ಅಗಳಕೇರಾ ಗ್ರಾಂಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ರೋಜಗಾರ್ ದಿವಸ್ ಕಾರ್ಯಕ್ರಮದಲ್ಲಿ ಗ್ರಾಂಪಂ ಪಿಡಿಒ ಬಸವರಾಜ ಬಳಿಗಾರ ಮಾತನಾಡಿದರು.
- ಪಿಡಿಒ ಬಸವರಾಜ ಬಳಿಗಾರ
- ರೋಜಗಾರ್ ದಿವಸ್ ಆಚರಣೆ
ಕೊಪ್ಪಳ : ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಎಲ್ಲಾ ಕೂಲಿಕಾರರು ಫಾರಂ ನಂ.6 ಸಲ್ಲಿಸಿ ಕೂಲಿ ಕೆಲಸಕ್ಕೆ ಹಾಜರಾಗುವಂತೆ ಅಗಳಕೇರಾ ಗ್ರಾಂಪಂ ಪಿಡಿಒ ಬಸವರಾಜ ಬಳಿಗಾರ ಸೂಚನೆನೀಡಿದರು.
ಅಗಳಕೇರಾ ಗ್ರಾಂಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ರೋಜಗಾರ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಿನಕ್ಕೆ 370 ರೂ. ಕೂಲಿ ನಿಗದಿಪಡಿಸಿದ್ದು ಸಂಪೂರ್ಣವಾಗಿ ಕೂಲಿ ಕೆಲಸ ನಿರ್ವಹಿಸಿ ಪೂರ್ತಿ ಹಣ ಪಡೆದುಕೊಳ್ಳಬೇಕು. 18 ವರ್ಫಿ ಮೇಲ್ಪಟ್ಟ ಕುಟುಂಬದ ಸದಸ್ಯರು ಜಾಬಕಾರ್ಡ ಬಳಕೆ ಮಾಡಿಕೊಂಡು ಕೂಲಿ ಕೆಲಸ ಪಡೆಯಲು ಕಡ್ಡಾಯವಾಗಿ ನಮೂನೆ- 6 ಸಲ್ಲಿಸಿ. ಕೂಲಿ ಹಣದಿಂದ ಮಕ್ಕಳ ಶಾಲಾ, ಕಾಲೇಜು ಶುಲ್ಕ ಭರಿಸಲು, ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗೆ ಶುಲ್ಕ ಹಾಗೂ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದರು.
ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಪ್ರತಿ ಜಾಬಕಾರ್ಡಗೆ 100 ಮಾನವ ದಿನಗಳ ಕೂಲಿ ಕೆಲಸ ನೀಡಲಾಗುತ್ತಿದ್ದು ಸದುಪಯೋಗ ಪಡೆಯಬೇಕು. ಗ್ರಾಮೀಣ ಭಾಗದ ಕೂಲಿಕಾರರು ಗುಳೆ ಹೋಗುವದನ್ನು ನಿಯಂತ್ರಿಸಿ ಸ್ಥಳಿಯವಾಗಿ ಉದ್ಯೋಗ ಒದಗಿಸಿ ಸ್ವಾವಂಬಿ ಜೀವನ ನಡೆಸಲು ಯೋಜನೆಯ ಸದುದ್ದೇಶವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಾಯಕ ಬಂಧುಗಳ ಮೂಲಕ ಒಟ್ಟು 121 ಕೂಲಿಕಾರರ ಫಾರಂ ನಂ.6 ಸ್ವೀಕರಿಸಲಾಯಿತು. ಗ್ರಾಂಪಂ ಕಾರ್ಯದರ್ಶಿ ಅಕ್ಷಯಕುಮಾರ, ಡಿಇಒ ಸುಮನ್, ಬೇರ್ಫೂಟ್ ಟೆಕ್ನಿಷಿಯನ್ ಮೈಲಾರಪ್ಪ, ಕಾಯಕ ಬಂಧುಗಳಾದ ಇಸ್ಯಾಯಿಲ್, ಮಹಾಂತೇ ಕಟ್ಟಿಮನಿ, ಲತಾ ರಾಜಶೇಖರ, ಹನಮಂತಪ್ಪ, ಗವಿಸಿದ್ದಪ್ಪ, ಬಸವರಾಜ, ಬೀರಪ್ಪ, ಮಂಜುನಾಥ, ಇತರರಿದ್ದರು.