ಕಲಕೇರಿ ಗ್ರಾಮದಲ್ಲಿ ಮಕರ ಸಂಕ್ರಾಂತಿ ನಿಮಿತ್ತ ಮಕ್ಕಳ ಸುಗ್ಗಿ ಹಬ್ಬ ನಡೆಯಿತು. ಎಸ್‌ಡಿಎಂಸಿ ಅಧ್ಯಕ್ಷ ದೊಡ್ಡ ಬಸವರಾಜ, ಉಪಾಧ್ಯಕ್ಷ ಯಮನೂರಪ್ಪ, ಸದಸ್ಯರಾದ ನಾಗರಾಜ ಗ್ಯಾನಪ್ಪನವರ, ಸಣ್ಣನಾಗಪ್ಪ, ದೇವಪ್ಪ, ಭುವನೇಶ, ಬಸವರಾಜ, ನಾಗರಾಜ, ಹನುಮೇಶ ಇತರರಿದ್ದರು.
ಕನಕಗಿರಿ: ವಿದ್ಯಾರ್ಥಿಗಳಿಗೆ ಗ್ರಾಮೀಣ ಸೊಗಡಿನ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಮಕರ ಸಂಕ್ರಮಣ ನಿಮಿತ್ತ ತಾಲೂಕಿನ ಕಲಕೇರಿ ಗ್ರಾಮದ ಉನ್ನತೀಕರಿಸಿದ ಸ.ಹಿ.ಪ್ರಾ.ಶಾಲೆಯಲ್ಲಿ ಶನಿವಾರ ಸುಗ್ಗಿ ಹಬ್ಬ ಕಾರ್ಯಕ್ರಮ ನಡೆಯಿತು. ರಾಶಿ ಪೂಜೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಿಕ್ಷಕ ಮಂಜುನಾಥ ಬಿಸನಳ್ಳಿ ಮಾತನಾಡಿ, ಹಬ್ಬಗಳು ಭಾರತೀಯ ಸಂಸ್ಕೃತಿಯ ಭಾಗವಾಗಿವೆ. ಕಾಲ ಕಾಲಕ್ಕೆ ಹಬ್ಬಗಳನ್ನು ಆಚರಿಸಲಾಗುತ್ತಿದ್ದು, ರೈತರು ಬೆಳೆದ ಬೆಳೆಗಳನ್ನು ಪೂಜಿಸುವುದು ಸಂಸ್ಕೃತಿಯಾಗಿದೆ ಎಂದು ಹೇಳಿದರು.
ಕರವೇ ಅಧ್ಯಕ್ಷ ಪಾಮೇಶ, ಶಿಕ್ಷಕರಾದ ವಿಜಯಾ ದೊಡ್ಡ ಬಿದರಿ, ಪವಿತ್ರ ಕೆ.ಆರ್, ಮುದುಕೇಶ, ರಾಜಶೇಖರ, ಬಸವರಾಜ, ಯಮನೂರಪ್ಪ, ರಾಜೇಶ ಅಥಿತಿ ಶಿಕ್ಷಕರಾದ ಮಂಜುನಾಥ, ದುರಗಮ್ಮ, ಹನುಮೇಶ, ಗಂಗಾಧರ ಬಾಲರಾಜ, ಸುಧಾ, ಅನ್ನಪೂರ್ಣ, ವಿಜಯಲಕ್ಷ್ಮೀ ಇತರರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.