ತಾಲೂಕಿನ ಬಂಡಿಹರ್ಲಾಪುರದಲ್ಲಿ ಶಾಲಾ ಮಕ್ಕಳಿಗೆ ಹಮ್ಮಿಕೊಂಡಿದ್ದ ಋತುಚಕ್ರ ನೈರ್ಮಲ್ಯ ದಿನಾಚರಣೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಬಂಡಿಹರ್ಲಾಪುರ ಪಿಡಿಒ ಅಶೋಕ ರಾಂಪುರ ಉದ್ಘಾಟಿಸಿದರು. ಜಿಪಂ ಹೈಜಿನ್​ ಸಮಾಲೋಚಕಿ ಬಸಮ್ಮ ಹುಡೇದ, ತಮ್ಮಣ್ಣ, ಕಲ್ಪನಾ, ಪುಷ್ಪಾ, ನಾಗಪ್ಪ ಕುರುಬಡಗಿ ಇದ್ದರು. 
ಕೊಪ್ಪಳ

ಮುಟ್ಟಿನ ವೇಳೆ ಸ್ಯಾನಿಟೆರಿ ಪ್ಯಾಡ್​ ಬಳಕೆಗೆ ಒತ್ತು ನೀಡಿ

ಪ್ರಮುಖ ಮುಖ್ಯಾಂಶಗಳು

  • ಬಸಮ್ಮ ಹುಡೇದ ಸಲಹೆ
ಕೊಪ್ಪಳ : ಪ್ರತಿಯೊಬ್ಬ ಮಹಿಳೆ ಮಾಸಿಕ ಋತುಚಕ್ರ ಸಂದರ್ಭದಲ್ಲಿ ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಿ ಸ್ಯಾನಿಟೆರಿ ಪ್ಯಾಡ್​ ಬಳಕೆ ಮಾಡಿ ಎಂದು ಜಿಪಂ ಹೈಜಿನ್​ ಸಮಾಲೋಚಕಿ ಬಸಮ್ಮ ಹುಡೇದ ಸಲಹೆ ನೀಡಿದರು.
ತಾಲೂಕಿನ ಬಂಡಿಹರ್ಲಾಪುರ ಗ್ರಾಂಪಂನಿಂದ ಮಂಗಳವಾರ ಪಂಚಾಯತ್​ ಆವರಣದಲ್ಲಿ ಶಾಲಾ ಮಕ್ಕಳಿಗೆ ಹಮ್ಮಿಕೊಂಡಿದ್ದ ಋತುಚಕ್ರ ನೈರ್ಮಲ್ಯ ದಿನಾಚರಣೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಟ್ಟಿನ ಸಮಯದಲ್ಲಿ ಶುಚಿಯಾದ ಬಟ್ಟೆ ಬಳಕೆ ಹಾಗು ಸ್ಯಾನಿಟೆರಿ ಪ್ಯಾಡ್​ ಬಳಕೆಯಿಂದ ಆಗುವ ಅನುಕೂಲಗಳು, ವೈಯಕ್ತಿಕ ಶುಚಿತ್ವ ಕುರಿತು ಮಹತ್ವದ ಮಾಹಿತಿ ನೀಡಿ.ಇತ್ತೀಚಿನ ದಿನಗಳಲ್ಲಿ ನಾವು ಆರೋಗ್ಯದ ಬಗ್ಗೆ ನಾವು ಕಾಳಜಿವಹಿಸದೇ ಇರುವದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದೆವೆ. ಮುಟ್ಟನ್ನು ಗುಟ್ಟನ್ನಾಗಿಸದೇ ಮುಟ್ಟನ್ನು ಒಗ್ಗೂಡಿಕೊಂಡು ಆರೋಗ್ಯದ ಬದಲಾವಣೆಗೆ ಮುನ್ನುಡಿ ಬರೆಯೋಣ ಎಂದರು.
ಬಳಸಿದ ಸ್ಯಾನಿಟೆರಿ ಪ್ಯಾಡ್​ ಗಳನ್ನು ಎಲ್ಲಿ ಬೇಕಾದಲ್ಲಿ ಬಿಸಾಡದೇ ಗ್ರಾಂಪಂ ವಾಹನಕ್ಕೆ ನೀಡಬೇಕು ಅಥವಾ ನಿಗದಿಪಡಿಸಿದ ಸ್ಥಳದಲ್ಲಿ ಅವುಗಳನ್ನು ವಿಲೆವಾರಿ ಮಾಡಬೇಕು. ಬಯಲು ಶೌಚಕ್ಕೆ ಹೋಗುವದರಿಂದ ಅನೇಕ ರೋಗಗಳು ಹರಡುವ ಸಾಧ್ಯತೆ ಇದೆ. ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕಿಸಿ ವಾಹನಕ್ಕೆ ನೀಡಬೇಕೆಂದು ಹೇಳಿದರು.
ಬಂಡಿಹರ್ಲಾಪುರ ಪಿಡಿಒ ಅಶೋಕ ರಾಂಪುರ ಮಾತನಾಡಿ, ಮಹಿಳೆಯರಿಗೆ ವೈಯಕ್ತಿಕ ಶುಚಿತ್ವ ಎನ್ನುವದು ಆರೋಗ್ಯದ ಮೂಲಕ ಬುನಾದಿ. ಹಾಗಾಗಿ ಮಹಿಳೆಯರು ಸ್ವಚ್ಛತೆಗೆ, ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಇಂದಿನ ಒತ್ತಡದ ಜೀವನದಲ್ಲಿ ನಾವುಗಳು ಬದುಕುತ್ತಿದ್ದು, ಆರೋಗ್ಯದ ಸಲಹೆಗಳನ್ನು ಅಳವಡಿಸಿಕೊಂಡಲ್ಲಿ ಸುಂದರ ಬದುಕನ್ನು ಸಾಗಿಸಲು ಅನುಕೂಲವಾಗುತ್ತದೆ ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ತಮ್ಮಣ್ಣ, ಕಲ್ಪನಾ, ಕೆಎಚ್ಪಿಟಿ ಸಂಯೋಜಕಿ ಪುಷ್ಪಾ, ಗ್ರಾಂಪಂ ಕಾರ್ಯದರ್ಶಿ ನಾಗಪ್ಪ ಕುರುಬಡಗಿ ಇತರರಿದ್ದರು.