ಕೊಪ್ಪಳದಲ್ಲಿ ಶುಕ್ರವಾರ ಫುಟ್​ಪಾತ್​ ಅತಿಕ್ರಮಿತ ಕಟ್ಟಡಗಳನ್ನು ತೆರವು ಮಾಡುವಾಗ ವ್ಯಾಪಾರಿಗಳು ಪೌರಾಯುಕ್ತ ವೆಂಕಟೇಶ ನಾಗನೂರು ಅವರೊಂದಿಗೆ ವಾಗ್ವಾದ ನಡೆಸಿದರು.  
ಕೊಪ್ಪಳ

ಫುಟ್​ಪಾತ್​ ಅತಿಕ್ರಮ ತೆರವು

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳೊಂದಿಗೆ ವಾಗ್ವಾದ
ಕೊಪ್ಪಳ: ನಗರಸಭೆ ಅಧಿಕಾರಿಗಳು ನಗರದಲ್ಲಿ ಅತಿಕ್ರಮವಾಗಿರುವ ಫುಟ್​ಪಾತ್​ ​ ತೆರವು ಕಾರ್ಯಾಚರಣೆ ಶುಕ್ರವಾರ ಆರಂಭಿಸಿದರು. ಅಂಗಡಿ ತೆರವು ಮಾಡುತ್ತಿದ್ದಂತೆ ಅಂಗಡಿಕಾರರು, ಕೆಲ ಬೀದಿ ಬದಿ ವ್ಯಾಪಾರಿಗಳು ತಡೆವೊಡ್ಡಿ ವಾಗ್ವಾದ ನಡೆಸಿದರು.
ನಗರದ ಮುಖ್ಯ ರಸ್ತೆ ಹಾಗೂ ಜವಾಹರ್​ ರಸ್ತೆ ಸೇರಿ ಬಹುತೇಕ ರಸ್ತೆಗಳ ಪಾದಾಚಾರಿ ರಸ್ತೆ ಅತಿಕ್ರಮವಾಗಿದೆ. ಇದರಿಂದ ಪಾದಾಚಾರಿಗಳ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ವಾಹನಗಳು ರಸ್ತೆಯಲ್ಲಿ ನಿಲ್ಲುತ್ತಿವೆ. ಕೆಲ ತಳ್ಳು ಬಂಡಿಗಳು, ತರಕಾರಿ ವ್ಯಾಪಾರಿಗಳು ನಡುರಸ್ತೆಯಲ್ಲಿಯೇ ಬಂಡಿ ಹಾಗೂ ವಾಹನಗಳನ್ನು ನಿಲ್ಲಿಸಿ ವ್ಯಾಪಾರ ಮಾಡುವುದು ಸಾಮಾನ್ಯ ಎಂಬಂತಾಗಿದೆ. ುಟ್​ಪಾತ್​ ಅತಿಕ್ರಮ ತೆರವುಗೊಳಿಸುವಂತೆ ಸಾರ್ವಜನಿಕರು ನಗರಾಡಳಿತಕ್ಕೆ ನಿರಂತರ ಒತ್ತಡ ಹಾಕುತ್ತಿದ್ದಾರೆ.
ಶುಕ್ರವಾರ ಸಂಜೆ ನಗರಸಭೆ ಪೌರಾಯುಕ್ತ ವೆಂಕಟೇಶ ನಾಗನೂರ ಸಮ್ಮುಖದಲ್ಲಿ ಜೆಸಿಬಿಗಳೊಂದಿಗೆ ಅಧಿಕಾರಿಗಳು ಬಸವೇಶ್ವರ ನಗರ, ಬನ್ನಿಕಟ್ಟಿ ಏರಿಯಾ ಬಳಿ ಅನಧಿಕೃತ ಕಟ್ಟಡ ತೆರವು ಮಾಡಿದರು. ಏಕಾಏಕಿ ಕಾರ್ಯಾಚರಣೆಗೆ ಇಳಿದಿದ್ದರಿಂದ ಅಂಗಡಿಕಾರರು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು. ನೋಟಿಸ್​ ನೀಡದೇ, ಮಾಹಿತಿ ತಿಳಿಸದೆ ತೆರವು ಮಾಡದಂತೆ ಅಡ್ಡಿಪಡಿಸಿದರು. ಆದರೂ ಮಾತು ಕೇಳದ ಅಧಿಕಾರಿಗಳು ಕೆಲ ಅಂಗಡಿಗಳನ್ನು ತೆರವುಗೊಳಿಸಿದರು. ಜನರಿಗೆ ಮನವರಿಕೆ ಮಾಡಲು ಯತ್ನಿಸಿದರು.
"

ಫುಟ್ಪಾತ್​ನಲ್ಲಿ ಅಕ್ರಮವಾಗಿ ನಿರ್ಮಿಸಿರುವ ಶಾಶ್ವತ ಕಟ್ಟಡಗಳನ್ನು ಮಾತ್ರ ತೆರವು ಮಾಡುತ್ತಿದ್ದೇವೆ. ಬೀದಿ ಬದಿ ವ್ಯಾಪಾರಿಗಳು, ತಳ್ಳು ಗಾಡಿ ವ್ಯಾಪಾರಿಗಳಿಗೆ ತೊಂದರೆ ಮಾಡುವುದಿಲ್ಲ. ಈ ಬಗ್ಗೆ ಅವರಿಗೆ ಮನವರಿಕೆ ಮಾಡಿದ್ದೇವೆ. ಕೆಲವರು ತಪು$್ಪ ತಿಳಿವಳಿಕೆಯಿಂದ ನಮ್ಮೊಡನೆ ವಾಗ್ವಾದ ಮಾಡಿದರು. ಸಮಜಾಯಿಷಿ ನೀಡಿ ಕಾರ್ಯಾಚರಣೆ ಮುಂದುವರೆಸುತ್ತೇವೆ.