ಕವಲೂರು ಗ್ರಾಮದ ಶ್ರೀಮತಿ ಗಿರಿಯಮ್ಮ ಪರಪ್ಪ ಹೆಬ್ಬಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮದಿನವನ್ನು ಶನಿವಾರ ಆಚರಿಸಲಾಯಿತು. ಮುಖ್ಯಶಿಕ್ಷಕ ಜಿ.ಎಸ್.ಗೌಡರ್, ಶಿಕ್ಷಕರಾದ ತೋಟಪ್ಪ ಮಟ್ಟಿ, ವೀರಯ್ಯ ವಂಟಗೋಡಿಮಠ, ಮಲ್ಲಪ್ಪ ದಳವಾಯಿ, ರಾಜಪ್ಪ ಎಂ, ಪ್ರಭು ಸುಂಕಣ್ಣವರ್, ದೇವಪ್ಪ ಮುಕ್ಕಣ್ಣವರ್, ಸುಶೀಲಮ್ಮ, ಮುಖಂಡ ಬಸಣ್ಣ ಹಳ್ಳಿಗುಡಿ ಇದ್ದರು. 
ಕೊಪ್ಪಳ

ತಾರತಮ್ಯಗಳಿಂದ ಮುಕ್ತರಾಗಲು ಪ್ರೋತ್ಸಾಹ

ಪ್ರಮುಖ ಮುಖ್ಯಾಂಶಗಳು

  • ಮುಖ್ಯಶಿಕ್ಷಕ ಜಿ.ಎಸ್.ಗೌಡರ್ ಹೇಳಿಕೆ
  • ಕವಲೂರು ಸಾವಿತ್ರಿಬಾಯಿ ಫುಲೆ ಜನ್ಮದಿನ
ಕವಲೂರು: ಸಾವಿತ್ರಿಬಾಯಿ ಫುಲೆ ಮಕ್ಕಳು ಭೂಮಿಯ ಮೇಲಿನ ನಕ್ಷತ್ರಗಳು ಎಂಬುದಾಗಿ ಕರೆದ ಮಾತೆ ಎಂದು ಮುಖ್ಯಶಿಕ್ಷಕ ಜಿ.ಎಸ್.ಗೌಡರ್ ಹೇಳಿದರು.
ಗ್ರಾಮದ ಶ್ರೀಮತಿ ಗಿರಿಯಮ್ಮ ಪರಪ್ಪ ಹೆಬ್ಬಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತಣಾಡಿದರು.
ಸಾವಿತ್ರಿಬಾಯಿ ಫುಲೆ ಮಹಿಳೆಯರ ಶಿಕ್ಷಣಕ್ಕಾಗಿ ಶ್ರಮಿಸಿದ ಕಾರ್ಯಕರ್ತೆಯಾಗಿದ್ದರು ಮತ್ತು ಸಾಮಾಜಿಕವಾಗಿ ತಾರತಮ್ಯಗಳಿಂದ ಮುಕ್ತರಾಗಲು ಶಿಕ್ಷಣವನ್ನು ಪಡೆಯಲು ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸಿದರು ಎಂದರು.