ಯಲಬುರ್ಗಾ ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೆ ನಿಮಿತ್ಯ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ರೇವಣೆಪ್ಪ ಹಿರೇಕುರಬರ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಯಲ್ಲಪ್ಪ ಹೊಸಮನಿ, ಸಾವಿತ್ರಿ ಗೊಲ್ಲರ, ಶಾರದಾ ಸಾಲಭಾವಿ, ದೊಡ್ಡಯ್ಯ ಗುರುವಿನ್, ಶಿವಣ್ಣ ರಾಜೂರು, ಹನುಮಂತಪ್ಪ ಹನುಮಪೂರು, ಮಂಜುನಾಥ ಕುರಿ, ಸಿದ್ದಪ್ಪ ದಂಡಿನ್, ಶರಣಪ್ಪ ಉಳ್ಳಾಗಡ್ಡಿ, ಈರಪ್ಪ ಹೊಸಳ್ಳಿ, ಇತರರು ಇದ್ದರು. 
ಕೊಪ್ಪಳ

ಜಾತ್ರೆಗಳಿಂದ ಜನರಲ್ಲಿ ಸಾಮರಸ್ಯ

ಪ್ರಮುಖ ಮುಖ್ಯಾಂಶಗಳು

  • ಸಾಮರಸ್ಯ

ಜಾತ್ರೆಗಳಿಂದ ಜನರಲ್ಲಿ ಸಾಮರಸ್ಯ

ಯಲಬುರ್ಗಾ: ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆಗಳಿಂದ ಜನರಲ್ಲಿ ಸಾಮರಸ್ಯ ಮೂಡುತ್ತದೆ ಎಂದು ದೇವಸ್ಥಾನ ಕಮಿಟಿ ಅಧ್ಯಕ್ಷ ರೇವಣೆಪ್ಪ ಹಿರೇಕುರಬರ ಹೇಳಿದರು.
ಪಟ್ಟಣದ ಮುಧೋಳ ರಸ್ತೆಯಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಭಾರತೀಯ ಸಂಸ್ಕೃತಿಗೆ ಭವ್ಯ ಇತಿಹಾಸವಿದೆ. ಬೀರಲಿಂಗೇಶ್ವರ ಶಕ್ತಿ ಸ್ವರೂಪಿಯಾಗಿದ್ದು, ಶ್ರದ್ಧೆಯಿಂದ ಪೂಜಿಸಿದರೆ ಇಷ್ಠಾರ್ಥಗಳು ಈಡೇರುತ್ತವೆ. ಇಂದು ವಿವಿಧ ಕಾರಣಗಳಿಂದ ಒತ್ತಡದ ಜೀವನ ಸಾಗಿಸುತ್ತಿದ್ದೇವೆ. ಮನಸ್ಸಿಗೆ ನೆಮ್ಮದಿ ಸಿಗಬೇಕಾದರೆ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ದೇವಸ್ಥಾನ ಕಮಿಟಿ ಉಪಾಧ್ಯಕ್ಷ ಬಾಲಚಂದ್ರ ಸಾಲಭಾವಿ ಮಾತನಾಡಿ, ಮಹಾಶಿವರಾತ್ರಿ ಅಂಗವಾಗಿ 3 ದಿನಗಳ ಕಾಲ ಶ್ರೀ ಬೀರಲಿಂಗೇಶ್ವರ ಜಾತ್ರೆ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು. ಅವಳಿ ತಾಲೂಕಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾತ್ರೋತ್ಸವ ಯಶಸ್ವಿಗೆ ಕೈ ಜೋಡಿಸಬೇಕು.
ಫೆ.13,14,15ರಂದು ಜಾತ್ರೆ ಜರುಗಲಿದೆ. ಸಾಮೂಹಿಕ ವಿವಾಹ, ಮಹಾಪ್ರಸಾದ, ದೇವಸ್ಥಾನದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ, ಪಲ್ಲಕ್ಕಿ ಮೆರವಣಿಗೆ, ನಾಟಕ ಪ್ರದರ್ಶನ, ಟಗರಿನ ಕಾಳಗ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಮಠಾಧೀಶರು, ಜನಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಪ್ರಮುಖರಾದ ಯಲ್ಲಪ್ಪ ಹೊಸಮನಿ, ಸಾವಿತ್ರಿ ಗೊಲ್ಲರ, ಶಾರದಾ ಸಾಲಭಾವಿ, ದೊಡ್ಡಯ್ಯ ಗುರುವಿನ್, ಶಿವಣ್ಣ ರಾಜೂರು, ಹನುಮಂತಪ್ಪ ಹನುಮಪೂರು, ಮಂಜುನಾಥ ಕುರಿ, ಸಿದ್ದಪ್ಪ ದಂಡಿನ್, ಶರಣಪ್ಪ ಉಳ್ಳಾಗಡ್ಡಿ, ಈರಪ್ಪ ಹೊಸಳ್ಳಿ, ರಮೇಶ ದಂಡಿನ, ಬೀರಪ್ಪ, ನಾಗರಾಜ ಹಿರೇಕುರುಬರ ಇತರರಿದ್ದರು.