ಅಳವಂಡಿ ಜೆಸ್ಕಾಂ ಕಚೇರಿ ಮುಂದೆ ರೈತರು ಹಾಗೂ ಬಿಜೆಪಿ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿ ಜೆಸ್ಕಾಂ ಇಇ ಮೋಟ್ಲಾ ನಾಯಕಗೆ ಮನವಿ ಸಲ್ಲಿಸಿದರು. ಎಇಇ ಸೈಯದ್, ಎಸ್‌ಒ ಅಮಾಜೆಪ್ಪ, ಪ್ರಮುಖರಾದ ವೀರೇಶ ಸಜ್ಜನ, ಡಾ.ಸಿದ್ದಲಿಂಗಸ್ವಾಮಿ, ಬಸವರಡ್ಡಿ, ಗಣೇಶ, ಹನುಮಂತಪ್ಪ, ಶ್ರೀನಿವಾಸ್, ದೇವಪ್ಪ, ಭೀಮರಡ್ಡಿ, ಗವಿಸಿದ್ದಪ್ಪ, ಪ್ರಕಾಶ, ಗಂಗಪ್ಪ ಇತರರಿದ್ದರು. 
ಕೊಪ್ಪಳ

ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಅಳವಂಡಿ ಜೆಸ್ಕಾಂ ಕಚೇರಿ ಮುಂದೆ ರೈತರ ಪ್ರತಿಭಟನೆ
  • ವಿದ್ಯುತ್‌ಗಾಗಿ ಜಮೀನಿನಲ್ಲಿ ಕಾಯುವ ಪರಿಸ್ಥಿತಿ
ಅಳವಂಡಿ: ಸಮರ್ಪಕ ವಿದ್ಯುತ್ ಪೂರೈಗೆ ಆಗ್ರಹಿಸಿ ರೈತರು ಗ್ರಾಮದ ಜೆಸ್ಕಾಂ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ಕೆಲ ದಿನಗಳಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಪೂರೈಸುವ ವಿದ್ಯುತ್ ಅಸಮರ್ಪಕವಾಗಿದ್ದು, 5-10 ನಿಮಿಷಕ್ಕೊಮ್ಮೆ ಕಡಿತಗೊಳ್ಳುತ್ತಿದೆ. ಇದರಿಂದ ಮೋಟಾರಗಳು ಸುಡುತ್ತಿವೆ. ಬೆಳೆಗಳಿಗೆ ಸರಿಯಾಗಿ ನೀರು ಹರಿಸಲು ಆಗುತ್ತಿಲ್ಲ. ವಿದ್ಯುತ್‌ಗಾಗಿ ಜಮೀನಿನಲ್ಲಿ ಕಾಯುವ ಪರಿಸ್ಥಿತಿ ಉಂಟಾಗಿದೆ. ವಿದ್ಯುತ್ ಪೂರೈಸುವ ಬಗ್ಗೆ ಲಿಖಿತ ಭರವಸೆ ನೀಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟುಹಿಡಿದರು.
ಜೆಸ್ಕಾಂ ಇಇ ಮೋಟ್ಲಾ ನಾಯಕ ಮಾತನಾಡಿ, ಮುಂಗಾರು ಮಳೆ ಕೈ ಕೊಟ್ಟಿರುವುದರಿಂದ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಸಮಸ್ಯೆ ಆಗುತ್ತಿದೆ. ಅಳವಂಡಿಯಿಂದ ಪೂರೈಸುತ್ತಿರುವ ಎಲ್ಲ ವಿದ್ಯುತ್ ಲೈನ್‌ಗಳು ಓವರ್‌ಲೋಡ್ ಆಗುವತ್ತಿದ್ದು, ಟ್ರಿಪ್ ಆಗಿ ಸಮಸ್ಯೆಯಾಗುತ್ತಿದೆ. ಕೆಲ ದಿನಗಳಲ್ಲಿ ಹೊಸ ಪರಿವರ್ತಕ ಅಳವಡಿಸಲಾಗುತ್ತಿದ್ದು, ಸಮಸ್ಯೆ ಕಡಿಮೆಯಾಗಲಿದೆ. ನಿಲೋಗಿಪುರ ವಿದ್ಯುತ್ ವಿತರಣಾ ಕೇಂದ್ರ ಆರಂಭವಾದರೆ ವಿದ್ಯುತ್ ಪೂರೈಕೆ ಸಮಸ್ಯೆ ಬಗೆಹರಿಯಲಿದೆ. ಸಾಧ್ಯವಾದಷ್ಟು ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಜೆಸ್ಕಾಂ ಎಇಇ ಸೈಯದ್, ಎಸ್‌ಒ ಅಮಾಜೆಪ್ಪ, ಬಿಜೆಪಿ ಗ್ರಾಮೀಣ ಮಂಡಲ ತಾಲೂಕು ಅಧ್ಯಕ್ಷ ವೀರೇಶ ಸಜ್ಜನ, ಪ್ರಮುಖರಾದ ಡಾ.ಸಿದ್ದಲಿಂಗಸ್ವಾಮಿ ಇನಾಮದಾರ, ಬಸವರಡ್ಡಿ ಗಣೇಶ, ಹನುಮಂತಪ್ಪ, ಶ್ರೀನಿವಾಸ್ ಕಲಾದಗಿ, ದೇವಪ್ಪ, ಭೀಮರಡ್ಡಿ, ಗವಿಸಿದ್ದಪ್ಪ, ಪ್ರಕಾಶ, ಗಂಗಪ್ಪ ಇತರರಿದ್ದರು.