ಬರ ಪರಿಹಾರಕ್ಕಾಗಿ ಅಳವಂಡಿಯಲ್ಲಿ ಸೋಮವಾರ ಕೂಲಿ ಕಾರ್ಮಿಕರು ಉಪ ತಹಸಿಲ್ ಕಚೇರಿ ನೌಕರಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಶಿವಗ್ಯಾನಪ್ಪ ನೀಲಿಹಿಂಡರ, ಯಂಕಪ್ಪ ಕಬ್ಬೇರ, ಕೊಟ್ರಪ್ಪ ಹಮ್ಮಗಿ, ಶರಣಪ್ಪ ಅಬ್ಬಿಗೇರಿ, ಶರಣಯ್ಯ ದೊಡ್ಡಮನಿ, ನಿಂಗಪ್ಪ ಮತ್ತೂರು, ರಾಮಣ್ಣ, ನೀಲಪ್ಪ, ನಿಂಗಪ್ಪ, ರಮೇಶ, ಭರಮಪ್ಪ, ಮಲ್ಲಪ್ಪ ಇತರರಿದ್ದರು.
- ಉಪ ತಹಸಿಲ್ ಕಚೇರಿಗೆ ಕೂಲಿ ಕಾರ್ಮಿಕರು-ಕೃಷಿಕರ ಮನವಿ
ಅಳವಂಡಿ: ವಲಯ ವ್ಯಾಪ್ತಿಯ ಗ್ರಾಮಗಳಲ್ಲಿ ಬರಗಾಲ ಉಂಟಾಗಿದ್ದು, ಸೂಕ್ತ ಪರಿಹಾರ ನೀಡಬೇಕೆಂದು ರೈತರು ಮತ್ತು ಕೂಲಿ ಕಾರ್ಮಿಕರು ಉಪ ತಹಸಿಲ್ ಕಚೇರಿಗೆ ಸೋಮವಾರ ಮನವಿ ಸಲ್ಲಿಸಿದರು.
ಕೂಲಿ ಕಾರ್ಮಿಕ ಶಿವಗ್ಯಾನಪ್ಪ ನೀಲಿ ಹಿಂಡರ ಮಾತನಾಡಿ, ಬರಗಾಲದಿಂದ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಮಳೆಯಿಲ್ಲದೆ ಬೆಳೆಗಳು ಒಣಗುತ್ತಿದ್ದು, ಕೆಲಸವಿಲ್ಲದೆ ಜನಸಾಮಾನ್ಯರು, ಕೂಲಿ ಕಾರ್ಮಿಕರು ಜೀವನ ನಡೆಸಲು ಪರದಾಡುವಂತಾಗಿದೆ. ಶೀಘ್ರವೇ ರೈತರಿಗೆ ಬರ ಪರಿಹಾರ ಬಿಡುಗಡೆ ಮಾಡಬೇಕು.
ಜಾನುವಾರುಗಳಿಗೆ ಮೇವು ಬ್ಯಾಂಕ್ ಸ್ಥಾಪಿಸಬೇಕು. ಅರ್ಹ ಕೂಲಿ ಕಾರ್ಮಿಕನಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ನಿರಂತರ ಕೆಲಸ ನೀಡಬೇಕು. ಕೃಷಿ ಸಾಲ ಮನ್ನಾ ಮಾಡಬೇಕು. ಸ್ಥಳೀಯವಾಗಿಯೇ ಬರಗಾಲ ಕಾಮಗಾರಿ ಆರಂಭಿಸಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು.