ಗಂಗಾವತಿ ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ವಚನ ಪಿತಾಮಹಾ .ಗು.ಹಳಕಕಟ್ಟಿ, ಸಂತ ಶಿಶುನಾಳ ಶರ್ೀ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಡಾ.ಸುಂಕೇಶ್ವರ ಕರಿಗೂಳಿ, ಪ್ರಾಧ್ಯಾಪಕರಾದ ಡಾ.ಕೆ.ವಿರೂಪಾಕ್ಷ, ಎಂ.ಶಂಕ್ರಪ್ಪ ಇತರರಿದ್ದರು.
- ಪ್ರಾಚಾರ್ಯ ಡಾ.ಸುಂಕೇಶ್ವರ ಕರಿಗೂಳಿ ಅಭಿಮತ
- ಫ.ಗು. ಹಳಕಟ್ಟಿ ಜಯಂತಿ ಆಚರಣೆ
ಗಂಗಾವತಿ: ಬೇತೆಲ್ ಸಮೂಹ ಶಿಕ್ಷಣ ಸಂಸ್ಥೆ ಆವರಣದಲ್ಲಿ ವಚನ ಪಿತಾಮಹಾ ಫ.ಗು. ಹಳಕಟ್ಟಿ ಜಯಂತಿ ನಿಮಿತ್ತ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ ಮತ್ತು ವಚನಗಳ ವೈಭವ ಕಾರ್ಯಕ್ರಮ ಗುರುವಾರ ಹಮ್ಮಿಕೊಳ್ಳಲಾಗಿತ್ತು.
ವಚನ ಸಾಹಿತ್ಯ ಸಂರಕ್ಷಣೆ ಸ್ಮರಣೆಗಾಗಿ ಎನ್ನೆಸ್ಸೆಸ್ ಘಟಕದಿಂದ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಲ್ಲಿ ವಚನ ಸಾಹಿತ್ಯದ ಅರಿವು, ಆಸಕ್ತಿ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ವಚನ ಸಾಹಿತ್ಯ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ ಮಾ.ಪಾಟೀಲ್ ಹೇಳಿದರು. ಪ್ರಾಥಮಿಕ, ಪ್ರೌಢ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆ ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಸ್ಥೆ ಅಧ್ಯಕ್ಷ ಜೋಸ್ೆ ರಾಜು, ಆಡಳಿತಾಧಿಕಾರಿ ಹೇಮಾ ಸುಧಾಕರ, ಖಜಾಂಚಿ ಸುಜಾತಾ ರಾಜು, ಕಾಲೇಜು ವಿಭಾಗದ ಉಪನ್ಯಾಸಕರಾದ ಗೀತಾ ಅಂಗಡಿ, ಸಂತೋಷಕುಮಾರ, ಶ್ವೇತಾ, ಭಾರತಿ ಹಿರೇಮಠ, ಮುಖ್ಯಶಿಕ್ಷಕಿ ಪುಷ್ಪಾವತಿ, ಶಿಕ್ಷಕರಾದ ಮನೋಜಸ್ವಾಮಿ ಹಿರೇಮಠ, ಭೋಗೇಶ ದೇಶಪಾಂಡೆ ಇತರರಿದ್ದರು.
ಶ್ರೀರಾಮನಗರ
ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲೂ .ಗು.ಹಳಕಕಟ್ಟಿ, ಸಂತ ಶಿಶುನಾಳ ಶರ್ೀ ಜಯಂತಿ ಆಚರಿಸಲಾಯಿತು. ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಪ್ರಾಚಾರ್ಯ ಡಾ.ಸುಂಕೇಶ್ವರ ಕರಿಗೂಳಿ ಮಾತನಾಡಿ, ಸಾಮಾನ್ಯರಿಂದ ರಚಿತವಾದ ಅಸಾಮಾನ್ಯ ಸಂದೇಶವುಳ್ಳ ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂಶೋಧಿಸಿ ಸಂಗ್ರಹಿಸಿ ಓದಲು ದೊರೆಯುವಂತೆ ಮಾಡುವಲ್ಲಿ .ಗು.ಹಳಕಟ್ಟಿಯವರ ತ್ಯಾಗ ಮತ್ತು ಬದ್ಧತೆ ಸ್ಮರಣೀಯ. ಕನ್ನಡ ಕಬೀರ ಸಂತ ಶಿಶುನಾಳ ಶರೀರು ಕನ್ನಡದ ಜನಮಾನಸದ ಹೆಮ್ಮೆಯ ಹಾಗೂ ಮಾರ್ಮಿಕ ಕವಿ, ಸೌಹಾರ್ದತೆ ಸಂಕೇತವೆಂದರು. ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಂ.ಶಂಕ್ರಪ್ಪ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕೈಯಲ್ಲಿರಲಿ ಕೈ ಚೀಲ, ಬೇಡ ನಮಗೆ ಪ್ಲಾಸ್ಟಿಕ್ ಚೀಲ ೋಷಣೆಯೊಂದಿಗೆ ಪ್ಲಾಸ್ಟಿಕ್ ವಿರೋಧಿ ದಿನ ಆಚರಿಸಲಾಯಿತು. ಪ್ರಾಧ್ಯಾಪಕರಾದ ಡಾ. ಶಶಿಕುಮಾರ, ಡಾ ಕೆ.ವಿರೂಪಾಕ್ಷ, ಸಿಬ್ಬಂದಿ ಜಬೀನಾ, ಉಪನ್ಯಾಸಕ ಪ್ರವೀಣ ಇತರರಿದ್ದರು. ವಿದ್ಯಾರ್ಥಿಗಳು ಕಾಲೇಜು ಆವರಣವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಪ್ರತಿಜ್ಞೆ ಸ್ವೀಕರಿಸಿದರು. ಕಾಲೇಜು ಆವರಣದಲ್ಲಿ ಪ್ಲಾಸ್ಟಿಕ್ ಸ್ವಚ್ಛತಾ ಕಾರ್ಯ ನೆರವೇರಿಸಿದರು.