ಗಂಗಾವತಿ ದಿನದ ಮಾರುಕಟ್ಟೆಯ ುಟ್‌ಪಾತ್ ಒತ್ತುವರಿ ಮಾಡಿಕೊಂಡಿದ್ದ ಕಟ್ಟಡಗಳನ್ನು ಗುರುವಾರ ನೆಲಸಮಗೊಳಿಸಲಾಯಿತು.
- ಪ್ರಭಾವಿಗಳಿಗೆ ಅನುಕೂಲ
- 2ನೇ ದಿನವೂ ಮುಂದುವರಿದ ಒತ್ತುವರಿ ತೆರವು
ಗಂಗಾವತಿ: ನಗರದ ುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಎರಡನೇ ದಿನವಾದ ಗುರುವಾರವೂ ಮುಂದುವರಿದಿದ್ದು, ಚರಂಡಿ ಜಾಗ ಅತಿಕ್ರಮಿಸಿದ್ದ ಕಟ್ಟಡಗಳನ್ನು ತೆರವುಗೊಳಿಸಲಾಯಿತು.
ುಟ್‌ಪಾತ್ ಒತ್ತುವರಿ ಕುರಿತು ಸ್ಥಳೀಯ ನ್ಯಾಯಾಲಯ ಗರಂ ಆಗಿದ್ದು, ನಗರಸಭೆ ಮತ್ತು ಪೊಲೀಸ್ ಇಲಾಖೆ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿತ್ತು. ಎಚ್ಚೆತ್ತುಕೊಂಡ ಅಧಿಕಾರಿಗಳ ತಂಡ ತೆರವು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದು, ಗಾಂಧಿ ಸರ್ಕಲ್, ಮಹಾವೀರ, ಗಣೇಶ, ಸಿಬಿಎಸ್, ಜುಲಾಯಿನಗರ ಮತ್ತು ಬಸವಣ್ಣ ಸರ್ಕಲ್ ಸಂಪರ್ಕ ರಸ್ತೆಯಲ್ಲಿ 5 ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿತು. ಸ್ವಯಂಪ್ರೇರಣೆ ತೆರವಿಗೆ ಅವಕಾಶ ನೀಡುವಂತೆ ಕೆಲ ವ್ಯಾಪಾರಿಗಳು ಮಾಡಿಕೊಂಡ ಮನವಿಗೂ ಅಧಿಕಾರಿಗಳು ಸ್ಪಂದಿಸಲಿಲ್ಲ. ುಟ್‌ಪಾತ್ ಜಾಗದಲ್ಲಿ ಮೆಟ್ಟಿಲು ಸೇರಿ ಇತರ ಕಟ್ಟಡ ಕಟ್ಟಿಕೊಂಡಿದ್ದ ಮಳಿಗೆದಾರರಿಗೆ ಸ್ವಯಂಪ್ರೇರಣೆಯಿಂದ ತೆರವಿಗೆ ನಗರಸಭೆ ಸಿಬ್ಬಂದಿ ಸೂಚನೆ ನೀಡಿತ್ತು. ಎರಡನೇ ದಿನ ಕಟ್ಟಡಗಳನ್ನು ತೆರವುಗೊಳಿಸಲಾಯಿತು.
ಪರ್ಯಾಯಕ್ಕೆ ಒತ್ತಾಯ
ತೆರವು ಕಾರ್ಯಾಚರಣೆ ಜತೆಗೆ ಬೀದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲಾಗಿದ್ದು, ಬಸ್‌ನಿಲ್ದಾಣ, ಮಹಾವೀರ, ಗಾಂಧಿ ವೃತ್ತ, ಜುಲಾಯಿ ನಗರದಲ್ಲಿದ್ದ ತಳ್ಳು ಬಂಡಿಗಳೆಲ್ಲ ಮಾಯವಾಗಿದ್ದವು. ುಟ್‌ಪಾತ್‌ನಲ್ಲಿದ್ದ ಮಾಂಸದಂಗಡಿಗಳನ್ನು ಮಳಿಗೆಗಳಿಗೆ ಶ್‌ಟಿ ಮಾಡಲಾಗಿತ್ತು. ಆರಂಭಿಕ ತೆರವಿಗೆ ವಿರೋಧ ವ್ಯಕ್ತಪಡಿಸಿದ್ದ ವ್ಯಾಪಾರಿಗಳು, ಎರಡನೇ ದಿನ ಸ್ವಯಂಪ್ರೇರಣೆಗೆ ಮುಂದಾದರು. ಪರ್ಯಾಯ ವ್ಯವಸ್ಥೆಗೆ ನಗರಸಭೆ ಸಿಬ್ಬಂದಿ ಒತ್ತಾಯಿಸಿದರಲ್ಲದೇ, ಗುಂಡಮ್ಮ ಕ್ಯಾಂಪ್ ಸಿಟಿ ಮಾರುಕಟ್ಟೆ ಆರಂಭಕ್ಕೆ ಮನವಿ ಮಾಡಿದರು. ನಗರ ಬೆಳೆದಿದ್ದು, ಜನಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ನಾಲ್ಕು ದಿಕ್ಕಿನಲ್ಲೂ ಮಾರುಕಟ್ಟೆ ಪ್ರಾಂಗಣ ನಿರ್ಮಿಸುವಂತೆ ಆಗ್ರಹಿಸಿದರು. ಆರಂಭ ಶೂರತ್ವ ಬೇಡ, ುಟ್‌ಪಾತ್ ಒತ್ತುವರಿ ತೆರವು ನಂತರ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂಬುದು ಜನರ ಒತ್ತಾಯವಾಗಿದೆ.
ಅರವಟಿಕೆ ಉಳಿಸಿದ್ದೇಕೆ..?
ತೆರವು ಕಾರ್ಯಾಚರಣೆಯಲ್ಲಿ ನಗರಸಭೆ ಸಿಬ್ಬಂದಿ ತಾರತಮ್ಯ ನೀತಿ ಅನುಸರಿಸಿದ್ದು ಕಂಡು ಬಂದಿದ್ದು, ಪ್ರಭಾವಿಗಳ ಅಂಗಡಿ ಬಿಟ್ಟಿದ್ದಕ್ಕೆ ದಲಿತ ಮುಖಂಡ ಹುಸೇನಪ್ಪ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಅವರನ್ನು ತರಾಟೆಗೆ ತೆಗೆದುಕೊಂಡರು. ಇನ್ನೂ ಸಿಬಿಎಸ್ ವೃತ್ತದಲ್ಲಿ ನೀರಿನ ಅರವಟಿಗೆ ನೆಪದಲ್ಲಿ ರಸ್ತೆ ಅತಿಕ್ರಮಿಸಿಕೊಂಡು ಟೆಂಟ್ ಹಾಕಿದ್ದು, ಇದುವರೆಗೂ ಅರವಟಿಗೆ ಆರಂಭವಾಗಿಲ್ಲ. ಆದರೂ ಟೆಂಟ್ ತೆರವುಗೊಳಿಸದೇ ಇರುವುದಕ್ಕೆ ಜನರು ಆಕ್ಷೇಪಿಸಿದರು. ನಗರದಲ್ಲಿ ನೀರಿನ ಅರವಟಿಗೆ ಮಾಫೀಯಾ ಹೆಚ್ಚಾಗಿದ್ದು, ಸ್ವಚ್ಛತೆಯಿಲ್ಲ, ಶುದ್ಧ ಕುಡಿವ ನೀರಿನ ವ್ಯವಸ್ಥೆಯಿಲ್ಲ. ಪ್ರಚಾರಕ್ಕಾಗಿ ಹಾಕಿಕೊಂಡ ಅರವಟಿಗೆಗಳನ್ನು ತೆರವುಗೊಳಿಸುವಂತೆ ಜನ ಒತ್ತಾಯಿಸಿದರು.
ರಸ್ತೆ ತುಂಬಾ ದುರಸ್ತಿ ಸಾಮಗ್ರಿ
ನಗರದ ಬಹುತೇಕ ರಸ್ತೆಗಳ ುಟ್‌ಪಾತ್ ಮೇಲೆ ದುರಸ್ತಿಗೊಂಡ ಟಿವಿ, ರೆಫ್ರಿಜಿರೇಟರ್, ಏರ್‌ಕೂಲರ್, ಏರ್‌ಕಂಡಿಷನರ್ ಸೇರಿ ಇತರ ಸಲಕರಣೆಗಳಿದ್ದರೂ ನಗರಸಭೆ ಸಿಬ್ಬಂದಿ ಗಮನಹರಿಸುತ್ತಿಲ್ಲ. ಇನ್ನೂ ಅಂಗಡಿ ಮಾಲೀಕರು ಕಟ್ಟಡ ತ್ಯಾಜ್ಯವನ್ನು ರಸ್ತೆಯಲ್ಲಿ ಹಾಕಿದ್ದರೂ ಕೇಳುವರಿಲ್ಲ. ಮಲ್ಲಿಕಾರ್ಜುನ ಮಠದಿಂದ ಜುಲಾಯಿನಗರದವರೆಗಿನ ುಟ್‌ಪಾತ್‌ನಲ್ಲಿ ಗುಜರಿ ಸಾಮಾನುಗಳಿದ್ದು, ಸಿಬ್ಬಂದಿ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ುಟ್‌ಪಾತ್ ಒತ್ತುವರಿ ತೆರವು ಜತೆಗೆ ಬೀದಿ ಬದಿ ವ್ಯಾಪಾರಿಗಳನ್ನು ಗುಂಡಮ್ಮ ಕ್ಯಾಂಪ್‌ಗೆ ಶ್‌ಟಿ ಮಾಡಲಾಗುತ್ತಿದೆ. ತಾರತಮ್ಯ ನೀತಿ ಅನುಸರಿಸದೇ ಒತ್ತುವರಿದಾರರ ವಿರುದ್ಧ ಕ್ರಮ ಗ್ಯಾರಂಟಿ.