ಕೊಪ್ಪಳ ವಿವಿಯಲ್ಲಿ ಗುರುವಾರ ಹಾರ ಮೇಳ ಆಯೋಜಿಸಲಾಯಿತು.  
ಕೊಪ್ಪಳ

ಕೊಪ್ಪಳ ವಿವಿಯಲ್ಲಿ ಆಹಾರ ಮೇಳ

ರವೀಂದ್ರ ರಡ್ಡಿ

ಪ್ರಮುಖ ಮುಖ್ಯಾಂಶಗಳು

  • ಆಹಾರ ಮಾಡಿ ಉಣಬಡಿಸಿದ ವಿದ್ಯಾರ್ಥಿಗಳು
ಕೊಪ್ಪಳ : ಕೊಪ್ಪಳ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದಿಂದ ಗುರುವಾರ ಮುಖ್ಯ ಆವರಣದಲ್ಲಿ ಆಹಾರ ಮೇಳ ನಡೆಯಿತು.
ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು 15 ಅಂಗಡಿಗಳನ್ನು ತೆರದು ಆಕರ್ಫಿಕ ಹೆಸರುಗಳನ್ನು ಇಟ್ಟು ರುಚಿ ಮತ್ತು ಶುಚಿಯಾದ ತಿಂಡಿ ತಿನಿಸುಗಳನ್ನು ತಯಾರು ಮಾಡಿ ಮಾರಾಟ ಮಾಡಿದರು.
ಅಕ್ಕಿರೊಟ್ಟಿ, ರಾಗಿರೊಟ್ಟಿ, ಜೋಳದ ರೊಟ್ಟಿ, ಎಣ್ಣೆಗಾಯಿ, ವೆಜ್​ ಬಿರಿಯಾನಿ, ವೆಜ್​ ಕಬಾಬ್​, ಒತ್ತು ಶಾವಿಗೆ, ವಿವಿಧ ಬಗೆಯ ಕಾಯಿ, ಕಡ್ಲೆ ಬೀಜ, ಬೇಳೆ ಒಬ್ಬಟ್ಟು, ರೆವೆ ಉಂಡೆ, ಗುಲಾಬ್​ ಜಾಮೂನ್​, ಟಿ-ಕಾಫಿ, ಮಜ್ಜಿಗೆ, ಪಾನಕ, ವಿವಿಧ ಬಗೆಯ ಹಣ್ಣಿನ ಜ್ಯೂಸ್​ಗಳನ್ನು ಸ್ಥಳದಲ್ಲಿಯೇ ತಯಾರಿಸಿ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಲಾಯಿತು.
ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಅಲ್ತಾಪ್​ ಹುಸೇನ್​ ಮಾತನಾಡಿ, ಯುವ ಸಮೂಹ ಸರ್ಕಾರಿ ಕೆಲಸಕ್ಕಾಗಿ ಕಾಯದೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಹಾಗೂ ವಿರ್ದ್ಯಾರ್ಥಿಗಳಿಗೆ ಮಾರುಕಟ್ಟೆ ನಿರ್ವಹಣೆ, ನಾಯಕತ್ವ ಗುಣ, ಗುಂಪಿನಲ್ಲಿ ಕಾರ್ಯಾಚರಣೆ, ಹಣಕಾಸು ನಿರ್ವಹಣೆ, ವ್ಯವಹಾರ ಅನುಭವ, ಔದ್ಯೋಗಿಕ ಕೌಶಲ, ಪಾಲುದಾರಿಕೆ, ಕೊಳ್ಳುವಿಕೆ-ಮಾರುವಿಕೆ, ಲಾಭ-ನಫ್ಟಿ ಅಂಶಗಳನ್ನು ಕಲಿಸುವ ಪ್ರಾಥಮಿಕ ಉದ್ದೇಶದಿಂದ ಆಹಾರ ಮೇಳ ಆಯೋಜಿಸಲಾಗಿದೆ ಎಂದರು.
ವಿದ್ಯಾರ್ಥಿಗಳು, ಉಪನ್ಯಾಸಕರು ಸೇರಿದಂತೆ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದರು.