ಗಂಗಾವತಿ ನಗರಸಭೆ ಮುಂಭಾಗದಲ್ಲಿ ುಟ್‌ಪಾತ್ ಒತ್ತುವರಿಮಾಡಿಕೊಂಡ ಅಂಗಡಿಕಾರರಿಗೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಖಡಕ್ ಸೂಚನೆ ನೀಡಿದರು. ವ್ಯವಸ್ಥಾಪಕ ಷಣ್ಮುಖ, ಆರೋಗ್ಯ ನಿರೀಕ್ಷಕ ಎ.ನಾಗರಾಜ್ ಇತರರಿದ್ದರು. 
ಕೊಪ್ಪಳ

ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಕೆ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಫುಟ್‌ಪಾತ್ ಅತಿಕ್ರಮಿಸಿಕೊಂಡವರಿಗೆ ನಗರಸಭೆ ಪೌರಾಯುಕ್ತ ಖಡಕ್ ಎಚ್ಚರಿಕೆ
ಗಂಗಾವತಿ: ನಗರದ ಪ್ರಮುಖ ರಸ್ತೆಯಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆಗೆ ನಗರಸಭೆ ಚಾಲನೆ ನೀಡಿದ್ದು, ಜ.1ರವರೆಗೆ ಮುಂದುವರಿಯಲಿದೆ.
ರಸ್ತೆ ಮತ್ತು ುಟ್‌ಪಾತ್ ಒತ್ತುವರಿ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ಕೇಳಿಬಂದಿತ್ತಲ್ಲದೇ, ಜನ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದ್ದರಿಂದ ನಗರಸಭೆ ಸಿಬ್ಬಂದಿ ಕಾರ್ಯಾಚರಣೆಗೆ ಮುಂದಾಗಿದ್ದು, ಬಸ್ ನಿಲ್ದಾಣ, ನೀಲಕಂಠೇಶ್ವರ ವೃತ್ತ ಮತ್ತು ಅಂಬೇಡ್ಕರ್ ವೃತ್ತದವರೆಗೆ ಒತ್ತುವರಿ ತೆರವು ಕಾರ್ಯ ನಡೆಸಿದರು.
ನಗರಸಭೆ ಮಳಿಗೆ ವ್ಯಾಪ್ತಿಯಲ್ಲೂ ುಟ್‌ಪಾತ್ ಒತ್ತುವರಿ ಕಂಡು ಬಂದಿದ್ದು, ಮಾಲೀಕರಿಗೆ ಮಳಿಗೆ ತೆರವುಗೊಳಿಸುವ ಎಚ್ಚರಿಕೆ ನೀಡಲಾಯಿತು. ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಸಂಚಾರಕ್ಕೆ ತೊಂದರೆಯಾಗುವ ರೀತಿಯಲ್ಲಿ ವಹಿವಾಟು ನಡೆಸುತ್ತಿದ್ದ ಬೀದಿ ಬದಿ ವ್ಯಾಪಾರಿಗಳಿಗೂ ಎಚ್ಚರಿಕೆ ನೀಡಿದ್ದು, ಬಂಡಿ ಸೇರಿ ವಹಿವಾಟು ವಸ್ತುಗಳನ್ನು ಜಪ್ತಿ ಮಾಡಲಾಯಿತು.
ಕ್ರಿಸ್‌ಮಸ್ ಹಬ್ಬ ರಜೆಯಿದ್ದರೂ ಸಿಬ್ಬಂದಿ ಹೈಅಲರ್ಟ್ ಆಗಿದ್ದು, ಜ.1ರವರೆಗೆ ತೆರವು ಕಾರ್ಯಾಚರಣೆ ಮುಂದುವರಿಯಲಿದೆ. ನಂತರ ದಿನಗಳಲ್ಲಿ ವಸ್ತುಗಳ ಮಟ್ಟುಗೋಲು, ದಂಡ ವಿಧಿಸುವುದು ಮತ್ತು ಪ್ರಕರಣ ದಾಖಲಿಸುವ ಕ್ರಮ ಕೈಗೊಳ್ಳುವ ಎಚ್ಚರಿಕೆ ವ್ಯಾಪಾರಿಗಳಿಗೆ ನೀಡಲಾಗಿದೆ.
ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಮಾತನಾಡಿ, ನಗರದ ಸೌಂದರೀಕರಣ ಮತ್ತು ಸುಗಮ ಸಂಚಾರಕ್ಕೆ ುಟ್‌ಪಾತ್ ಒತ್ತುವರಿ ತೆರವು ಅನಿವಾರ್ಯ. ಗುಂಡಮ್ಮ ಕ್ಯಾಂಪ್ ಸಿಟಿ ಮಾರುಕಟ್ಟೆ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಮಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಜನವರಿ ಮೊದಲ ವಾರದಲ್ಲಿ ಮಾರುಕಟ್ಟೆ ಆರಂಭಿಸಲು ಯೋಚಿಸಲಾಗಿದೆ ಎಂದರು.
ವ್ಯವಸ್ಥಾಪಕ ಷಣ್ಮುಖ, ಆರೋಗ್ಯ ನಿರೀಕ್ಷಕ ಎ.ನಾಗರಾಜ್, ನೈರ್ಮಲ್ಯ ನಿರೀಕ್ಷಕಿ ಶೋಭಾ ಅಂಗಡಿ, ವಿಷಯ ನಿರ್ವಾಹಕ ಬತ್ತಿ ಬಸವರಾಜ ಇತರರಿದ್ದರು.