ಕೊಪ್ಪಳದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಬಸವಜಯಮೃತ್ಯುಂಜಯ ಸ್ವಾಮೀಜಿ ಉದ್ಘಾಟಿಸಿದರು 
ಕೊಪ್ಪಳ

ಮೀಸಲು ಸಿಗುವವರೆಗೂ ಹೋರಾಟ

ಪ್ರಮುಖ ಮುಖ್ಯಾಂಶಗಳು

  • ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ
ಕೊಪ್ಪಳ : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ಕಲ್ಪಿಸುವಲ್ಲಿ ನಮ್ಮವರೇ ಅಡದಡಗಾಲಾಗುತ್ತಿದ್ದಾರೆ‌. ಅವರು ಯಾರೆಂಬುದು ಜಗಜ್ಜಾಹಿರಾಗಿದೆ ಎಂದು ಕೂಡಲ ಸಂಗಮ. ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ತಮ್ಮ ಜನ್ಮದಿನ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಭಾಗಿಯಾಗಿ ಮಾತನಾಡಿದರು.
ಅಧಿಕಾರಕ್ಕಾಗಿ ಅನಿವಾರ್ಯವಾಗಿ ನಮ್ಮವರೇ ಅಡ್ಡಗಾಲಾಗುತ್ತಾರೆ. ಅದು ಮನುಷ್ಯನ ಸಹಜ ಗುಣ. ಸರ್ಕಾರ ನಮಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ. ಎಲ್ಲ ಸಮುದಾಯದ ರಾಜಕಾರಣಿಗಳು ಅಧಿಕಾರ ಇದ್ದಾಗ ಮಾತನಾಡುವುದಿಲ್ಲ. ಮಾಜಿಗಳಾದಾಗ ಮಾತನಾಡುತ್ತಾರೆ. ನಾವು ಗುರುಗಳು, ಹಾಲಿ-ಮಾಜಿ ಆಗುವುದಿಲ್ಲ. ಸಮಾಜದ ಋಣ ತೀರಿಸಿಕೊಂಡು ಹೋಗುತ್ತೇವೆ. ರಕ್ತ ಕೊಟ್ಟೇವು ಆದರೆ ಮೀಸಲಾತಿ ಬಿಡುವುದಿಲ್ಲ ಎಂಬ ಘೋಷವಾಖ್ಯದೊಂದಿಗೆ ಪ್ರತಿವರ್ಷ ಒಂದೊಂದು ಭಾಗದಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಈ ವರ್ಷ ಕೊಪ್ಪಳದಲ್ಲಿ ಮಾಡಲಾಗುತ್ತಿದೆ. ನಮ್ಮ ಮೇಲೆನ ಪ್ರೀತಿಗೆ ರಾಜ್ಯಾದಾದ್ಯಂತ ರಕ್ತ ದಾಸೋಹ ಶಿಬಿರ ನಡೆಯುತ್ತಿವೆ‌. ಮೀಸಲಾತಿ ವಿಚಾರದಲ್ಲಿ ಸರ್ಕಾರ ತನ್ನ ನಿಲುವು ಹೇಳಿಬಿಟ್ಟಿದೆ. ನಮ್ಮ ಹೋರಾಟವನ್ನ ಅವಮಾನ ಮಾಡಿದೆ ಎಂದು ಬೇಸರಿಸಿದರು.
ಕಳೆದ ಸರ್ಕಾರದಲ್ಲಿ ಜನ ಪ್ರತಿನಿಧಿಗಳು ನಿಷ್ಠೂರವಾಗಿ ಮಾತನಾಡುತ್ತಿದ್ದರು. ಈ ಸರ್ಕಾರದಲ್ಲಿ ಮಾತನಾಡುತ್ತಿಲ್ಲ. ಆದರೂ ನಮ್ಮೊಂದಿಗಿದ್ದಾರೆ‌. ಮೊದಲು ನಮ್ಮ ಸಮುದಾಯ ಬಳಸಿಕೊಂಡು ಬೇರೆಯವರು ಉದ್ಧಾರ ಆಗುತ್ತಿದ್ದರು. ಈಗ ನಮ್ಮವರೇ ಉದ್ಧಾರ ಆಗುತ್ತಿದ್ದಾರೆಂಬ ಸಮಾಧಾನವಿದೆ. ಇಬ್ಬರು ಸಚಿವರಲ್ಲಿ ಒಬ್ಬರು ಮೊದಲಿನಿಂದಲೂ ಮಾತಾಡಿಲ್ಲ. ಇನ್ನೊಬ್ಬರು ನಮಗೆ ಸ್ಪಂದಿಸಿದ್ದಾರೆ. ಸಿಎಂ‌ ಜತೆಗೂ ಮಾತನಾಡಿದ್ದಾರೆ. ಬಹಿರಂಗವಾಗಿ ಮಾತನಾಡುವ ಶಕ್ತಿ ಅವರಿಗೆ ಬರಲಿ ಎಂದರು.
"

ನಮ್ಮದು ನ್ಯಾಯಯುತ ಹೋರಾಟ. ಸಾತ್ವಿಕ ಹೋರಾಟಕ್ಕೆ ಮನ್ನಣೆ ಸಿಗುವುದಿಲ್ಲ ಎಂದು ಗೊತ್ತಿದೆ. ಆದರೂ ಅದು ಅನಿವಾರ್ಯ. ಮೀಸಲಾತಿ ಕೇಳುವುದು ಸಂವಿಧಾನ ವಿರೋಧಿ ಎಂದು ಸದನದಲ್ಲೇ ಸಿಎಂ ಹೇಳಿದ್ದಾರೆ. ಇಷ್ಟೆಲ್ಲ ಆದ ಮೇಲೆ ಅವರ ಬಳಿ ಹೋಗುವುದರಲ್ಲಿ ಅರ್ಥವಿಲ್ಲ.