ಮ್ಯಾದನೇರಿ ಗ್ರಾಮದಲ್ಲಿ ಆಯೋಜಿಸಿದ್ದ ಜನಪದ ಸಂಗಮ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣ ಕುಮಾರ ಉದ್ಘಾಟಿಸಿದರು. ಜನಪದ ಸಂಘದ ಅಧ್ಯಕ್ಷ ಫಕೀರಪ್ಪ ಹೊಸೂರು, ಕಲಾವಿದರಾದ ರಾಮಪ್ಪ ಪೂಜಾರ, ವೀರಯ್ಯ ಆಡೂರ, ಸಹನಾ ಡಿ. ಪೂಜಾರ, ಇಂದ್ರಮ್ಮ ಆಡೂರ, ಬಸವರಾಜ ಮಹಾಂತ, ಶೇಖರಗೌಡ ಇತರರಿದ್ದರು.
- ಇಲಾಖೆ ಸಹಾಯಕ ನಿರ್ದೇಶಕ ಕರ್ಣ ಕುಮಾರ ಹೇಳಿಕೆ
- ಜನಪದ ಸಂಗಮ ಕಾರ್ಯಕ್ರಮ
ಯಲಬುರ್ಗಾ: ಮರೆಯಾಗುತ್ತಿರುವ ಜನಪದ ಕಲೆಗಳನ್ನು ಪ್ರೋತ್ಸಾಹಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಇಲಾಖೆ ಸಹಾಯಕ ನಿರ್ದೇಶಕ ಕರ್ಣ ಕುಮಾರ ಹೇಳಿದರು.
ತಾಲೂಕಿನ ಮ್ಯಾದನೇರಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹರ್ಷಿ ವಾಲ್ಮೀಕಿ ಸಾಂಸ್ಕೃತಿಕ ಮತ್ತು ಜನಪದ ಸಂಘದಿಂದ ಬುಧವಾರ ಆಯೋಜಿಸಿದ್ದ ಜನಪದ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ನವಮಾಧ್ಯಮ ಹಾವಳಿಯಿಂದ ಮೂಲ ಜನಪದ ಕಲೆಗಳು ಮರೆಯಾಗುತ್ತಿವೆ. ಜನಪದ ಸಾಹಿತ್ಯ ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆ.
ಗ್ರಾಮೀಣ ಪ್ರದೇಶದಲ್ಲಿ ಮೂಲ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ರಮ ಆಯೋಜಿಸಿ ಕಲಾವಿದರಿಗೆ ಅವಕಾಶ ನೀಡುತ್ತಿರುವ ಮ್ಯಾದನೇರಿಯ ಮಹರ್ಷಿ ವಾಲ್ಮೀಕಿ ಸಾಂಸ್ಕೃತಿಕ ಮತ್ತು ಜನಪದ ಕಲಾ ಸಂಘದ ಕಾರ್ಯ ಶ್ಲಾಘನಾರ್ಹ ಎಂದರು.
ಸಂಘದ ಕಾರ್ಯದರ್ಶಿ ಡಿ.ಎಸ್.ಪೂಜಾರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಲು ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಲಾಗುತ್ತಿದೆ. ಎಲ್ಲ ಪ್ರಕಾರದ ಕಲಾವಿದರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಫಕೀರಪ್ಪ ಹೊಸೂರು, ಪ್ರಭಾರ ಮುಖ್ಯಶಿಕ್ಷಕ ಗವಿಸಿದ್ದಪ್ಪ ಬಿಸರಳ್ಳಿ, ಕಲಾವಿದರಾದ ರಾಮಪ್ಪ ಪೂಜಾರ, ವೀರಯ್ಯ ಆಡೂರ, ಸಹನಾ ಡಿ.ಪೂಜಾರ, ಇಂದ್ರಮ್ಮ ಆಡೂರ, ಬಸವರಾಜ ಮಹಾಂತ, ಶೇಖರಗೌಡ ಪೂಜಾರ, ವಿರೂಪಾಕ್ಷಪ್ಪ ದೇಸಾಯಿ, ಮಂಜುನಾಥ ಬಂಡಿಹರ್ಲಾಪುರ, ಶಿವಮೂರ್ತಿ ದೊಡ್ಮನಿ, ಹಾಲೇಶ, ಬಸವರಾಜ ಕರಮುಡಿ, ದೇವಪ್ಪ ಗುತ್ತೂರ, ಶ್ರೀಕಾಂತಗೌಡ ಚಿಕ್ಕಸುಳಿಕೇರಿ, ಪ್ರಮುಖರಾದ ಆದಯ್ಯಸ್ವಾಮಿ, ಬಸಲಿಂಗಯ್ಯ ಹಿರೇಮಠ ಇತರರಿದ್ದರು.