ಗಂಗಾವತಿ ತಾಲೂಕಾಡಳಿತ ಸೌಧದ ಕಚೇರಿಯಲ್ಲಿ ಕಂದಾಯ ಇಲಾಖೆ ಮತ್ತು ಹಡಪದ ಅಪ್ಪಣ್ಣ ಸಮಾಜದ ತಾಲೂಕು ಸಮಿತಿಯಿಂದ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವ ನಡೆಯಿತು. ತಹಸೀಲ್ದಾರ್ ಯು.ವಸಂತಕುಮಾರಿ, ಶಿರಸ್ತೇದಾರ್‌ರಾದ ರವಿಕುಮಾರ ನಾಯಕ್ವಾಡಿ, ಜೆ.ಎನ್.ಶ್ರೀಕಾಂತ, ಶಿವಶಂಕರ ಇತರರಿದ್ದರು. 
ಕೊಪ್ಪಳ

ಸಮಾನತೆ- ಶ್ರಮದ ಮಹತ್ವ ತಿಳಿಸಿದ ಶಿವಶರಣ

ಪ್ರಮುಖ ಮುಖ್ಯಾಂಶಗಳು

  • ದಾರ್ಶನಿಕ
  • ಶರಣ
  • ತತ್ವಗಳು
ಗಂಗಾವತಿ: ತಾಲೂಕಾಡಳಿತ ಸೌಧದ ಕಚೇರಿಯಲ್ಲಿ ಕಂದಾಯ ಇಲಾಖೆ ಮತ್ತು ಹಡಪದ ಅಪ್ಪಣ್ಣ ಸಮಾಜ ತಾಲೂಕು ಸಮಿತಿಯಿಂದ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ತಹಸೀಲ್ದಾರ್ ಯು.ವಸಂತಕುಮಾರಿ ಮಾತನಾಡಿ, ದಾರ್ಶನಿಕರ ಮತ್ತು ಶರಣ ವಚನ ಮತ್ತು ತತ್ವಗಳು ದಾರಿದೀಪವಾಗಿದ್ದು, ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು. ಶಿರಸ್ತೇದಾರ್‌ರಾದ ರವಿಕುಮಾರ ನಾಯಕ್ವಾಡಿ, ಜೆ.ಎನ್.ಶ್ರೀಕಾಂತ, ಶಿವಶಂಕರ, ಸೂರ್ಯಕಾಂತ ನಾಯಕ, ನಾಗರತ್ನಮ್ಮ, ಕವಿತಾ, ಪದಾಧಿಕಾರಿಗಳಾದ ಸರಿಗಮ ಹನುಮಂತಪ್ಪ, ನೀಲಕಮಲ್ ಶಿವಣ್ಣ, ಶರಣಪ್ಪ ಇತರರಿದ್ದರು.
ಹಣ್ಣುಗಳ ವಿತರಣೆ: ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವ ನಿಮಿತ್ತ ಹಡಪದ ಅಪ್ಪಣ್ಣ ಸಮಾಜ ತಾಲೂಕು ಘಟಕದಿಂದ ನಗರದ ಉಪವಿಭಾಗ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣುಗಳನ್ನು ವಿತರಿಸಲಾಯಿತು.
ಸಂಘದ ಜಿಲ್ಲಾ ಗೌರವಾಧ್ಯಕ್ಷ ಸರಿಗಮ ಹನುಮಂತಪ್ಪ ಮಾತನಾಡಿ, ಸಮಾನತೆ, ಶ್ರಮದ ಮಹತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಸಾರಿದ ಶ್ರೇಷ್ಟ ಸಂತರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಪದಾಧಿಕಾರಿಗಳಾದ ಎಚ್. ಮಂಜುನಾಥ, ನಿರುಪಾದಿ ಕೇಸರಹಟ್ಟಿ, ಶಿವಣ್ಣ ನೀಲಕಮಲ್, ಭೀಮನಗೌಡ, ವಿಕ್ರಂ ಪಾಟೀಲ್, ಶರಣಬಸವ, ಶರಣು, ಕಲ್ಲೇಶ, ಕಳಕಪ್ಪ, ಕೊಟ್ರೇಶ, ರುದ್ರೇಶ, ಶರಣ ಬಸವನಗೌಡ, ಚಂದ್ರಶೇಖರ್, ಎಚ್.ಸುರೇಶ ಇತರರಿದ್ದರು.