ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹರ್ಷೋತ್ಕರ್ಷ (ಯುೆರಿಯಾ) ಕಾರ್ಯಕ್ರಮವನ್ನು ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ್ ಗುರುವಾರ ಉದ್ಘಾಟಿಸಿದರು. ಐಕ್ಯೂಎಸಿ ಸಹ ಸಂಯೋಜಕ ಅನಿಲ್‌ಕುಮಾರ, ಹಿರಿಯ ಪ್ರಾಧ್ಯಾಪಕ ಡಾ.ಅಣ್ಣೋಜಿರೆಡ್ಡಿ ಇತರರಿದ್ದರು.
- ಪ್ರಾಚಾರ್ಯ ಡಾ. ಶಿವರಾಜ ಗುರಿಕಾರ್ ಸಲಹೆ
ಗಂಗಾವತಿ: ಉನ್ನತ ವ್ಯಾಸಂಗ ಮತ್ತು ಸಾಧನೆಗೆ ಪದವಿ ಪ್ರಮುಖ ಮಾರ್ಗವಾಗಿದ್ದು, ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಶಿವರಾಜ ಗುರಿಕಾರ್ ಸಲಹೆ ನೀಡಿದರು.
ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಸಭಾಂಗಣದಲ್ಲಿ ವಿಜ್ಞಾನ ವಿಭಾಗದಿಂದ ಗುರುವಾರ ಹಮ್ಮಿಕೊಂಡಿದ್ದ ಹರ್ಷೋತ್ಕರ್ಷ (ಯುೆರಿಯಾ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಪದವಿ ಅಂತಿಮ ವರ್ಷ ಮಹತ್ವದ ಘಟ್ಟವಾಗಿದ್ದು, ಉನ್ನತ ವ್ಯಾಸಂಗದ ವಿವಿಧ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಪದವಿಯಲ್ಲಿ ಉನ್ನತ ಸಾಧನೆಯೊಂದಿಗೆ ಯುಪಿಎಸ್‌ಸಿ, ಕೆಪಿಎಸ್‌ಸಿ ಸೇರಿ ಇತರ ವಿಭಾಗದ ಉದ್ಯೋಗಾವಕಾಶಗಳತ್ತ ಹೆಚ್ಚಿನ ಗಮನಹರಿಸಬೇಕು. ಕೌಶಲದೊಂದಿಗೆ ನಿರೀಕ್ಷಿತ ಗುರಿ ತಲುಪುವಂತೆ ಸಲಹೆ ನೀಡಿದರು.
ಐಕ್ಯೂಎಸಿ ಸಹ ಸಂಯೋಜಕ ಅನಿಲ್‌ಕುಮಾರ ಮತ್ತು ಹಿರಿಯ ಪ್ರಾಧ್ಯಾಪಕ ಡಾ.ಅಣ್ಣೋಜಿರೆಡ್ಡಿ ಮಾತನಾಡಿ, ಉನ್ನತ ವಾಸಂಗದ ಜತೆಗೆ ಕಲಿತ ಸಂಸ್ಥೆ, ಗುರುಗಳು ಮತ್ತು ಪಾಲಕರಿಗೆ ಕೀರ್ತಿ ತರುವ ಸಾಧನೆ ಮಾಡುವಂತೆ ಸಲಹೆ ನಿಡಿದರು. ಪ್ರಾಧ್ಯಾಪಕರಾದ ರವಿಕುಮಾರ, ಡಾ. ಸಲೀಂ, ಅಶೋಕ, ರಾಜೇಶ್ವರಿ, ಈಶ್ವರ, ಬಸವರಾಜ ಗಡಾದ, ಸುಮಲತಾ, ನಿರೋಷಾ, ನೇತ್ರಾ ಸಜ್ಜನ್, ಮಣಿಮೇಘಲ, ಯಶೋಧಾ, ಅಪೂರ್ವಾ ಇತರರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.