ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಸ್ವಚ್ಛತಾ ಅಭಿಯಾನ ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಿಡಿಒ ಮಲ್ಲಿಕಾರ್ಜುನ ಕಡಿವಾಳ್, ದೇವಾಲಯ ಆಡಳಿತ ಮಂಡಳಿ ವ್ಯವಸ್ಥಾಪಕ ಎಂ.ವೆಂಕಟೇಶ, ಎಸ್‌ಬಿಎಂ ಸಮಾಲೋಚಕಿ ಬಸಮ್ಮ ನರೇಗಲ್, ಸಾಹಸ ಸಂಸ್ಥೆ ಪ್ರತಿನಿಧಿಗಳಾದ ಸಂಪತ್‌ಕುಮಾರ, ಜೋಗದ ಮಂಜುನಾಥ ಇತರರಿದ್ದರು.
ಪ್ಲ್ಯಾಸ್ಟಿಕ್ ಬಳಸುತ್ತಿದ್ದ ವ್ಯಾಪಾರಿಗಳಿಗೆ ದಂಡ
ಗಂಗಾವತಿ: ಪ್ಲಾೃಸ್ಟಿಕ್ ಪ್ರೇರಿತ ವಸ್ತುಗಳ ಬಳಕೆ ನಿಷೇಧಿಸಲಾಗಿದ್ದು, ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪಿಡಿಒ ಮಲ್ಲಿಕಾರ್ಜುನ ಕಡಿವಾಳ್ ಹೇಳಿದರು.
ತಾಲೂಕಿನ ಆನೆಗೊಂದಿ ಗ್ರಾಪಂ ವ್ಯಾಪ್ತಿಯಲ್ಲಿ ತಾಪಂ ಎನ್‌ಆರ್‌ಎಲ್‌ಎಂ, ಗ್ರಾಪಂ, ಧಾರ್ಮಿಕ ದತ್ತಿ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಏಕ ಬಳಕೆ ಪ್ಲಾೃಸ್ಟಿಕ್ ನಿಷೇಧದ ಬಗ್ಗೆ ವ್ಯಾಪಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಹಲವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ವ್ಯಾಪ್ತಿಯಲ್ಲಿ ಪ್ಲ್ಯಾಸ್ಟಿಕ್ ಬಳಕೆ ಹೆಚ್ಚುತ್ತಿದ್ದು, ಪರಿಸರ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವಂತೆ ತಿಳಿಸಿದರು. ಆನೆಗೊಂದಿ, ಪಂಪಾಸರೋವರ, ಅಂಜನಾದ್ರಿ ಬೆಟ್ಟದ ವ್ಯಾಪ್ತಿಯಲ್ಲಿ ಸಂಚರಿಸಿ ಪ್ಲ್ಯಾಸ್ಟಿಕ್ ಬಳಸುತ್ತಿದ್ದ ವ್ಯಾಪಾರಿಗಳಿಗೆ ದಂಡ ವಿಧಿಸಿ ಪ್ಲ್ಯಾಸ್ಟಿಕ್ ಪ್ರೇರಿತ ವಸ್ತುಗಳನ್ನು ಜಪ್ತಿ ಮಾಡಿದರು.
ದೇವಾಲಯ ಆಡಳಿತ ಮಂಡಳಿ ವ್ಯವಸ್ಥಾಪಕ ಎಂ.ವೆಂಕಟೇಶ, ಎಸ್‌ಬಿಎಂ ಸಮಾಲೋಚಕಿ ಬಸಮ್ಮ ನರೇಗಲ್, ಗ್ರಾಪಂ ಕಾರ್ಯದರ್ಶಿ ಮನೋರಮಾ, ಸಿಬ್ಬಂದಿ ರಾಘವೇಂದ್ರ, ಶಬ್ಬಿರ್, ಸಾಹಸ ಸಂಸ್ಥೆ ಪ್ರತಿನಿಧಿಗಳಾದ ಸಂಪತ್‌ಕುಮಾರ, ಜೋಗದ ಮಂಜುನಾಥ ಇತರರಿದ್ದರು.