- ಮಾಜಿ ಸಚಿವ ಎಚ್.ಆಂಜನೇಯ ಆಗ್ರಹ
ಕೊಪ್ಪಳ : ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಸ್ವಾಗತಾರ್ಹ. ರೋಷ್ಠರ್ ಬಿಂದು ಹಂಚಿಕೆಯಲ್ಲಿ ಆದ ಎಡವಟ್ಟು ತಕ್ಷಣ ಸರಿಪಡಿಸಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮದು ಹಿಂದುಳಿದ ಸಮುದಾಯ. ಒಳ ಮೀಸಲಿಗಾಗಿ ಮೂರು ದಶಕದಿಂದ ಹೋರಾಟ ನಡೆಸಿದ್ದೇವೆ. ಸುಪ್ರೀಂ ನಿರ್ದೇಶನದಂತೆ ರಾಜ್ಯ ಸರ್ಕಾರ ಒಳ ಮೀಸಲು ಜಾರಿ ಮಾಡಿದೆ. 1&2 ಅಥವಾ 14 ಹುದ್ದೆಗಳ ನೇಮಕಾತಿಯಲ್ಲಿ ಒಳ ಮೀಸಲು ಆಗುವುದಿಲ್ಲ. ಅದನ್ನು ಹಿಂಪಡೆದು ರೋಷ್ಠರ್ ಬಿಂದು ಸರಿಪಡಿಸಬೇಕು. ಯಾವುದೇ ಹುದ್ದೆ ಇದ್ದರೂ ಮೀಸಲು ನೀಡದೇ ಭರ್ತಿ ಮಾಡಬಾರದು. ಸಾಮಾಜಿಕ ನ್ಯಾಯದ ಪರಿಕಲ್ಪನೆ ಹೊಂದಿರುವ ಸಿಎಂ, ಅಧಿಕಾರಿಗಳು ಮಾಡಿದ ಎಡವಟ್ಟು ಸರಿಪಡಿಸುವಂತೆ ಒತ್ತಾಯಿಸಿದರು.
ಹೊಸಪೇಟೆ, ಕೊಪ್ಪಳ ಭಾಗದಲ್ಲಿ ನಮ್ಮ ಸಮುದಾಯ ಅಧಿಕವಿದೆ. ಸಂಟಿತರಾಗುವುದು ಮುಖ್ಯ. ಬ್ರಾಹ್ಮಣ, ವೀರಶೈವ ಮಹಾಸಭಾ ಮಾದರಿಯಲ್ಲಿ ಒಂದೇ ಸಂಟನೆಯಡಿ ತರಲು ಮಾದಾರ ಮಹಾಸಭಾ ಸ್ಥಾಪಿಸಲಾಗಿದೆ. ಎಚ್.ಮುನಿಯಪ್ಪ ರಾಜ್ಯಾಧ್ಯಕ್ಷರಾಗಿದ್ದಾರೆ. ಜಿಲ್ಲಾ, ತಾಲೂಕು ಮಟ್ಟದ ಪದಾಧಿಕಾರಿಗಳ ನೇಮಕ, ಸದಸ್ಯತ್ವ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ನಮ್ಮ ಸಮುದಾಯ ಶಿಕ್ಷಣದಿಂದ ದೂರ ಉಳಿದಿರುವುದೇ ಹಿಂದುಳಿದಿರುವ ಪ್ರಮುಖ ಕಾರಣ. ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಬಳಸಿಕೊಂಡು ಯುವಕರು ಶಿಕ್ಷಣದತ್ತ ಬರಬೇಕು. ಓದಲು ಬೇಕಾದ ವಾತಾವರಣ ನಿರ್ಮಿಸುವ ಉದ್ದೇಶದಿಂದಲೇ ಮಹಾಸಭಾ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಹಣ ಹಂಚಿ ನನ್ನನ್ನು ಸೋಲಿಸಿದ್ದಾರೆ. ಬಡವರು, ಸಾಮಾಜಿಕ ನ್ಯಾಯ ಮತ್ತು ಸಂವಿಧಾನ ಪರ ಇದ್ದವರನ್ನು ಕೆಲವರು ಸಹಿಸರು. ಅಂಬೇಡ್ಕರ್ ಅವರನ್ನೇ ಎರಡು ಬಾರಿ ಸೋಲಿಸಲಾಗಿದೆ. ಅವಕಾಶ ವಂಚಿತ ಸಮುದಾಯಗಳ ಪರ ನನ್ನ ಹೋರಾಟ ಮುಂದುವರೆಯುವುದು. ಕಕ ಭಾಗದಲ್ಲಿ ಕ್ಷೇತ್ರಗಳ ಹಂಚಿಕೆಯಲ್ಲಿ ನಮಗೆ ಅನ್ಯಾಯವಾಗಿದೆ. ಪಜಾಗಳಲ್ಲಿ ನಮ್ಮ ಸಮುದಾಯಕ್ಕೆ ಸಮರ್ಪಕ ಮೀಸಲು ದೊರೆಯದ ಕಾರಣ ದುರ್ಬಲರಾಗಿದ್ದೇವೆ.
— ಎಚ್.ಆಂಜನೇಯ. ಮಾಜಿ ಸಚಿವ.