ಖಾಸಗಿ ಕಂಪನಿ-ರೈತರ ನಡುವೆ ಹೊಡೆದಾಟ
- ಬಾಸುಂಡೆ ಬರುವಂತೆ ಹೊಡೆದ ಕಾರ್ಮಿಕರು
ಕೊಪ್ಪಳ: ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದಲ್ಲಿ ವಿದ್ಯತ್ ಹೈ ಟೆನ್ಶನ್ ಲೈನ್ ಅಳವಡಿಕೆ ಸಂಬಂಧ ಬುಧವಾರ ಖಾಸಗಿ ಕಂಪನಿ ಕಾರ್ಮಿಕರು ಹಾಗೂ ರೈತರ ನಡುವೆ ಹೊಡೆದಾಟ ನಡೆದಿದ್ದು, ಹಲವು ರೈತರು ಗಾಯಗೊಂಡಿದ್ದಾರೆ.
ಕಾಮಗಾರಿಗೆ ಬಳಸಿಕೊಂಡ ಜಮೀನಿಗೆ ಪರಿಹಾರ ನೀಡಿಲ್ಲವೆಂದು ರೈತರು ಮಂಳವಾರದಿಂದ ರೈತರು ಅಡ್ಡಿಪಡಿಸಿದ್ದಾರೆ. ಬುಧವಾರವೂ ಕಾಮಗಾರಿ ಮಾಡಲು ಕಾರ್ಮಿಕರು ಬಂದಿದ್ದಾರೆ. ಈ ವೇಳೆ ಪುನ: ಕೃಷಿಕರು ಅಡ್ಡಿಪಡಿಸಿದರು. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ನಂತರ ಕಂಪನಿ ಅಧಿಕಾರಿಗಳು ರೈತರ ಮೇಲೆ ದಾಳಿ ನಡೆಸಿದ್ದಾರೆ. ಮನಬಂದಂತೆ ಥಳಿಸಿದ್ದಾರೆನ್ನಲಾಗಿದೆ. ಹಲವರು ಗಾಯಗೊಂಡಿದ್ದು, ಕುಷ್ಟಗಿ ತಾಲೂಕು ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದು ಪಿಎಸ್ಐ ಹನುಮಂತಪ್ಪ ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ಜಗಳ ನಿಯಂತ್ರಿಸಿದ್ದಾರೆ. ಟನೆ ಸಂಬಂಧ 18 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.