ಕೊಪ್ಪಳದಲ್ಲಿ ಗುರುವಾರ ಹಮ್ಮಿಕೊಂಡ ತಾಲೂಕು ಮಟ್ಟದ ಟಾಸ್ಕ್​ ಫೋರ್ಸ್​ ಸಮಿತಿ ಸಭೆಯಲ್ಲಿ ತಾಪಂ ಇಒ ದುಂಡಪ್ಪ ತುರಾದಿ ಕರಪತ್ರ ಬಿಡುಗಡೆ ಮಾಡಿದರು. ಬಾಲಕಾರ್ಮಿಕ ಯೋಜನೆಯ ಜಿಲ್ಲಾ ನಿರ್ದೇಶಕ ಬಸವರಾಜ ಹಿರೇಗೌಡರ, ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಶರಣಪ್ಪ ಸಿಂಗನಾಳ, ಕೊಪ್ಪಳ ಬಿ.ಇ.ಒ. ಹನುಮಂತಪ್ಪ, ಮಕ್ಕಳ ರಕ್ಷಣ ಘಕದ ಪ್ರಥಿಭಾ ಕಾಶಿಮಠ, ಶಂಕರ್​, ಹುಸೇನ್​ ಬೀ ಇತರರಿದ್ದರು. 
ಕೊಪ್ಪಳ

ಬಾಲಕಾರ್ಮಿಕ ಪದ್ಧತಿ ನಿಮೂರ್ಲನೆ ಎಲ್ಲರ ಹೊಣೆ

ಪ್ರಮುಖ ಮುಖ್ಯಾಂಶಗಳು

  • ಇಒ ದುಂಡಪ್ಪ ತುರಾದಿ ಸೂಚನೆ
  • ಟಾಸ್ಕ್​ ಫೋರ್ಸ್​ ಸಮಿತಿ ಸಭೆ
ಕೊಪ್ಪಳ : ತಾಲೂಕಿನಾದ್ಯಂತ ಬಾಲಕಾರ್ಮಿಕರನ್ನು ಪತ್ತೆ ಹಚ್ಚಿ, ಈ ಪಿಡುಗನ್ನು ಸಂಪೂರ್ಣವಾಗಿ ನಿಮೂರ್ಲನೆ ಮಾಡುವುದು ಕೇವಲ ಒಂದು ಇಲಾಖೆಯ ಕೆಲಸವಲ್ಲ, ಇದು ಎಲ್ಲಾ ಇಲಾಖೆಗಳ ಜವಾಬ್ದಾರಿಯಾಗಿದೆ ಎಂದು ತಾಪಂ ಇಒ ದುಂಡಪ್ಪ ತುರಾದಿ ಹೇಳಿದರು.
ತಾಪಂ ಕಚೇರಿಯಲ್ಲಿ ಗುರುವಾರ ಪ್ಯಾನ್​-ಇಂಡಿಯಾ ಬಾಲಕಾರ್ಮಿಕರ ರಕ್ಷಣೆ ಮತ್ತು ಪುನರ್ವಸತಿ ಅಭಿಯಾನದ ಅಂಗವಾಗಿ ನಡೆದ ತಾಲೂಕು ಮಟ್ಟದ ಟಾಸ್ಕ್​ ಫೋರ್ಸ್​ ಸಮಿತಿ ಸಭೆಯಲ್ಲಿ ಮಾತನಾಡಿದರು.
ಬೇಸಿಗೆಯ ಸಮಯದಲ್ಲಿ ಮಕ್ಕಳು ಹಳ್ಳಕೊಳ್ಳಗಳಿಗೆ ಈಜಲು ಹೋಗುವುದು ಅಥವಾ ದನ-ಕುರಿ ಕಾಯುವ ಕೆಲಸಕ್ಕೆ ಹೋಗುವಾಗ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಸ್ಥಳಿಯ ಅಧಿಕಾರಿಗಳು, ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತರು ಮತ್ತು ಪೋಷಕರು ಹೆಚ್ಚಿನ ಜಾಗೃತಿ ವಹಿಸಬೇಕು. ಕಾರ್ಮಿಕ ಇಲಾಖೆಯೊಂದಿಗೆ ಇತರ 11 ಇಲಾಖೆಗಳ ಅಧಿಕಾರಿಗಳಿಗೂ ಕಾಯಿದೆ ಕಲಂ-17ರಡಿ ತಪಾಸಣೆ ನಡೆಸುವ ಅಧಿಕಾರ ನೀಡಲಾಗಿದೆ. ಪ್ರತಿಯೊಬ್ಬ ಅಧಿಕಾರಿಯೂ ತಮ್ಮ ವ್ಯಾಪ್ತಿಯಲ್ಲಿ ನಿರಂತರ ಕಾರ್ಯಾಚರಣೆ ನಡೆಸಬೇಕು ಎಂದರು.
ಬಾಲಕಾರ್ಮಿಕ ಯೋಜನೆಯ ಜಿಲ್ಲಾ ನಿರ್ದೇಶಕ ಬಸವರಾಜ ಹಿರೇಗೌಡರ, ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಶರಣಪ್ಪ ಸಿಂಗನಾಳ, ಕೊಪ್ಪಳ ಬಿ.ಇ.ಒ. ಹನುಮಂತಪ್ಪ, ಮಕ್ಕಳ ರಕ್ಷಣ ಘಕದ ಪ್ರಥಿಭಾ ಕಾಶಿಮಠ, ಶಂಕರ್​, ಹುಸೇನ್​ ಬೀ ಇತರರಿದ್ದರು.
ನಗರದಲ್ಲಿ ದಾಳಿ ಕಿಶೋರ ಕಾರ್ಮಿಕನ ರಕ್ಷಣೆ
ಸಭೆಯ ನಂತರ ನಗರದ ಹೋಟೆಲ್​, ಗ್ಯಾರೇಜ್​, ಬೇಕರಿ ಹಾಗೂ ಬಟ್ಟೆ ಅಂಗಡಿಗಳ ಮೇಲೆ ಟಾಸ್ಕ್​ ಫೋರ್ಸ್​ ತಂಡವು ದಿಢೀರ್​ ದಾಳಿ ನಡೆಸಿತು. ಈ ಸಂದರ್ಭದಲ್ಲಿ ನಗರದ ಮಾಜಿಸಾ ಕಲೆಕ್ಷನ್​ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಕಿಶೋರ ಕಾರ್ಮಿಕನನ್ನು ರಕ್ಷಿಸಲಾಯಿತು. 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಅಪರಾಧ ಎಂದು ಮಾಲೀಕರಿಗೆ ಎಚ್ಚರಿಸಿದರು. ರಕ್ಷಿಸಲ್ಪಟ್ಟ ಬಾಲಕನನ್ನು ಮುಂದಿನ ಪೋಷಣೆ ಮತ್ತು ಪುನರ್ವಸತಿಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್​ ಇಲಾಖೆ, ನಗರಸಭೆ, 1098 ಸಹಾಯವಾಣಿ ಸಿಬ್ಬಂದಿ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.