆಪದಲ್ಲಿ ಕರೆ ಮಾಡಿದ ಹ್ಯಾಕರ್‌ಗಳು, ಪಾಸ್‌ವರ್ಡ್ ಮತ್ತು ಸ್ಟಾರ್ ಒತ್ತುವಂತೆ ತಿಳಿಸಿದ್ದಾರೆ. ನಂಬಿದ ಸಚಿವ ಹ್ಯಾಕರ್ ಹೇಳಿದಂತೆ ಮಾಡಿದ್ದರಿಂದ ಮೊಬೈಲ್ ಹ್ಯಾಕ್ ಆಗಿದೆ. ತಕ್ಷಣದಿಂದಲೇ ಹಣಕ್ಕೆ ಬೇಡಿಕೆ ಇಟ್ಟಿರುವುದು ಗೊತ್ತಾಗಿದ್ದು, ಸೈಬರ್ ಕ್ರೈಂಗೆ ದೂರು ನೀಡಲಾಗಿದೆ ಎಂದು ಮಾಜಿ ಸಚಿವ ಎಂ.ಮಲ್ಲಿಕಾರ್ಜುನನಾಗಪ್ಪ ತಿಳಿಸಿದ್ದಾರೆ.
ಮೊಬೈಲ್ ಹ್ಯಾಕ್ ಮಾಡಿ, ನನ್ನ ಪರಿಚಯಸ್ಥರು ಮತ್ತು ಸ್ನೇಹಿತರಿಂದ ಹಣದ ಬೇಡಿಕೆಯನ್ನಿಡುತ್ತಿರುವುದು ಗೊತ್ತಾಗಿದ್ದು, ಯಾರೂ ನಂಬಬಾರದು ಮತ್ತು ನನ್ನ ಮೊಬೈಲ್ ನಂಬರ್‌ಗೆ ಹಣ ಹಾಕದಂತೆ ಮನವಿ ಮಾಡಿದ್ದಾರೆ.