ಗಂಗಾವತಿ ತಾಲೂಕಿನ ವಡ್ಡರಹಟ್ಟಿಯ ಶ್ರೀ ವಿದ್ಯಾನಿಕೇತನ ಐಸಿಎಸ್‌ಇ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಾದರ್ಸ್ ಡೇ ಕಾರ್ಯಕ್ರಮವನ್ನು ಮಕ್ಕಳ ತಜ್ಞ ಡಾ.ಕೆ. ಅಮರೇಶ ಪಾಟೀಲ್ ಸೋಮವಾರ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ಉಪಾಧ್ಯಕ್ಷ ಆದರ್ಶ ನೆಕ್ಕಂಟಿ, ಪ್ರಾಚಾರ್ಯೆ ಸುಭದ್ರಾ ಪಾಟೀಲ್ ಇತರರಿದ್ದರು. 
ಕೊಪ್ಪಳ

ಮಕ್ಕಳಿಗೆ ಉತ್ತಮ ಆಹಾರಭ್ಯಾಸ ರೂಢಿಯಾಗಿಸಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಡಾ.ಕೆ. ಅಮರೇಶ ಪಾಟೀಲ್ ಸಲಹೆ
  • ಫಾದರ್ಸ್ ಡೇ ಆಚರಣೆ
ಗಂಗಾವತಿ: ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವ ಜತೆಗೆ ಉತ್ತಮ ಆಹಾರ ಸೇವನೆ ರೂಢಿಯಾಗುವಂತೆ ಮಾಡಬೇಕು. ಶಾಲೆಯಲ್ಲಿಯೇ ಬಹುಪಾಲು ಸಮಯ ಕಳೆಯುವುದರಿಂದ ಶಿಸ್ತು, ಸಂಯಮ, ಬದ್ಧತೆ ಕಲಿಸಿಕೊಡಬೇಕೆಂದು ಮಕ್ಕಳ ತಜ್ಞ ಡಾ.ಕೆ. ಅಮರೇಶ ಪಾಟೀಲ್ ಹೇಳಿದರು.
ತಾಲೂಕಿನ ವಡ್ಡರಹಟ್ಟಿಯ ಶ್ರೀ ವಿದ್ಯಾನಿಕೇತನ ಐಸಿಎಸ್‌ಇ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಫಾದರ್ಸ್ ಡೇ ಉದ್ಘಾಟಿಸಿ ಮಾತನಾಡಿದರು. ಪಾಲಕರು ಮಕ್ಕಳೊಂದಿಗೆ ಸಮಯ ಕಳೆಯಬೇಕಿದ್ದು, ಬದುಕಿನ ಪಾಠ ಕಲಿಸಬೇಕು. ಮಕ್ಕಳಲ್ಲಿ ಆಸೆ ಆಮಿಷಗಳ ಮಿತಿಗೊಳಿಸಿ ಉತ್ತಮ ಶಿಕ್ಷಣ ಕೊಡಿಸಬೇಕಿದೆ. ಈ ನಿಟ್ಟಿನಲ್ಲಿ ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅತ್ಯುತ್ತಮ ಕಾರ್ಯ ಮಾಡುತ್ತಿದೆ ಎಂದರು.
ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಮಾತನಾಡಿ, ತಂದೆ ತನ್ನ ಇಡೀ ಜೀವನವನ್ನು ತನ್ನ ಕುಟುಂಬಕ್ಕೆ ಅರ್ಪಿಸಿಕೊಳ್ಳುವ ಆಕಾಶದಷ್ಟು ವಿಶಾಲ ಹದಯಿ. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ನಿರಂತರ ಶ್ರಮಿಸುವ ವ್ಯಕ್ತಿತ್ವವೇ ಅಪ್ಪ ಎಂದರು.
ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪಾಲಕರು ಅತ್ಯುನ್ನತ ಶಿಕ್ಷಣ ಕೊಡಿಸುವತ್ತ ಆಸಕ್ತಿ ತೋರಿಸುವ ಮೂಲಕ ಅವರ ಭವಿಷ್ಯ ಭದ್ರಪಡಿಸುವ ಕೆಲಸ ಮಾಡುತ್ತಿದ್ದೇವೆ. ಆದರೆ ಮಕ್ಕಳಿಗೆ ಭವಿಷ್ಯದಲ್ಲಿ ಬರಬಹುದಾದ ಸವಾಲುಗಳ ಬಗ್ಗೆ ತಿಳಿ ಹೇಳಬೇಕಿದೆ. ಟೀಕೆ, ವಿಮರ್ಶೆ, ಸವಾಲುಗಳನ್ನು ಮೆಟ್ಟಿ ನಿಂತಾಗ ಮಾತ್ರ ಮಕ್ಕಳು ಉತ್ತಮ ನಾಗರಿಕರಾಗಲು ಸಾಧ್ಯ. ಈ ನಿಟ್ಟಿನಲ್ಲಿ ತಯಾರಿಸುವ ಬಹುದೊಡ್ಡ ಸವಾಲು ಪಾಲಕರ ಮೇಲಿದೆ ಎಂದರು. ಉಪಾಧ್ಯಕ್ಷ ಆದರ್ಶ ನೆಕ್ಕಂಟಿ, ಉದ್ಯಮಿ ಸಾತ್ವಿಕ್ ಮಲ್ಲಿಕಾರ್ಜುನ ನಾಗಪ್ಪ, ಪ್ರಾಚಾರ್ಯೆ ಸುಭದ್ರಾ ಪಾಟೀಲ್ ಇತರರಿದ್ದರು.