ಕೊಪ್ಪಳದಲ್ಲಿ ಮಂಗಳವಾರ ಬಿಎಸ್​ಪಿಎಲ್​ ಗೇಟ್​ ಮುರಿದು ಒಳ ಪ್ರವೇಶಿಸಿದ ರೈತರು.  
ಕೊಪ್ಪಳ

ಬಿಎಸ್​ಪಿಎಲ್​ ವಿರುದ್ಧ ಸಿಡಿದೆದ್ದ ರೈತರು

ಪ್ರಮುಖ ಮುಖ್ಯಾಂಶಗಳು

  • ಪ್ರವೇಶ ದ್ವಾರ ಧ್ವಂಸ
  • ಬಸಾಪುರ ಕೆರೆ ಜನ ಬಳಕೆಗೆ ನೀಡಲು ಆಗ್ರಹ
ಕೊಪ್ಪಳ : ಬಲವಂತದ ಭೂವಶ ವಿರುದ್ಧ ಸಿಡಿದೆದ್ದ ಬಿಡದಿ ರೈತರಂತೆ ಬಿಎಸ್​ಪಿಎಸ್​ ವಿರುದ್ಧ ನೂರಾರು ದಿನ ಶಾಂತಿಯುತ ಪ್ರತಿಭಟನೆ ನಡೆಸಿದ ರೈತರು ಕಂಪನಿ ಪ್ರವೇಶ ದ್ವಾರ ಮುರಿದು ಒಳಪ್ರವೇಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಸಾಪುರ ಕೆರೆ ಜನ&ಜಾನುವಾರು ಬಳಕೆಗೆ ಮುಕ್ತಗೊಳಿಸುವಂತೆ ಆಗ್ರಹಿಸಿದರು. ಸರ್ಕಾರ ಕ್ರಮವಹಿಸದಿದ್ದಲ್ಲಿ ಮತ್ತೊಂದು ಹಂತಕ್ಕೆ ಹೋರಾಟ ತೀವ್ರಗೊಳಿಸುವ ಸಂದೇಶ ನೀಡಿದರು.
ರೈತ ಹುತಾತ್ಮ ದಿನ ಅಂಗವಾಗಿ ಕಂಪನಿ ಎದುರೇ ಸಮಾವೇಶ ನಡೆಸಿದ ರಾಜ್ಯ ರೈತ ಸಂದ ನಾಯಕರು, ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಪ್ರಮುಖ 21 ರ್ನಿಣಯಗಳನ್ನು ಮಂಡಿಸಿದರು. ರೈತ ಸಂದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರಮುಖರಾದ ಚಾಮರಸ ಮಾಲಿಪಾಟೀಲ್​, ಜೆ.ಎಂ.ವೀರಸಂಗಯ್ಯ, ಲಕ್ಷ$್ಮಣ ಹೂಗಾರ, ನೂರ ಶ್ರೀಧರ ಸೇರಿ ಇತರ ರೈತ ನಾಯಕರು ಸರ್ಕಾರ ಹಾಗೂ ಕಂಪನಿ ನಡೆ ವಿರುದ್ಧ ಕಿಡಿ ಕಾರಿದರು. ಗವಿಶ್ರೀಗಳು ಹೋರಾಟ ನಡೆಸಿ ಕಂಪನಿ ರದ್ದು ಆದೇಶ ಮಾಡುವಂತೆ ಮನವಿ ಮಾಡಿದರೂ ಬೆಲೆ ನೀಡಿಲ್ಲವೆಂದು ಗರಂ ಆದರು. ಕೆರೆ ಜನಬಳಕೆಗೆ ಮುಕ್ತಗೊಳಿಸುವಂತೆ ಹೈ ಕೋರ್ಟ್​ ಆದೇಶವಿದ್ದರೂ ಕ್ರಮವಹಿಸದ ಜಿಲ್ಲಾಡಳಿತ, ಸರ್ಕಾರದ ನಡೆ ಖಂಡಿಸಿದರು.
ಬಸಾಪುರ ಕೆರೆ ಜನ ಬಳಕೆಗೆ ನೀಡುವುದು, ಬಿಎಸ್​ಪಿಎಲ್​ ಕಾರ್ಖಾನೆ ಆರಂಭ ಹಿಂಪಡೆಯುವಿಕೆ, ಕೈಗಾರಿಕೆಗಳಿಗೆ ಕಡಿವಾಣ ಹಾಕುವಿಕೆ, ಜನರ ಆರೋಗ್ಯ ರಕ್ಷಣೆ ಸೇರಿ ಪ್ರಮುಖ 21 ರ್ನಿಣಯ ಮಂಡಿಸಿ ಒಪ್ಪಿಗೆ ಪಡೆಯಲಾಯಿತು. ಬಳಿಕ ಇಟಗಿ ಭೂಕೈಲಾಸ ಮೇಲುಗದ್ದುಗೆ ಹಿರೇಮಠದ ಗುರುಶಾಂತವೀರ ಸ್ವಾಮೀಜಿ ನೇತೃತ್ವದಲ್ಲಿ ಕಂಪನಿ ಪ್ರವೇಶ ದ್ವಾರ ರೈತರು ಜಮಾಯಿಸಿದರು. ಬಳಿಕ ಒಳ ನುಗ್ಗಲು ಯತ್ನಿಸಿದರು. ತಡೆಯಲು ಯತ್ನಿಸಿದ ಪೊಲೀಸರನ್ನೂ ಲೆಕ್ಕಿಸದೆ ತಡೆಗೋಡೆ ಒಡೆದರು. ಬಳಿಕ ಪ್ರವೇಶ ದ್ವಾರ ಗೇಟ್​ಗಳನ್ನು ಮುರಿದರು ಕೆರೆ ಬಳಿ ಬಂದರು. ನಮ್ಮ ಕೆರೆ ನಮ್ಮ ಹಕ್ಕು ಎಂದು ಘೋಷಣೆ ಕೂಗಿದರು.
ಬಳ್ಳಾರಿ ವಲಯ ಐಜಿಪಿ ಡಾ.ಪಿ.ಎಸ್​.ಹರ್ಷ, ಎಸ್ಪಿಗಳಾದ ಜಾಹ್ನವಿ, ಡಾ.ರಾಮ್​ ಎಲ್​.ಅರಸಿದ್ದಿ, ಎಇವೈಎಸ್ಪಿಗಳು, ಪಿಐಗಳು, ಪಿಎಸ್​ಗಳು ರೈತರನ್ನು ತಡೆಯಲು ಯತ್ನಿಸಿ ವಿಲರಾದರು. ಕಾರ್ಯಕ್ರಮದಲ್ಲಿ ಅಲ್ಲಮಪ್ರಭು ಬೆಟ್ಟದೂರು, ಡಿ.ಎಚ್​.ಪೂಜಾರ, ನಾಗರತ್ನ ಪಾಟೀಲ್​ ಮಾತನಾಡಿದರು. ಪ್ರಮುಖರಾದ ಇಂಡಿ ವಸಂತ್​ ಕುಮಾರ್​, ಮಲ್ಲಿಕಾರ್ಜುನ್​ ಸತ್ಯಂಪೇಟೆ, ಎಲ್​.ಕೆ.ನಾಯ್ಡು , ಭೀಮಸೇನ ಕಲಿಕೇರಿ, ಮಲ್ಲಿಕಾರ್ಜುನ್​ ಗೋನಾಳ್​ ಇತರಿದ್ದರು.

ಟ್ರಾಫಿಕ್​ ಜಾಮ್​

ಕೊಪ್ಪಳ&ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಬಹಿರಂಗ ಸಮಾವೇಶ ನಡೆಸಿದ ಕಾರಣ ಕೆಲ ಗಂಟೆಗಳವರೆಗೆ ಸಂಚಾರ ಬಂದ್​ ಆಯಿತು. ಗಿಣಿಗೇರಾದಿಂದ ಕೊಪ್ಪಳ ಸಂಪರ್ಕಿಸುವ ರಸ್ತೆ ಮೂಲಕ ವಾಹನ ಸಂಚರಿಸಿದವು. ರೈಲ್ವೆ ಗೇಟ್​ ಹಾಗೂ ಕಿರಿದಾದ ರಸ್ತೆ ಕಾರಣ ಕೆಲ ಗಂಟೆಗಳವರೆಗೆ ಟ್ರಾಫಿಕ್​ ಸಮಸ್ಯೆಯಾಯಿತು. ವಾಹನ ಸವಾರರು ಪೇಚಾಡುವಂತಾಯಿತು. ಸಮಾವೇಶಕ್ಕು ಮುನ್ನ ರೈತರು ಅಶೋಕ ವೃತ್ತದಿಂದ ಸಮಾವೇಶ ಜಾಗವರೆಗೆ ಬೈಕ್​ ಜಾಥಾ ನಡೆಸಿದರು. ರಸ್ತೆಯಲ್ಲಿ ಸಮಾವೇಶ ನಡೆಸಿದರೂ ಹೊಸಪೇಟೆ ಭಾಗದಿಂದ ಬಂದ ಆ್ಯಂಬುಲೆನ್ಸ್​ಗೆ ದಾರಿಬಿಟ್ಟುಕೊಟ್ಟು ರೈತರು ಮಾನವೀಯತೆ ಮೆರೆದರು.
"

ಕಂಪನಿ ತೊಲಗಬೇಕು. ರೈತರಿಗೆ ಸಹಾಯ ಆಗುತ್ತದೆ. ಬಸಾಪುರ ಕೆರೆಯನ್ನು ವಶಕ್ಕೆ ಪಡೆದಿದ್ದಾರೆ. ಕೆರೆ ಪ್ರಜೆಗಳ ಸಂಪತ್ತು. ಕಂಪನಿಯು ಬಸಾಪುರ ಅತಿಕ್ರಮಣ ಮಾಡಿ, ಗೇಟು ಹಾಕಿದ್ದರು. ಗೇಟು ಮುರಿಯಿರಿ ಎಂದು ನಾವೇ ರೈತರಿಗೆ ಹೇಳಿದ್ದೇವೆ. ಹಾಗಾಗಿ ಬಲ್ಡೋಟಾ ಗೇಟಿಗೆ ನಾವೇ ನುಗ್ಗಿದ್ದೇವೆ. ಗೇಟು ಹೊಡೆದಿದ್ದೇವೆ. ಕೆರೆಗೆ ನುಗ್ಗಿದ್ದೇವೆ.

— ಗುರುಶಾಂತವೀರ ಸ್ವಾಮೀಜಿ, ಭೂಕೈಲಾಸ ಮೇಲು ಗದ್ದುಗೆ ಹಿರೇಮಠ ಇಟಗಿ.

"

ರಾಜ್ಯದಲ್ಲಿ ನೀರಾವರಿ ಆಗಿದ್ದಲ್ಲಿ ಅದಕ್ಕೆ ನರಗುಂದ ಬಂಡಾಯ ಕಾರಣ. ಇದು ನಡೆಯದಿದ್ದರೆ ರೈತ ಶಕ್ತಿ ಉಗಮವಾಗುತ್ತಿರಲಿಲ್ಲ. ವಿದ್ಯಾರ್ಥಿ, ಕಾರ್ಮಿಕರ ಶಕ್ತಿ ಜನ್ಮತಾಳುತ್ತಿರಲಿಲ್ಲ. ಹಾಗಾಗಿ ರೈತ ಹುತಾತ್ಮ ದಿನಾಚರಣೆ ಸಮಾವೇಶದ ಮೂಲಕ ಬಸಾಪುರ ಕೆರೆ ಮುಕ್ತಗೊಳಿಸಲು ಬಲ್ಡೋಟಾ ವಿಸ್ತರಣೆ ನಿಲ್ಲಿಸಲು ಹೋರಾಡುತ್ತಿದ್ದೇವೆ.

— ನೂರ್​ ಶ್ರೀಧರ್​, ಜನಶಕ್ತಿ ಅಧ್ಯಕ್ಷ.

"

ಎಲ್ಲಿ ಫಲವತ್ತಾದ ಭೂಮಿ ಕಾಣುತ್ತದೆಯೋ, ಅಲ್ಲಿ ಸರ್ಕಾರ ರೈತರನ್ನು ಒಕ್ಕಲೆಬ್ಬಿಸುತ್ತಿದೆ. ಬಲ್ಡೋಟಾದಂತಹ ಭೂಗಳ್ಳರ ವಿರುದ್ಧದ ಹೋರಾಟಗಾರರ ಜತೆಗೆ ಕೆ.ಆರ್​.ಎಸ್​. ಪಕ್ಷವಿದೆ. ಪರಿಸರ, ರೈತರ ವಿರೋಧಿ ಕಾರ್ಖಾನೆ ಮುಚ್ಚಿ. ನಾವೆಲ್ಲ ನಿರ್ಣಾಯಕ ಹೋರಾಟ ಮಾಡಬೇಕಿದೆ.

— ರವಿಕೃಷ್ಣಾರೆಡ್ಡಿ. ಕೆಆರ್​ಎಸ್​ ಗೌರವ ಅಧ್ಯಕ್ಷ.