ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಸದಸ್ಯರು ಗಂಗಾವತಿ ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಸೋಮವಾರ ಮನವಿ ಸಲ್ಲಿಸಿದರು. ತಾಲೂಕಾಧ್ಯಕ್ಷ ಶ್ರೀನಿವಾಸ ಹೊಸಳ್ಳಿ, ಕಾರ್ಯದರ್ಶಿ ಮುತ್ತಣ್ಣ ದಾಸನಾಳ್, ಪದಾಧಿಕಾರಿಗಳಾದ ಶಿವಪ್ಪ ಬೆಣಕಲ್, ಹುಸೇನಪ್ಪ, ಲಿಂಗಪ್ಪ ವೆಂಕಟಗಿರಿ, ನೂರಜಾನ್‌ಬೀ, ಶೇಖಾಬೀ ಇತರರಿದ್ದರು. 
ಕೊಪ್ಪಳ

ವಿದ್ಯುತ್ ಕ್ಷೇತ್ರ ಖಾಸಗೀಕರಣ ಕೈಬಿಡಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಸಮಿತಿ ಮನವಿ
ಗಂಗಾವತಿ: ವಿದ್ಯುತ್ ವಿತರಣೆ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಸದಸ್ಯರು ನಗರದ ತಾಲೂಕಾಡಳಿತ ಸೌಧದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಮನವಿ ಸಲ್ಲಿಸಿದರು.
ಸಮಿತಿ ತಾಲೂಕು ಕಾರ್ಯದರ್ಶಿ ಮುತ್ತಣ್ಣ ದಾಸನಾಳ್ ಮಾತನಾಡಿ, ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ವಿದ್ಯುತ್ ವಿತರಣೆ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತಿರುವುದು ಖಂಡನೀಯ. ಸಾರ್ವಜನಿಕ ಹೂಡಿಕೆಯೊಂದಿಗೆ ನಿರ್ಮಾಣವಾದ ವಿದ್ಯುತ್ ಕ್ಷೇತ್ರವನ್ನು ಟಾಟಾ ಪವರ್ ಲಿಮಿಟೆಡ್‌ಗೆ ವಹಿಸುತ್ತಿರುವುದು ಸರಿಯಲ್ಲ. ರಾಜ್ಯದ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆ ನೀಡುವಂತೆ ಟಾಟಾ ಕಂಪನಿ ಕೆಇಆರ್‌ಸಿಗೆ ಅರ್ಜಿ ಸಲ್ಲಿಸಿದೆ. ಜನರ ಅನುಕೂಲ ದಷ್ಟಿಯಿಂದ ವಿದ್ಯುತ್ ಉತ್ಪಾದನೆ ಪ್ರಸರಣ ಮತ್ತು ವಿತರಣೆ ಮಾಡಲಾಗುತ್ತಿದ್ದು, ಲಾಭಾಂಶದ ಹಿನ್ನೆಲೆಯಲ್ಲಿ ಖಾಸಗೀಕರಣ ಸರಿಯಲ್ಲ.
ರೈತರ ಪಂಪ್ ಸೆಟ್, ಜನಸಾಮಾನ್ಯರ ಗೃಹಜ್ಯೋತಿ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಎಲ್ಲ ವಿಭಾಗದ ಸಣ್ಣ ಮತ್ತು ಮಧ್ಯಮ ವರ್ಗ ಹಾಗೂ ವಾಣಿಜ್ಯ ಮುಂದಾತ ವಿಭಾಗದ ಗ್ರಾಹಕರಿಗೆ ಅನ್ಯಾಯವಾಗಲಿದೆ. ಲಾಭದ ಉದ್ದೇಶ ಇಟ್ಟುಕೊಂಡು ವಿಪರೀತ ಬೆಲೆ ನಿಗದಿ ಮಾಡಿ ಗ್ರಾಹಕರನ್ನು ಸುಲಿಗೆ ಮಾಡಲು ಮುಂದಾಗುವ ಸಾಧ್ಯತೆಯಿದೆ. ನೌಕರರ ಉದ್ಯೋಗದ ಭದ್ರತೆಗೂ ಧಕ್ಕೆಯಾಗಲಿದೆ. ಉದ್ಯೋಗ ಆಯ್ಕೆಯಲ್ಲಿ ಮೀಸಲು ಕೈ ಬಿಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಖಾಸಗೀಕರಣ ಕೈಬಿಡದಿದ್ದರೆ ಹೋರಾಟ ಮುಂದುವರಿಯಲಿದೆ ಎಂದರು.
ತಾಲೂಕಾಧ್ಯಕ್ಷ ಶ್ರೀನಿವಾಸ ಹೊಸಳ್ಳಿ, ಪದಾಧಿಕಾರಿಗಳಾದ ಶಿವಪ್ಪ ಬೆಣಕಲ್, ಹುಸೇನಪ್ಪ, ದುರುಗಪ್ಪ ದಾಸನಾಳ, ಗಾದೆಪ್ಪ ಬೆಣಕಲ್, ನಾಗರಾಜ, ಸೋಮನಾಥ ದಾಸನಾಳ, ಲಿಂಗಪ್ಪ ವೆಂಕಟಗಿರಿ, ನೂರ್‌ಜಾನ್‌ಬೀ, ಶೇಖಾಬೀ, ದ್ಯಾಮಮ್ಮ, ಇಮಾಮ್‌ಸಾಬ್ ಇತರರಿದ್ದರು.