ಗಂಗಾವತಿ ಲಕ್ಷ್ಮಿಕ್ಯಾಂಪ್ ಸ.ಹಿ.ಪ್ರಾ.ಶಾಲೆ ಆವರಣದಲ್ಲಿ ನಗರಸಭೆ ಮತ್ತು ನಗರಾಭಿವೃದ್ಧಿ ಕೋಶದಿಂದ ಹಮ್ಮಿಕೊಂಡ ಘನತ್ಯಾಜ್ಯ ವಿಲೇವಾರಿ ಪ್ರಾತ್ಯಕ್ಷಿಕೆ ಅಭಿಯಾನದಲ್ಲಿ ಪರಿಸರ ಇಂಜಿನಿಯರ್ ಶರಣಪ್ಪ ಮಾತನಾಡಿದರು. ನಗರಸಭೆ ಮಾಜಿ ಸದಸ್ಯ ನವೀನ ಮಾ.ಪಾಟೀಲ್, ವಾರ್ಡ್ ಪ್ರಮುಖ ಮಂಜುನಾಥ ಇತರರಿದ್ದರು.
- ನಗರಸಭೆ ಇಂಜಿನಿಯರ್ ಶರಣಪ್ಪ ಎಚ್ಚರಿಕೆ
- ಗಂಗಾವತಿ ಘನತ್ಯಾಜ್ಯ ವಿಲೇವಾರಿ ಪ್ರಾತ್ಯಕ್ಷಿಕೆ
ಗಂಗಾವತಿ: ಪರಿಸರ ಸ್ವಚ್ಛತೆಗೆ ಪ್ರತಿಯೊಬ್ಬರು ಸಹಕರಿಸಬೇಕಿದ್ದು, ಘನತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸುವಂತೆ ನಗರಸಭೆ ಇಂಜಿನಿಯರ್ ಶರಣಪ್ಪ ಸಲಹೆ ನೀಡಿದರು.
ನಗರದ ಲಕ್ಷ್ಮಿಕ್ಯಾಂಪ್ ಸ.ಹಿ.ಪ್ರಾ.ಶಾಲೆ ಆವರಣದಲ್ಲಿ ನಗರಸಭೆ ಮತ್ತು ನಗರಾಭಿವೃದ್ಧಿ ಕೋಶದಿಂದ ಹಮ್ಮಿಕೊಂಡಿದ್ದ ಘನತ್ಯಾಜ್ಯ ವಿಲೇವಾರಿ ಪ್ರಾತ್ಯಕ್ಷಿಕೆ ಅಭಿಯಾನದಲ್ಲಿ ಮಾತನಾಡಿದರು. ಶುದ್ಧ ಗಾಳಿ, ನೀರು ಮತ್ತು ವಾತಾವರಣಕ್ಕೆ ಪರಿಸರ ಸ್ವಚ್ಛತೆ ಪ್ರಮುಖ ಕಾರಣವಾಗಿದ್ದು, ಎಲ್ಲೆಂದರಲ್ಲಿ ಕಸ ಹಾಕುವುದು, ಮಲೀನಗೊಳಿಸುವುದು ಸರಿಯಲ್ಲ. ಒಣ, ಹಸಿ, ವಿಶೇಷ ಕಸಗಳನ್ನು ಪ್ರತ್ಯೇಕ ರೀತಿಯಲ್ಲಿ ವಿಲೇವಾರಿ ಮಾಡಬೇಕಿದ್ದು, ಕಸ ಎಲ್ಲೆಂದರಲ್ಲಿ ಹಾಕಿದರೆ ದಂಡದ ಜತೆಗೆ ಪ್ರಕರಣ ದಾಖಲಿಸಲು ಕಾಯ್ದೆಯಲ್ಲಿ ಅವಕಾಶವಿದೆ ಎಂದರು.
ಸಮುದಾಯ ಸಂಘಟಕಿ ವಿಜಯಲಕ್ಷ್ಮಿ ಮಾತನಾಡಿ, ಮಹಿಳೆಯರು ಘನ ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಬೇಕಿದ್ದು, ಮನೆ ಸುತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸಲಹೆ ನೀಡಿದರು.
ಘನತ್ಯಾಜ್ಯ ವಿಲೇವಾರಿ ಮತ್ತು ಉಪಯೋಗದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು. ನಗರಸಭೆ ಮಾಜಿ ಸದಸ್ಯ ನವೀನ ಮಾ.ಪಾಟೀಲ್, ವಾರ್ಡ್ ಪ್ರಮುಖ ಮಂಜುನಾಥ, ಆರೋಗ್ಯ ನಿರೀಕ್ಷಕ ಎ.ನಾಗರಾಜ್, ರಾಧಿಕಾ, ಮೇಲ್ವಿಚಾರಕರಾದ ಮಹ್ಮದ್ ರಫೀ, ಮೋಯಿನ್ ಪಟೇಲ್, ಯೂಸ್ೂ, ಸುಭಾಷ, ಗಂಗಾಧರ ಹಾಗೂ ಸಮುದಾಯ ಸಂಚಾಲಕರಿದ್ದರು.