ಎಸ್‌ಐಆರ್ ಅಭಿಯಾನಕ್ಕೆ ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ತಮ್ಮ ನಿವಾಸದಲ್ಲಿ ಅರ್ಜಿ ನಮೂನೆ ಭರ್ತಿ ಮಾಡುವ ಮೂಲಕ ಮಂಗಳವಾರ ಚಾಲನೆ ನೀಡಿದರು. ತಹಸೀಲ್ದಾರ್ ಯು. ವಸಂತಕುಮಾರಿ, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ಬಿಎಲ್‌ಒ ಗಿರಿಜಮ್ಮ, ಬಿಎಲ್‌ಎ 1 ವೀರೇಶ ಬಲ್ಕುಂದಿ ಇತರರಿದ್ದರು. 
ಕೊಪ್ಪಳ

ಪ್ರಜಾಪ್ರಭುತ್ವ ಬಲಪಡಿಸುವ ಮಹತ್ವದ ಪ್ರಕ್ರಿಯೆ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿಕೆ
ಗಂಗಾವತಿ: ತಾಲೂಕಾಡಳಿತದಿಂದ ನಗರ ಮತ್ತು ತಾಲೂಕಿನಲ್ಲಿ ಆರಂಭವಾದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಅಭಿಯಾನಕ್ಕೆ ಶಾಸಕ ಗಾಲಿ ಜನಾರ್ದನರೆಡ್ಡಿ ನಗರದ ತಮ್ಮ ನಿವಾಸದಲ್ಲಿ ಅರ್ಜಿ ನಮೂನೆ ಭರ್ತಿ ಮಾಡುವ ಮೂಲಕ ಮಂಗಳವಾರ ಚಾಲನೆ ನೀಡಿದರು. ಬೂತ್ ಮಟ್ಟದ ಅಧಿಕಾರಿಗಳು ಎನ್ಯುಮರೇಷನ್ ಅರ್ಜಿಯನ್ನು ಶಾಸಕರಿಂದ ಭರ್ತಿ ಮಾಡಿಸಿಕೊಂಡು ಸ್ವೀಕೃತಿ ನೀಡಿದರು.
ಶಾಸಕ ಗಾಲಿ ಜನಾರ್ದನರೆಡ್ಡಿ ಮಾತನಾಡಿ, ಪ್ರಜಾಪ್ರಭುತ್ವ ಬಲಪಡಿಸುವ ಮಹತ್ವದ ಪ್ರಕ್ರಿಯೆಯಲ್ಲಿ ಅರ್ಹ ಮತದಾರರೂ ಸಕ್ರಿಯವಾಗಿ ಭಾಗವಹಿಸಬೇಕು. ಮನೆಗೆ ಭೇಟಿ ನೀಡುವ ಬೂತ್ ಮಟ್ಟದ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸಿ, ಮತದಾರರ ಪಟ್ಟಿಯನ್ನು ನಿಖರ, ಪಾರದರ್ಶಕ ಹಾಗೂ ಸಮಗ್ರವಾಗಿಸಲು ಸಹಕರಿಸಿ. ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿರುವುದು ಪ್ರಜಾಪ್ರಭುತ್ವದ ಶಕ್ತಿ ಪ್ರತೀಕ. ನಿರ್ಲಕ್ಷ್ಯಸದೇ ಯಶಸ್ವಿಗೊಳಿಸಿ ಎಂದರು.
ತಹಸೀಲ್ದಾರ್ ಯು.ವಸಂತಕುಮಾರಿ, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ಬಿಎಲ್‌ಒ ಗಿರಿಜಮ್ಮ, ಬಿಎಲ್‌ಎ 1 ವೀರೇಶ ಬಲ್ಕುಂದಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಪ್ರಮುಖರಾದ ಚಂದ್ರು ಹೀರೂರು, ಡಿ.ಕೆ.ಆಗೋಲಿ, ಲಿಂಗನಗೌಡ ಹೇರೂರು, ಮನೋಹರಗೌಡ ಹೇರೂರು ಇತರರಿದ್ದರು.
ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಅಭಿಯಾನಕ್ಕೆ ಸರ್ವರೂ ಸಹಕರಿಸುವಂತೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮನವಿ ಮಾಡಿದರು. ನಗರದ ಬನ್ನಿಗಿಡದ ಕ್ಯಾಂಪ್‌ನ ತಮ್ಮ ನಿವಾಸದಲ್ಲಿ ಅರ್ಜಿ ನಮೂನೆ ಭರ್ತಿ ಮಾಡಿ ಮಾತನಾಡಿದರು. ಮಹತ್ವದ ಕಾರ್ಯಕ್ಕೆ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದ್ದು, ಭವಿಷ್ಯದ ಹಿತದೃಷ್ಟಿಯಿಂದ ಅನುಕೂಲವಾಗಲಿದೆ ಎಂದರು.
ತಹಸೀಲ್ದಾರ್ ಯು. ವಸಂತಕುಮಾರಿ, ಪೌರಾಯುಕ್ತ ಆರ್. ವಿರೂಪಾಕ್ಷ ಮೂರ್ತಿ, ಬಿಎಲ್‌ಒ ಯಮನೂರಪ್ಪ, ಚುನಾವಣೆ ಶಿರಸ್ತೇದಾರ್ ರವಿ ನಾಯಕವಾಡಿ, ನಗರಸಭೆ ಮಾಜಿ ಸದಸ್ಯ ಪರಶುರಾಮ ಮಡ್ಡೇರ, ಪ್ರಮುಖರಾದ ಶಿವಕುಮಾರ ಅರಿಕೇರಿ, ಶ್ರೀನಿವಾಸ ಧೂಳಾ, ಚನ್ನಬಸವ ಅಕ್ಕಿ, ಚಂದ್ರಶೇಖರ ಅಕ್ಕಿ, ಬಸವರಾಜ ಬಾಳೆಕಾಯಿ, ಲಿಂಗರಾಜ, ಸಂಗಯ್ಯ ಸ್ವಾಮಿ ಇತರರಿದ್ದರು.