ಗಂಗಾವತಿ ಎಸ್‌ಕೆಆರ್ ಪಿಯು ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಬಳ್ಳಾರಿ ಕೋರ್ಟ್ ಸಂಕೀರ್ಣದ ಕಾನೂನು ಅಧಿಕಾರಿ ಬಿ.ಎಸ್.ಪಾಟೀಲ್ ಶುಕ್ರವಾರ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ಶ್ರೀನಿವಾಸರಾವ್ ಕಲ್ಯಾಣಿ, ಕಾರ್ಯದರ್ಶಿ ಎಂ.ರಾಮ್‌ಮೋಹನ್, ಪ್ರಾಚಾರ್ಯ ಪ್ರೊ.ಶಿವಾನಂದ ಮೇಟಿ ಇತರರಿದ್ದರು.
- ಕಾನೂನು ಅಧಿಕಾರಿ ಬಿ.ಎಸ್.ಪಾಟೀಲ್ ಅಭಿಮತ
ಗಂಗಾವತಿ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಅಂಕಗಳು ಮುಖ್ಯವಲ್ಲ. ಅದರೊಂದಿಗೆ ಶಿಸ್ತು ಮತ್ತು ನೈತಿಕ ಮೌಲ್ಯಗಳು ಅತಿ ಅಗತ್ಯ ಎಂದು ಬಳ್ಳಾರಿ ಕೋರ್ಟ್ ಸಂಕೀರ್ಣದ ಕಾನೂನು ಅಧಿಕಾರಿ ಬಿ.ಎಸ್.ಪಾಟೀಲ್ ಹೇಳಿದರು.
ನಗರದ ಎಸ್‌ಕೆಆರ್ ಪಿಯು ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿ ಜೀವನವು ಭವಿಷ್ಯ ರೂಪಿಸಿಕೊಳ್ಳಲು ಅತ್ಯಂತ ನಿರ್ಣಾಯಕ ಘಟ್ಟ. ಮೊಬೈಲ್‌ನಂತಹ ಆಧುನಿಕ ವ್ಯಸನಗಳಿಗೆ ಬಲಿಯಾಗದೆ ಏಕಾಗ್ರತೆಯನ್ನು ಕೇವಲ ವಿದ್ಯಾಭ್ಯಾಸದ ಕಡೆಗೆ ಹರಿಸಬೇಕೆಂದರು.
ಕೊಪ್ಪಳ ಶ್ರೀಗವಿಸಿದ್ದೇಶ್ವರ ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಶರಣಬಸಪ್ಪ ಬಿಳಿಎಲಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಒಂದು ನಿರ್ದಿಷ್ಟ ಗುರಿ ಹೊಂದಿರಬೇಕು. ಸವಾಲುಗಳಿಗೆ ಹೆದರದೆ ಆತ್ಮವಿಶ್ವಾಸದಿಂದ ಎದುರಿಸಿದಾಗ ಮಾತ್ರ ಗುರಿ ತಲುಪಲು ಸಾಧ್ಯ ಎಂದರು.
ಪ್ರಾಚಾರ್ಯ ಪ್ರೊ.ಶಿವಾನಂದ ಮೇಟಿ, ಸಂಸ್ಥೆ ಅಧ್ಯಕ್ಷ ಶ್ರೀನಿವಾಸರಾವ್ ಕಲ್ಯಾಣಿ, ಕಾರ್ಯದರ್ಶಿ ಎಂ. ರಾಮ್ ಮೋಹನ್, ಸದಸ್ಯ ಯಶ್ವಂತ್ ಕೆಂಧೋಳೆ ಇತರರಿದ್ದರು.