ಹನುಮನಾಳ ಜೆಸ್ಕಾಂ ಕಚೇರಿ ಮುಂದೆ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು. ರೈತರಾದ ಅಶೋಕ ಉಪ್ಪಾರ, ದೇವಪ್ಪ ಮೆಣಸಗಿ, ಶರಣಪ್ಪ ಐ. ಉಪ್ಪಾರ, ಶ್ರೀಕಾಂತ ಉಪ್ಪಾರ, ಶರಣಪ್ಪ ಕೆ. ಉಪ್ಪಾರ, ಹನಮಪ್ಪ ಪೂಜಾರ, ಶೇಖಪ್ಪ ಗೂಡಿ, ಹೇಮಂತ ನರಿ, ಶೇಖಪ್ಪ ನರಿ, ಕನಕಪ್ಪ ಲಕ್ಕಲಕಟ್ಟಿ, ಅಂದಪ್ಪ ಕಾಡದ, ಕಳಕಪ್ಪ ಕಾಡದ, ಬಸವರಾಜ ಕಾಡದ, ಈರಣ್ಣ ಮೂಗನೂರು, ಯಂಕಪ್ಪ ಕಟ್ಟಿಮನಿ ಇತರರಿದ್ದರು. 
ಕೊಪ್ಪಳ

ಸಮರ್ಪಕ ವಿದ್ಯುತ್ ನೀಡದಿದ್ದರೆ ಹೋರಾಟ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಹನುಮನಾಳ ಜೆಸ್ಕಾಂ ಕಚೇರಿ ಮುಂದೆ ರೈತರ ಪ್ರತಿಭಟನೆ
  • ನಿತ್ಯ 7 ಗಂಟೆ ಸಮರ್ಪಕ ವಿದ್ಯುತ್ ನೀಡಲು ಒತ್ತಾಯ
ಹನುಮಸಾಗರ: ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ನೀಡುವಂತೆ ಆಗ್ರಹಿಸಿ ಸಮೀಪದ ಹನುಮನಾಳ ಜೆಸ್ಕಾಂ ಕಚೇರಿ ಮುಂದೆ ಕರ್ನಾಟಕ ಜನ ದರ್ಶನ ವೇದಿಕೆ ನೇತೃತ್ವದಲ್ಲಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಗೊರೆಬಿಹಾಳ, ಯರಗೇರಾ ಹಾಗೂ ಕುಂಬಳಾವತಿ ಗ್ರಾಮದ ಜಮೀನುಗಳ 28 ವಿದ್ಯುತ್ ಪರಿವರ್ತಕಕ್ಕೆ ಸಂಬಂಧಪಟ್ಟ ರೈತರು ವಿದ್ಯುತ್‌ಗಾಗಿ ನಿತ್ಯ ಹಗಲಿರುಳು ಕಾಯಬೇಕಾಗಿದೆ. ಲೋಡ್ ಜಾಸ್ತಿಯಾಗಿ ಪದೇ ಪದೇ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ನಿರ್ಧಿಷ್ಟ  ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡದೆ ಜೆಸ್ಕಾಂ ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಮಧ್ಯ ರಾತ್ರಿ ಕರೆಂಡ್ ಕೊಡುತ್ತಿದ್ದಾರೆ. ಇದರಿಂದ ಬೆಳೆಗಳಿಗೆ ನೀರು ಆಯಿಸಲು ಆಗದೆ ಒಣಗುತ್ತಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ನಿತ್ಯ 7 ಗಂಟೆ ಸಮರ್ಪಕ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರೈತರಾದ ಅಶೋಕ ಉಪ್ಪಾರ, ದೇವಪ್ಪ ಮೆಣಸಗಿ, ಶರಣಪ್ಪ ಐ. ಉಪ್ಪಾರ, ಶ್ರೀಕಾಂತ ಉಪ್ಪಾರ, ಶರಣಪ್ಪ ಕೆ. ಉಪ್ಪಾರ, ಹನಮಪ್ಪ ಪೂಜಾರ, ಶೇಖಪ್ಪ ಗೂಡಿ, ಹೇಮಂತ ನರಿ, ಶೇಖಪ್ಪ ನರಿ, ಕನಕಪ್ಪ ಲಕ್ಕಲಕಟ್ಟಿ, ಅಂದಪ್ಪ ಕಾಡದ, ಕಳಕಪ್ಪ ಕಾಡದ, ಬಸವರಾಜ ಕಾಡದ, ಈರಣ್ಣ ಮೂಗನೂರು, ಯಂಕಪ್ಪ ಕಟ್ಟಿಮನಿ ಇತರರಿದ್ದರು.