ಯಲಬುರ್ಗಾದ ಬಿಜೆಪಿ ಕಚೇರಿಯಲ್ಲಿ ಬಿಎಲ್‌ಎ-2ರ ವಿಕೃತ ಕಾರ್ಯಾಗಾರದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್‌ಮಾತನಾಡಿದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಗೌರಾ ಬಸವರಾಜ, ಜಿಲ್ಲಾ ಉಪಾಧ್ಯಕ್ಷ ಕೆ.ಮಹೇಶ, ಮುಖಂಡರಾದ ಸಂತೋಷ ರಾಜಗುರು, ಸುನೀಲ ಹೆಸರೂರು, ಬಸಲಿಂಗಪ್ಪ ಭೂತೆ, ರತನ್ ದೇಸಾಯಿ, ವೀರಣ್ಣ ಹುಬ್ಬಳ್ಳಿ ಇತರರಿದ್ದರು.
- ಮಾಜಿ ಸಚಿವ ಹಾಲಪ್ಪ ಆಚಾರ್‌ಹೇಳಿಕೆ
- ಬಿಎಲ್‌ಎ-2 ವಿಸ್ಕೃತ ಕಾರ್ಯಾಗಾರ
ಯಲಬುರ್ಗಾ: ತಳಮಟ್ಟದ ಸಂಘಟನೆ, ಶಿಸ್ತು ಹಾಗೂ ತತ್ವನಿಷ್ಠ ಕಾರ್ಯಕರ್ತರ ಪಡೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿತ್ತಿರುವುದು ಬಿಜೆಪಿಗೆ ದೊಡ್ಡ ಬಲವಾಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್‌ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಎಲ್‌ಎ-2 ವಿಸ್ಕೃತ ಕಾರ್ಯಾಗಾರದಲ್ಲಿ ಮಾತನಾಡಿದರು. ಪಕ್ಷದ ತತ್ವ-ಸಿದ್ಧಾಂತವನ್ನು ಒಪ್ಪಿಕೊಂಡು ಸಂಘಟನೆಗೆ ಕೈಜೋಡಿಸುವ ಕಾರ್ಯಕರ್ತರ ಸೇವೆ ದೊಡ್ಡದು. ಬೂತ್ ಮಟ್ಟದಲ್ಲಿ ಸಂಘಟನೆ ಗಟ್ಟಿಗೊಳಿಸುವುದು ದೀರ್ಘಕಾಲದ ಬೆಳವಣಿಗೆಗೆ ಪ್ರಮುಖ ಅಂಶವಾಗಿದೆ. ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆ, ಹೊಸ ಮತದಾರರ ನೋಂದಣಿ, ಸರ್ಕಾರದ ಸಾಧನೆಗಳ ಪ್ರಚಾರ ಹಾಗೂ ಜನಸಂಪರ್ಕ ಚಟುವಟಿಕೆ ತೀವ್ರಗೊಳಿಸಬೇಕು. ಪಕ್ಷದ ಬಲ ಕಾರ್ಯಕರ್ತರಲ್ಲಿದೆ. ಅವರ ತ್ಯಾಗ ಮತ್ತು ಶ್ರಮ ಎಂದಿಗೂ ಮರೆಯಲಾಗದು ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಗೌರಾ ಬಸವರಾಜ, ಜಿಲ್ಲಾ ಉಪಾಧ್ಯಕ್ಷ ಕೆ.ಮಹೇಶ, ಮುಖಂಡರಾದ ಸಂತೋಷ ರಾಜಗುರು, ಸುನೀಲ ಹೆಸರೂರು, ಬಸಲಿಂಗಪ್ಪ ಭೂತೆ, ಪ್ರಮುಖರಾದ ರತನ್ ದೇಸಾಯಿ, ವೀರಣ್ಣ ಹುಬ್ಬಳ್ಳಿ, ಶಿವಶಂಕರ ದೇಸಾಯಿ, ಶರಣಪ್ಪ ಈಳಿಗೇರ್, ಅಯ್ಯನಗೌಡ ಕೆಂಚಮ್ಮನವರ, ಅಮರೇಶ ಹುಬ್ಬಳ್ಳಿ, ಶಿವಕುಮಾರ ನಾಗಲಾಪುರಮಠ, ಶಿವಲೀಲಾ ದಳವಾಯಿ, ಸಂತೋಷಿಮಾ ಜೋಶಿ, ಶಿವಪ್ಪ ವಾದಿ, ಶರಣಪ್ಪ ಬಣ್ಣದಬಾವಿ ಇತರರಿದ್ದರು.