ಗಂಗಾವತಿಯ ವಿರುಪಾಪುರದ ವಡ್ಡರ ಓಣಿಯಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಆಚರಿಸಲಾಯಿತು. ಭೋವಿ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಹುಲ್ಲೇಶ ಬಂಡಿ, ಮುಖಂಡರಾದ ಗಾಳೆಪ್ಪ ಭೋವಿ, ನಾಗರಾಜ ಚಳಿಗೇರಿ, ರಾಘವೇಂದ್ರ ಮಲ್ಲಾಪುರ ಇತರರಿದ್ದರು.
- ಭೋವಿ ಯುವ ಘಟಕದ ಜಿಲ್ಲಾಧ್ಯಕ್ಷ ಹುಲ್ಲೇಶ ಬಂಡಿ ಸಲಹೆ
- ಗಂಗಾವತಿ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ
ಗಂಗಾವತಿ: ನಗರದ ವಿರುಪಾಪುರದ ವಡ್ಡರ ಓಣಿಯಲ್ಲಿ ರಾಜ್ಯ ಭೋವಿ ವಡ್ಡರ ಮಹಾಸಭಾದಿಂದ ಹಮ್ಮಿಕೊಂಡಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಬುಧವಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಪುಷ್ಪಾರ್ಪಣೆ ಮಾಡಿದ ಯುವ ಘಟಕದ ಜಿಲ್ಲಾಧ್ಯಕ್ಷ ಹುಲ್ಲೇಶ ಬಂಡಿ ಮಾತನಾಡಿ, ಸಮ ಸಮಾಜ ನಿರ್ಮಾಣಕ್ಕೆ ಶರಣರು ನೀಡಿದ ಸಂದೇಶಗಳನ್ನು ಜೀವನದಲ್ಲಿ ಅನುಸರಿಸಬೇಕಿದೆ ಎಂದರು.
ಸಮಾಜದ ಮುಖಂಡರಾದ ಗಾಳೆಪ್ಪ ಭೋವಿ, ನಾಗರಾಜ ಚಳಿಗೇರಿ, ರಾಘವೇಂದ್ರ ಮಲ್ಲಾಪುರ, ಜಿ.ಕೆ.ಶ್ರೀಧರ ಕಷ್ಣಾಪುರ, ದತ್ತು, ರಾಘು, ಮಣಿಕಂಠ, ಆರ್.ಸೋಮಪ್ಪ ಸಾಯಿನಗರ, ಡಿ.ರಮೇಶ್ ರಾಘವೇಂದ್ರ, ಕುಮಾರ ಸಂಗಾಪುರ, ಯಲ್ಲಪ್ಪ ಸಂಗಾಪುರ, ಗುರುಸ್ವಾಮಿ, ಪರಸಪ್ಪ, ಹುಲುಗಪ್ಪ, ಲಕ್ಷ್ಮಣ, ಹುಲುಗಪ್ಪ ಹಳ್ಳಿ, ದುರ್ಗೇಶ, ಗುರುರಾಜ ಇತರರಿದ್ದರು.
ಸಂಗಾಪುರ: ತಾಲೂಕಿನ ಸಂಗಾಪುರದಲ್ಲಿ ಶ್ರೀಸಿದ್ದರಾಮೇಶ್ವರ ವೃತ್ತದಲ್ಲಿ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತ್ಯುತ್ಸವ ಆಚರಿಸಲಾಯಿತು. ಸಿದ್ದರಾಮೇಶ್ವರ ನಾಮಲಕಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಗ್ರಾಪಂ ಮಾಜಿ ಉಪಾಧ್ಯಕ್ಷ ರಾಮಕೃಷ್ಣ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಮಂಜವ್ವ ಸಂಗಾಪುರ, ಪಿಡಿಒ ಸೈಯ್ಯದ್ ಜಿಲಾನಿ, ಸಿಬ್ಬಂದಿ ಕೆ.ಉಮೇಶ, ರಾಮಾಂಜನೇಯ, ಗೋಪಾಲ, ಪರಸಪ್ಪ, ಭೋವಿ ಸಮಾಜದ ಯುವ ಘಟಕ ಅಧ್ಯಕ್ಷ ಹುಲ್ಲೇಶ ಬಂಡಿ, ಪ್ರಮುಖರಾದ ಕುಮಾರ್ ಭೋವಿ, ಯಲ್ಲಪ್ಪ, ಮಂಜು, ಅಂಬರೀಶ್, ಮಧುಕುಮಾರ್, ಶರಣಪ್ಪ ಭೋವಿ, ಪರಶುರಾಮ್, ತಿಪ್ಪಣ್ಣ, ದೇವ ಭೋವಿ ಇತರರಿದ್ದರು.