ಗಂಗಾವತಿಯ ಹಿರೇಜಂತಕಲ್ ಒನಕೆ ಓಬವ್ವ ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ದೇಶದ ಪ್ರಥಮ ಮಹಿಳಾ ಶಿಕ್ಷಕರಾದ ಸಾವಿತ್ರಿಬಾಯಿ ುಲೆ ಮತ್ತು ಾತೀಮಾ ಶೇಖ್ ಜಯಂತ್ಯುತ್ಸದಲ್ಲಿ ಬಡ ಕುಟುಂಬಗಳಿಗೆ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ಭಾನುವಾರ ವಿತರಿಸಲಾಯಿತು. ಕಾಂಗ್ರೆಸ್ ಯುವ ಮುಖಂಡ ಅಯೂಬ್ ಅನ್ಸಾರಿ, ನಯೋಪ್ರಾ ಮಾಜಿ ಅಧ್ಯಕ್ಷ ನಂದಾಪುರ ನಾಗರಾಜ್, ಟ್ರಸ್ಟ್ ಕಾರ್ಯದರ್ಶಿ ಹುಸೇನಸಪ್ಪ ಹಂಚಿನಾಳ್ ಇತರರಿದ್ದರು. 
ಕೊಪ್ಪಳ

ಮಹಿಳೆಯರಿಗೆ ಶಿಕ್ಷಣ ಹಕ್ಕು ನೀಡಿದ ಶಿಕ್ಷಕಿಯರು

ಕುರುವತ್ತಿ ಶ್ರೀಕಾಂತಪ್ಪ
ಗಂಗಾವತಿ: ನಗರದ ಹಿರೇಜಂತಕಲ್ ಒನಕೆ ಓಬವ್ವ ರಂಗ ಮಂದಿರದಲ್ಲಿ ಸಿದ್ಧಾರ್ಥ ಎಜುಕೇಷನಲ್ ಆ್ಯಂಡ್ ಸೋಷಿಯಲ್ ವೆಲ್‌ೇರ್ ಟ್ರಸ್ಟ್‌ನಿಂದ ದೇಶದ ಪ್ರಥಮ ಮಹಿಳಾ ಶಿಕ್ಷಕರಾದ ಸಾವಿತ್ರಿಬಾಯಿ ಫುಲೆ ಮತ್ತು ಫಾತೀಮಾ ಶೇಖ್ ಜಯಂತಿ ಭಾನುವಾರ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕಾಂಗ್ರೆಸ್ ಯುವ ಮುಖಂಡ ಅಯೂಬ್ ಅನ್ಸಾರಿ ಮಾತನಾಡಿ, ದೇಶದಲ್ಲಿ ಮಹಿಳೆಯರು ಶಿಕ್ಷಣ ಪಡೆಯಲು ುಲೆ ಮತ್ತು ಾತಿಮಾ ಶೇಖ್ ಕಾರಣರಾಗಿದ್ದು, ಸಮಾನತೆಗೆ ಅರ್ಥ ನೀಡಿದವರು ಎಂದರು.
ಬಾಲಕರ ಸ.ಪ.ಪೂ.ಕಾಲೇಜಿನ ಗ್ರಂಥಪಾಲಕ ರಮೇಶ ಗಬ್ಬೂರ್ ಮಾತನಾಡಿ, ಮಹಿಳೆಯರು ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಟ್ಟ ಮಹಾನ್ ಚೇತನಗಳನ್ನು ನಿತ್ಯ ಸ್ಮರಿಸಬೇಕಿದ್ದು, ಶಿಕ್ಷಣದಿಂದ ಸ್ವಾವಲಂಬಿ ಜೀವನ ಸಾಧ್ಯ ಎಂದರು.
ಟ್ರಸ್ಟ್ ಕಾರ್ಯದರ್ಶಿ ಹುಸೇನಪ್ಪ ಹಂಚಿನಾಳ್ ಮಾತನಾಡಿದರು. 8 ಲಾನುಭವಿಗಳಿಗೆ ಹೊಲಿಗೆ ಯಂತ್ರ ಉಚಿತವಾಗಿ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಯೋಪ್ರಾ ಮಾಜಿ ಅಧ್ಯಕ್ಷ ನಾಗರಾಜ ನಂದಾಪುರ, ಮುಖಂಡರಾದ ಕೃಷ್ಣ ಇಟ್ಟಂಗಿ, ರಮೇಶ ಸುಗ್ಗೇನಹಳ್ಳಿ, ಮಲ್ಲಿಕಾರ್ಜುನ ಗೋಟೂರು, ಹೊನ್ನೂರಸಾಬ್, ಸುರೇಶ್ ಲಾಕಿ, ಗೋಪಾಲಕಷ್ಣ ಹಂಚಿನಾಳ, ರಂಜನಿ ಆರ್ತಿ ಇತರರಿದ್ದರು.