ಕೆರೆಹಳ್ಳಿ ಗ್ರಾಮದಲ್ಲಿ ಸಸ್ಯ ಆರೋಗ್ಯ ಚಿಕಿತ್ಸಾಲಯ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಾಗಿತ್ತು. ಕೃಷಿ ಮಹಾವಿದ್ಯಾಲಯದ ವಿಶೇಷಾಧಿಕಾರಿ ಡಾ.ಯಂಜೇರಪ್ಪ, ಮುಖ್ಯ ಸಿಬ್ಬಂದಿ ಸಲಹೆಗಾರ ಡಾ.ಕಿರಣಕುಮಾರ್, ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಮಹಾಂತ ಶಿವಯೋಗಯ್ಯ, ರಾವೆ ಸಂಯೋಜಕ ಡಾ.ಎಂ.ವಿ.ರವಿ ಇತರರಿದ್ದರು. 
ಕೊಪ್ಪಳ

ರೈತರು ಕೃಷಿ ಭವಿಷ್ಯದ ಸೂಕ್ತ ಮಾಹಿತಿ ಪಡೆಯಿರಿ

ಪ್ರಮುಖ ಮುಖ್ಯಾಂಶಗಳು

  • ಕೃಷಿ ಮಹಾವಿದ್ಯಾಲಯದ ವಿಶೇಷಾಧಿಕಾರಿ ಡಾ.ಯಂಜೇರಪ್ಪ ಸಲಹೆ
  • ಸಸ್ಯ ಆರೋಗ್ಯ ಚಿಕಿತ್ಸಾಲಯ ಉದ್ಘಾಟನಾ ಕಾರ್ಯಕ್ರಮ
ಮುನಿರಾಬಾದ್: ಬದಲಾಗುತ್ತಿರುವ ಕೃಷಿ ವ್ಯವಸ್ಥೆಯಲ್ಲಿ ಹೊಸ ತಂತ್ರಜ್ಞಾನ ಹಾಗೂ ಸಮಗ್ರ ಕೃಷಿ ಪದ್ಧತಿ ಅಳವಡಿಸುವುದು ಅಗತ್ಯ ಎಂದು ಕೃಷಿ ಮಹಾವಿದ್ಯಾಲಯದ ವಿಶೇಷಾಧಿಕಾರಿ ಡಾ.ಯಂಜೇರಪ್ಪ ಹೇಳಿದರು.
ಕೆರೆಹಳ್ಳಿ ಗ್ರಾಮದಲ್ಲಿ ಗಂಗಾವತಿ ಕೃಷಿ ಮಹಾವಿದ್ಯಾಲಯದ ಗ್ರಾಮೀಣ ಕೃಷಿ ಕಾರ್ಯಾನುಭವ ರಾವೆ ಕಾರ್ಯಕ್ರಮದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸಸ್ಯ ಆರೋಗ್ಯ ಚಿಕಿತ್ಸಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ತಂತ್ರಜ್ಞಾನದ ಬಳಕೆ ಮತ್ತು ಕೃಷಿ ಭವಿಷ್ಯದ ಕುರಿತು ರೈತರು ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಮುಖ್ಯ ಸಿಬ್ಬಂದಿ ಸಲಹೆಗಾರ ಡಾ.ಕಿರಣಕುಮಾರ್ ಮಾತನಾಡಿ, ರಾವೆ ವಿದ್ಯಾರ್ಥಿಗಳ ಗ್ರಾಮೀಣ ಕಾರ್ಯಚಟುವಟಿಕೆಗಳಿಗೆ ಗ್ರಾಮಸ್ಥರು ಹಾಗೂ ರೈತರು ಸಹಕಾರ ನೀಡಬೇಕು ಎಂದರು. ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಮಹಾಂತ ಶಿವಯೋಗಯ್ಯ ಮಾತನಾಡಿ, ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ರೈತರು ಅನುಸರಿಸಬೇಕಾದ ಆಕಸ್ಮಿಕ ಬೆಳೆ ಯೋಜನೆ ಕುರಿತು ಮಾಹಿತಿ ನೀಡಿದರು.
ರಾವೆ ಸಂಯೋಜಕ ಡಾ.ಎಂ.ವಿ.ರವಿ, ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಎಸ್.ಬಿ.ಗೌಡರ್, ಡಾ.ಬಸವರಾಜ ಗಾಣಿಗೆರ, ಡಾ.ವಿ.ಕರೇಗೌಡರ್, ಡಾ.ಡಿ.ಶ್ರೀಧರ್, ಡಾ.ಮಹಾಂತೇಶ್, ಡಾ.ಬಸವರಾಜ್ ಕಾಡಣ್ಣನವರ್, ಡಾ.ಸಾಹೇಬ್ ಗೌಡ, ಎಸ್ಡಿಎಂಸಿ ಅಧ್ಯಕ್ಷ ಪರಶುರಾಮ, ಪ್ರಮುಖರಾದ ವೀರೇಶ್ ಗಗ್ಗರಿ, ಶಂಕರ ವಿಶ್ವಕರ್ಮ, ರಾಮಸ್ವಾಮಿ ಗುರಿಕೇರ್, ಪರಯ್ಯ, ಹನುಮೇಶ ಅಂಗಡಿ ಇದ್ದರು.