ಮರ್ಯಾದೆ ಹತ್ಯೆ ಅಪರಾಧಿಗಳಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಅಖಿಲ ಭಾರತ ಮಾದಿಗ ದಂಡೋರ ತಾಲೂಕು ಸಮಿತಿ ಗಂಗಾವತಿಯಲ್ಲಿ ಶಿರಸ್ತೇದಾರ್ ಸುನೀಲ್ ಕುಲ್ಕರ್ಣಿಗೆ ಮನವಿ ಸಲ್ಲಿಸಿತು. ತಾಲೂಕಾಧ್ಯಕ್ಷ ಕನಕಪ್ಪ ದೊಡ್ಮನಿ, ಜಿಲ್ಲಾ ಉಪಾಧ್ಯಕ್ಷ ಶಿವಪ್ಪ ಸಿದ್ದಾಪುರ, ಪದಾಧಿಕಾರಿಗಳಾದ ಗುಂಡಪ್ಪ ನೀಲೋಗಲ್, ಯಮನೂರಪ್ಪ ಗೋನಾಳ ಇತರರಿದ್ದರು. 
ಕೊಪ್ಪಳ

ದಲಿತರ ಮೇಲಿನ ದೌರ್ಜನ್ಯ ಕಡಿವಾಣ ಹಾಕಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಮಾದಿಗ ದಂಡೋರ ತಾಲೂಕು ಸಮಿತಿ ಒತ್ತಾಯ
  • ಗಂಗಾವತಿ ತಾಲೂಕಾಡಳಿತ ಕಚೇರಿ ಮುಂಭಾಗ ಪ್ರತಿಭಟನೆ
ಗಂಗಾವತಿ: ಹುಬ್ಬಳ್ಳಿಯ ಮರ್ಯಾದೆ ಹತ್ಯೆ ಪ್ರಕರಣದ ಅಪರಾಧಿಗಳಿಗೆ ಸೂಕ್ತ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಅಖಿಲ ಭಾರತ ಮಾದಿಗ ದಂಡೋರ ತಾಲೂಕು ಸಮಿತಿ ಸದಸ್ಯರು ನಗರದ ತಾಲೂಕಾಡಳಿತ ಸೌಧದ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಮೀಸಲು ವರ್ಗದ ಯುವಕನನ್ನು ಮದುವೆಯಾದ ಕಾರಣಕ್ಕೆ ಮಗಳನ್ನು ಕೊಂದವರಿಗೆ ಸೂಕ್ತ ಶಿಕ್ಷೆ ವಿಧಿಸಬೇಕಿದ್ದು, ಯುವಕನ ಕುಟುಂಬಕ್ಕೆ ಜಿಲ್ಲಾಡಳಿತ ರಕ್ಷಣೆ ನೀಡಬೇಕು. ಪರಿಹಾರದ ಜತೆಗೆ ಸ್ವಾವಲಂಬಿಯಾಗಿ ಬದುಕಲು ಸರ್ಕಾರಿ ಉದ್ಯೋಗ ಕಲ್ಪಿಸಬೇಕು. ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಕ್ಕೆ ಸರ್ಕಾರ ಕಡಿವಾಣ ಹಾಕಬೇಕಿದ್ದು, ಕಾಯ್ದೆಯನ್ನು ಬಲಪಡಿಸುವಂತೆ ಒತ್ತಾಯಿಸಿದರು. ಶಿರಸ್ತೇದಾರ್ ಸುನೀಲ್ ಕುಲ್ಕರ್ಣಿಗೆ ಸಲ್ಲಿಸಿದರು.
ಸಮಿತಿ ತಾಲೂಕಾಧ್ಯಕ್ಷ ಕನಕಪ್ಪ ದೊಡ್ಮನಿ, ಜಿಲ್ಲಾ ಉಪಾಧ್ಯಕ್ಷ ಶಿವಪ್ಪ ಸಿದ್ದಾಪುರ, ಪದಾಧಿಕಾರಿಗಳಾದ ಗುಂಡಪ್ಪ ನೀಲೋಗಲ್, ಯಮನೂರಪ್ಪ ಗೋನಾಳ, ರಮೇಶ ಢಣಾಪುರ, ಯಮನೂರಪ್ಪ ಚುಕ್ಕಾಡಿ ಇತರರಿದ್ದರು.