ಕೊಪ್ಪಳದ ಚಂದ್ರಪ್ಪ ಲೇಔಟ್‌ನಲ್ಲಿ ಮನೆಗಳ ಮುಂದೆ ಇರುವ ಚರಂಡಿಗಳು ತೆರೆದ ಸ್ಥಿತಿಯಲ್ಲಿದ್ದು ಪ್ಲಾಸ್ಟಿಕ್‌ನಿಂದ ತುಂಬಿದೆ.
- ಮನೆತ್ಯಾಜ್ಯ
- ಪ್ಲಾಸ್ಟಿಕ್
- ತ್ಯಾಜ್ಯ
ಕೊಪ್ಪಳ: ನಗರದಲ್ಲಿ ಖಾಲಿ ನಿವೇಶನಗಳು, ರಸ್ತೆ ಬದಿಗಳು ಹಾಗೂ ತೆರೆದ ಚರಂಡಿಗಳು ಕಸದ ತೊಟ್ಟಿಗಳಾಗಿ ವಾರ್ಪಡುತ್ತಿದ್ದು, ಸಾರ್ವಜನಿಕರು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ.
ನಗರದೆಲ್ಲೆಡೆ ಖಾಲಿ ಜಾಗ ಕಂಡರೆ ಸಾಕು, ಕೆಲವರು ಮನೆತ್ಯಾಜ್ಯ, ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದು ಪರಿಸರ ವಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಬಿ.ಟಿ. ಪಾಟೀಲ್ ನಗರದ ಪಾರ್ಕ್ ಹತ್ತಿರ ಹಾಗೂ ಪಾರ್ಕ್ ಒಳಭಾಗದಲ್ಲಿಯೇ ಕಸದ ರಾಶಿಗಳು ಸಂಗ್ರಹವಾಗಿದ್ದು, ವಿಶ್ರಾಂತಿಗಾಗಿ ನಿರ್ಮಿಸಿದ ಸ್ಥಳವೇ ಅಸಹ್ಯಕರವಾಗಿ ವಾರ್ಪಟ್ಟಿವೆ. ಇದೇ ರೀತಿಯ ಸ್ಥಿತಿ ಬಸ್ ನಿಲ್ದಾಣದ ಹಿಂದೆ ಇರುವ ಜಾಲಿ ಜಾಗ, ಬಸ್ ಡಿಪೋ ಪಕ್ಕದ ಪ್ರದೇಶ, ಪದಕಿ ಲೇಔಟ್, ಚಂದ್ರಪ್ಪ ಲೇಔಟ್, ಬನ್ನಿಕಟ್ಟಿ ಸೇರಿದಂತೆ ಹಲವು ಭಾಗಗಳಲ್ಲಿ ಕಂಡುಬರುತ್ತಿದೆ.
ಚಂದ್ರಪ್ಪ ಲೇಔಟ್‌ನಲ್ಲಿ ಮನೆಗಳ ಮುಂದೆ ಇರುವ ಚರಂಡಿಗಳು ತೆರೆದ ಸ್ಥಿತಿಯಲ್ಲಿದ್ದು, ಕೆಲವೆಡೆ ವಾತ್ರ ಮುಚ್ಚಲಾಗಿದೆ. ಚರಂಡಿಗಳಲ್ಲಿ ಕಸ ತುಂಬಿಕೊಂಡು ನೀರು ಸರಾಗವಾಗಿ ಹರಿಯದೆ ನಿಂತಿರುವುದರಿಂದ ದುರ್ವಾಸನೆ ವ್ಯಾಪಕವಾಗಿದೆ. ದದೆಗಲ್ ರಸ್ತೆಯ ರಾಜ್ ಕಾಲುವೆಗೆ ಟ್ರಾೃಕ್ಟರ್ ಮೂಲಕ ಮಣ್ಣು ಹಾಗೂ ಕಸ ಸುರಿಯುತ್ತಿರುವುದರಿಂದ ನೀರು ಮುಂದಕ್ಕೆ ಹೋಗುತ್ತಿಲ್ಲ.
ಮಳೆಗಾಲದಲ್ಲಿ ಈ ಸಮಸ್ಯೆ ಮತ್ತಷ್ಟು ತೀವ್ರವಾಗಲಿದ್ದು, ಕಸದ ದುರ್ವಾಸನೆ ಹೆಚ್ಚಾಗಿ ಸುತ್ತಲಿನ ನಿವಾಸಿಗಳಿಗೆ ತೊಂದರೆ ಉಂಟುವಾಡುತ್ತಿದೆ. ಜತೆಗೆ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಡೆಂೆ, ಮಲೇರಿಯಾ ಮುಂತಾದ ರೋಗಗಳ ಭೀತಿ ಹೆಚ್ಚಿದೆ. ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಆತಂಕ ವ್ಯಕ್ತವಾಗಿದೆ.
ಸಾರ್ವಜನಿಕರಲ್ಲಿಯೂ ಜವಾಬ್ದಾರಿ ಕೊರತೆ ಕಂಡುಬರುತ್ತಿದೆ. ತಮ್ಮ ಹಕ್ಕುಗಳಿಗಾಗಿ ಒತ್ತಾಯಿಸುವ ನಾಗರಿಕರು, ಮೂಲ ಕರ್ತವ್ಯಗಳಾದ ಸ್ವಚ್ಛತೆ ಕಾಯ್ದುಕೊಳ್ಳುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಖಾಲಿ ನಿವೇಶನಗಳ ವಾಲೀಕರು ತಮ್ಮ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಇತರರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ಅವರ ಕರ್ತವ್ಯವಾಗಿದೆ. ಅಲ್ಲದೆ, ಅಕ್ಕಪಕ್ಕದ ನಿವಾಸಿಗಳು ಖಾಲಿ ಜಾಗಗಳಲ್ಲಿ ಕಸ ಎಸೆಯುವುದನ್ನು ನಿಲ್ಲಿಸಿ ನಗರಸಭೆಯ ಪೌರ ಕಾರ್ಮಿಕರಿಗೆ ಸಹಕರಿಸಬೇಕಿದೆ.
ನಗರಸಭೆ ಕಸ ಸಂಗ್ರಹಣೆ ಕುರಿತು ಹೇಳಿಕೆ ನೀಡುತ್ತಿದ್ದರೂ, ಖಾಲಿ ಜಾಗಗಳಲ್ಲಿ ಕಸ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಜತೆಗೆ ನಾಗರಿಕರು ಮತ್ತು ಆಡಳಿತವು ಒಟ್ಟಾಗಿ ಕೆಲಸ ವಾಡಿದಾಗ ವಾತ್ರ ಕೊಪ್ಪಳವನ್ನು ಸ್ವಚ್ಛ ನಗರವನ್ನಾಗಿ ರೂಪಿಸಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
"
ನಗರದ ಖಾಲಿ ನಿವೇಶನಗಳ ಪಟ್ಟಿ ವಾಡಿ ಅದರ ವಾಲಿಕರಿಗೆ, ತಮ್ಮ ತಮ್ಮ ಜಾಗಗಳನ್ನು ಸ್ವಚ್ಛಗೊಳಿಸಲು ನೋಟಿಸ್ ನೀಡುತ್ತೇವೆ. ಅವರು ಸ್ವಚ್ಛ ವಾಡದಿದ್ದಲ್ಲಿ, ನಗರಸಭೆಯಿಂದ ಸ್ವಚ್ಛಗೊಳಿಸಿ ಅವರ ತೆರಿಗೆ ಪಾವತಿ ಜತೆಗೆ ಸ್ವಚ್ಛತೆಯ ಹಣವನ್ನು ಕಟ್ಟಿಸಿಕೊಳ್ಳಲು ಕ್ರಮ ವಹಿಸಲಾಗುವುದು. ಸರ್ಕಾರಿ ಖಾಲಿ ಜಾಗಗಳನ್ನು ಆದಷ್ಟು ಬೇಗನೆ ಸ್ವಚ್ಛಗೊಳಿಸಲು ಆದೇಶ ನೀಡಲಾಗುತ್ತದೆ.
— ಮಂಜುನಾಥ ಗುಂಡೂರ ಡಿಯುಡಿಸಿ ಪಿಡಿ, ಕೊಪ್ಪಳ
"
ಆರು ತಿಂಗಳಿಂದ ನಮ್ಮ ಕಾಲನಿ ಕಡೆ ಯಾರೂ ಗಮನಹರಿಸಿಲ್ಲ. ಖಾಲಿ ಜಾಗದ ಕಸ ತೆರವುಗೊಳಿಸಲು ಹೇಳಿದರೂ ಸ್ಪಂದನೆ ಇಲ್ಲ. ಮನೆ ಮುಂದಿನ ಗಟಾರ ಸ್ವಚ್ಛಗೊಳಿಸದೆ ಇರುವುದರಿಂದ ನಮ್ಮ ಆರೋಗ್ಯ ಹದಗೆಡುತ್ತಿದೆ.
— ಎಸ್.ಎಚ್. ಖಾದ್ರಿ ಚಂದ್ರಪ್ಪ ಲೇಔಟ್ ನಿವಾಸಿ, ಕೊಪ್ಪಳ