ಗಂಗಾವತಿ ಶ್ರೀ ಕೆಂದೋಳೆ ರಾಮಣ್ಣ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಜಾನಪದ ಜಾತ್ರೆ ಕಾರ್ಯಕ್ರಮವನ್ನು ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಮಂಜುಳಾ ಶಿವಪ್ಪ ಹತ್ತಿಮರದ, ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಬಸಪ್ಪ ನಾಗೋಲಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಸರಸ್ವತಿ ಜೂಡಿ, ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ರಾವ್ ಕಲ್ಯಾಣಿ ಇತರರಿದ್ದರು.
- ನಾಗಭೂಷಣ
- ಶಿವಾಚಾರ್ಯ
- ಅನಿಸಿಕೆ
ಗಂಗಾವತಿ: ಕೃಷಿ ಮತ್ತು ಜಾನಪದ ಕಲೆಗಳು ನಮ್ಮ ಮಣ್ಣಿನ ಸಂಸ್ಕೃತಿಯ ಕಣ್ಣುಗಳಾಗಿದ್ದು ಆಧುನಿಕತೆ ಅಬ್ಬರದಲ್ಲಿ ಮೂಲ ಬೇರುಗಳನ್ನು ಮರೆಯಬಾರದು ಎಂದು ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಹೇಳಿದರು.
ನಗರದ ಶ್ರೀ ಕೆಂದೋಳೆ ರಾಮಣ್ಣ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ರೈತದಿನಾಚರಣೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಜಾನಪದ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೃಷಿ ಚಟುವಟಿಕೆಗಳನ್ನು ಗೌರವಿಸಬೇಕಿದ್ದು, ಬೇಸಾಯಕ್ರಮಗಳಿಲ್ಲದಿದ್ದರೆ ಆಹಾರ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ ಎಂದರು.
ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಬಸಪ್ಪ ನಾಗೋಲಿ ಮಾತನಾಡಿ, ಜಾನಪದ ಸಂಸ್ಕೃತಿ ಶ್ರೀಮಂತವಾಗಿದ್ದು, ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಪೀಳಿಗೆ ಮೇಲಿದೆ ಎಂದರು.
ಸಂಸ್ಥಾಪಕ ಅಧ್ಯಕ್ಷ ಕೃಷ್ಣಪ್ಪ ಕೆಂದೋಳೆ ಸ್ಮರಣಾರ್ಥ ನಿರ್ಮಾಣಗೊಂಡ ವೇದಿಕೆ ಉದ್ಘಾಟಿಸಲಾಯಿತು. ಸಂಸ್ಥೆ ಗೌರವ ಅಧ್ಯಕ್ಷೆ ಪ್ರಮಿಳಾಬಾಯಿ, ಕಾರ್ಯದರ್ಶಿ ರಾಂಮೋಹನ್, ಕೃಷ್ಣ ಕೆಂದೋಳೆ, ಸದಸ್ಯರಾದ ವೆಂಕಟೇಶ ಕಲ್ಯಾಣಿ, ಯಶ್ವಂತ್ ಕೆಂದೋಳೆ, ಪ್ರಾಚಾರ್ಯ ಶಿವಾನಂದ ಮೇಟಿ, ಮುಖ್ಯಶಿಕ್ಷಕರಾದ ಮದ್ದಾನಪ್ಪ, ದಿವಾಕರ ಹಿರೇಮಠ ಇತರರಿದ್ದರು. ಕೃಷಿ ಉಪಕರಣಗಳ ಮತ್ತು ಜಾನಪದ ಶೈಲಿಯ ಪ್ರದರ್ಶನಗಳು ಗಮನಸೆಳೆದವು.